ಕ್ರೀಡೆಗಳಿಂದ ಪ್ರತಿಭೆಗಳ ಗುರುತಿಸುವ ಕಾರ್ಯ ಮೆಚ್ಚುವಂತದ್ದು: ಕೆ.ವಿ.ಅರುಣ್ ಕುಮಾರ್

KannadaprabhaNewsNetwork |  
Published : May 18, 2024, 12:31 AM IST
17ಕೆಎಂಎನ್ ಡಿ22 | Kannada Prabha

ಸಾರಾಂಶ

ಯುವಕರು ಸಂಘಟನೆಗಾಗಿ ಕ್ರೀಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಿ ನೇಕಾರ ಯುವಕರು ಕಡ್ಡಾಯವಾಗಿ ಶಿಕ್ಷಣವನ್ನು ಭವಿಷ್ಯದ ಅಸ್ತ್ರವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಬೇಕು. ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಇದೆ. ಸಂಘಟಿತರಾಗಿ ಯುವಕರು ಉತ್ತಮ ಕೆಲಸ ಮಾಡಲು ಮುಂದಾಗಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳನ್ನು ಆಯೋಜಿಸಿ ಪ್ರತಿಭೆಗಳ ಗುರುತಿಸುವ ಕಾರ್ಯ ಮೆಚ್ಚುವಂತದ್ದಾಗಿದೆ ಎಂದು ಮುಖಂಡ ಕೆ.ವಿ.ಅರುಣ್ ಕುಮಾರ್ ಹೇಳಿದರು.ಪಟ್ಟಣದ ಕೆಪಿಎಸ್ ಮೈದಾನದಲ್ಲಿ ರಾಯಲ್‌ಶೆಟ್ಟಿ ನೇಕಾರ ಕ್ರಿಕೆರ್ಟ್ಸ್ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಪ್ರತಿಭೆಯ ಕಣಜವಾಗಿದ್ದ ಕುರುಹಿನಶೆಟ್ಟಿ ಸಮಾಜ ಇಂದು ಬದುಕು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮುದಾಯದ ಯುವಕರು ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರಲು ಮುಂದಾಗಬೇಕು. ಸಮಾಜದ ಸಂಘಟನೆಗೆ ಇಂತಹ ಕ್ರೀಡೆಗಳು ಸಹಕಾರಿಯಾಗಲಿವೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾ ಸಾಹಸಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಈ ಹಿಂದೆ ಪಟ್ಟಣದಲ್ಲಿ ನೇಕಾರ ಸಮಾಜ ಜನಸಂಖ್ಯೆ ಬಲುದೊಡ್ಡದಿತ್ತು. ಇಂದು ಬದುಕು ಕಟ್ಟಿಕೊಳ್ಳಲು ನೇಕಾರಿಕೆ ನಂಬಿದ ಜನತೆಗೆ ಕಷ್ಟವಾಗಿದೆ. ಪರಿಣಾಮ ಜೀವನಕ್ಕಾಗಿ ಬದುಕು ಕಟ್ಟಿಕೊಳ್ಳಲು ಬಹುತೇಕ ಉದ್ಯೋಗ ಹರಿಸಿ ನಗರ ಪ್ರದೇಶಕ್ಕೆ ಹೋಗಿದ್ದಾರೆ ಎಂದರು.

ಯುವಕರು ಸಂಘಟನೆಗಾಗಿ ಕ್ರೀಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಿ ನೇಕಾರ ಯುವಕರು ಕಡ್ಡಾಯವಾಗಿ ಶಿಕ್ಷಣವನ್ನು ಭವಿಷ್ಯದ ಅಸ್ತ್ರವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಬೇಕು. ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಇದೆ. ಸಂಘಟಿತರಾಗಿ ಯುವಕರು ಉತ್ತಮ ಕೆಲಸ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.

ಬಿಬಿಎಂಪಿ ನಿವೃತ್ತ ಅಧಿಕಾರಿ ಬಂಗಾರಶೆಟ್ಟಿ ಮಾತನಾಡಿ, ಕೆಳಸ್ತರದ ಯುವಕರು ಮುಖ್ಯವಾಹಿನಿಗೆ ಬರಲು ಕಠಿಣ ಶ್ರಮ ಅಗತ್ಯವಿದೆ. ಪ್ರತಿಭಾನ್ವಿತರಿಗೆ ಸದಾತನ್ನ ಸಹಕಾರವಿದೆ ಎಂದು ಭರವಸೆ ನೀಡಿದರು.

ಬೆಂಗಳೂರು, ಮೈಸೂರು, ಹಾಸನ, ಗದಗ್, ದಾವಣಗೆರೆ, ಹೊಸಪೇಟೆ, ಹೊಸಹೊಳಲು, ಬಸವಾಪಟ್ಟಣ ಸೇರಿದಂತೆ ವಿವಿಧಗ್ರಾಮ, ಜಿಲ್ಲೆಗಳಿಂದ 20ಕ್ಕೂ ಹೆಚ್ಚು ಕ್ರೀಡಾತಂಡಗಳು ಆಗಮಿಸಿದ್ದವು. ನೇಕಾರ ಸಮಾಜದ ಕ್ರೀಡಾಪಟುಗಳು ಪರಸ್ಪರ ಪರಿಚಯ ಮಾಡಿಕೊಂಡು ಖುಷಿಪಟ್ಟರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನು ಕಲೆಹಾಕುವ ಕೆಲಸ ಮಾಡುತ್ತಿರುವ ಪ್ರಯೋಜಕರ ಶ್ರಮಕ್ಕೆ ಪ್ರಶಂಸಿದರು.

ಈ ವೇಳೆ ಮುಖಂಡರಾದ ಬಂಗಾರಶೆಟ್ಟಿ, ಕೆ.ಜಿ.ಪುಟ್ಟರಾಜು, ಕೆ.ಆರ್.ರಾಜೇಶ್, ಗೋವಿಂದಶೆಟ್ಟಿ, ದಯಾನಂದ್, ಹರಳಹಳ್ಳಿ ವಿಶ್ವನಾಥ್, ಸಣ್ಣಪ್ಪ ಹಾಜರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ