ಪ್ರತಿಭಾ ಪುರಸ್ಕಾರಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ

KannadaprabhaNewsNetwork | Published : Jul 16, 2024 12:36 AM

ಸಾರಾಂಶ

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಇತರರು ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಔಷಧ ವ್ಯಾಪಾಸ್ಥರ ಸಂಘದ ಮಹಾವೀರ ಹೊಸಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಇತರರು ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಔಷಧ ವ್ಯಾಪಾಸ್ಥರ ಸಂಘದ ಮಹಾವೀರ ಹೊಸಮನಿ ಹೇಳಿದರು.

ಪಟ್ಟಣದ ಮಹಾವೀರ ಫಾರ್ಮಾದಲ್ಲಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಸಾಧಕರಿದ್ದು, ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.ಬಿ.ಎಲ್.ಡಿ.ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಉಪನ್ಯಾಸಕ ಮಹಾಂತೇಶ ಕವಟೇಕರ ಮಾತನಾಡಿ, ತರಗತಿ ಕೊಠಡಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಬೋಧನೆ ಮಾಡುತ್ತಾರೆ. ಆದರೆ, ಕೆಲವೇ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ. ತರಗತಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳುವುದರೊಂದಿಗೆ ಪಠ್ಯಪುಸ್ತಕವನ್ನು ಆಸಕ್ತಿಯಿಂದ ಆತ್ಮವಿಶ್ವಾಸದೊಂದಿಗೆ ಓದುವುದರಿಂದ ಪ್ರತಿಯೊಬ್ಬರೂ ಸಾಧನೆ ಮಾಡಬಹುದು ಎಂದು ತಿಳಿಸಿದರು.ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಯಳಮೇಲಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಘಟಕದ ಅಧ್ಯಕ್ಷ ಪ್ರಭು ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾದಶೇಖರ ತೇಲಿ, ಲಕ್ಷ್ಮಣ ಬಿರಾದಾರ, ಎಂ.ಕೆ.ಮಠ, ಅಶೋಕ ಮುಳವಾಡ, ಎನ್.ಸಿ.ಬೇವನೂರ, ಗುರು ಸಾರಂಗಮಠ, ರುದ್ರಗೌಡ ಪಾಟೀಲ, ಶ್ರೀಕಾಂತ ಕೋರಿ ಇತರರು ಇದ್ದರು.

ಆದಿನಾಥ ಉಪಾಧ್ಯೆ ಸ್ವಾಗತಿಸಿ, ನಿರೂಪಿಸಿದರು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಾದ ಮೊದಲ ರ್‍ಯಾಂಕ್‌ ಪಡೆದ ಅಕ್ಷತಾ ಮನಗೂಳಿ, 7ನೇ ರ್‍ಯಾಂಕ್‌ ಪಡೆದ ಪವಿತ್ರಾ ನಿಡಗುಂದಿ, 8ನೇ ರ್‍ಯಾಂಕ್‌ ಪಡೆದ ಲಕ್ಷ್ಮೀ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಇತರರು ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಸಾಕಷ್ಟು ಸಾಧಕರಿದ್ದು, ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು.

-ಮಹಾವೀರ ಹೊಸಮನಿ, ತಾಲೂಕು ಔಷಧ ವ್ಯಾಪಾಸ್ಥರ ಸಂಘ.

Share this article