ಪ್ರತಿಭಾವಂತರೇ ದೇಶದ ನಿಜವಾದ ಸಂಪತ್ತು

KannadaprabhaNewsNetwork |  
Published : Jul 21, 2025, 01:30 AM IST
ಪೋಟೋ, 20ಎಚ್‌ಎಸ್‌ಡಿ11: ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ  ವೀರಶೈವ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ದೇಶದ ಸಂಪತ್ತು ಕಟ್ಟಡ, ಹಣ, ಅದಿರುಗಳಲ್ಲ ಪ್ರತಿಭಾವಂತರೇ ದೇಶದ ನಿಜವಾದ ಸಂಪತ್ತು, ಅಂತಹ ಸಂಪತ್ತು ಬೇರೆ ದೇಶದ ಪಾಲಾಗುತ್ತಿರುವುದು ವಿಷಾದನೀಯ ಎಂದು ದಾವಣಗೆರೆ ವಿರಕ್ತ ಮಠದ ಪೀಠಾಧ್ಯಕ್ಷ ಡಾ.ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.90ಗಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವೀರಶೈವ-ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಪ್ರತಿಭೆ ಎಂಬುದು ಯಾರೋಬ್ಬರ ಸೊತ್ತಲ್ಲ ಅದು ಸಾಧಕರ ಸೊತ್ತು, ಪ್ರತಿಭೆಗೆ ಯಾವುದೇ ಜಾತಿ, ಧರ್ಮ ಇಲ್ಲ, ಸತತ ಅಭ್ಯಾಸ, ಪರಿಶ್ರಮದ ಮೂಲಕ ಪ್ರತಿಭೆ ಗಳಿಸಬಹುದಾಗಿದೆ. ಪ್ರತಿಭಾವಂತರು ನಮ್ಮ ದೇಶದಲ್ಲಿ ಚನ್ನಾಗಿ ಓದಿ ಉತ್ತಮವಾದ ಅಂಕಗಳನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರ ದೇಶಗಳಿಗೆ ಹೋಗುತ್ತಾರೆ ಆದರೆ ಅಲ್ಲಿಂದ ವಾಪಾಸ್ಸು ಬರುವುದಿಲ್ಲ. ಇದರಿಂದ ನಮ್ಮ ದೇಶದ ಪ್ರತಿಭೆ ಬೇರೆ ದೇಶದ ಪಾಲಾಗುತ್ತಿವೆ ಇದರಿಂದ ತಾವು ಕಲಿತ ದೇಶ ಯಾವ ರೀತಿ ಪ್ರಗತಿಯನ್ನು ಹೊಂದಲು ಸಾಧ್ಯ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಇರಬೇಕು ಆಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯವಿದೆ ಎಂದರು.

ನಮ್ಮ ದೇಶದ ಪ್ರತಿಭಾವಂತರು ಉತ್ತಮವಾದ ಸಾಧನೆ ಮಾಡಿದ್ದಾರೆ ಇದರಿಂದ ಪ್ರಪಂಚ ಇಂದು ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ವಿದೇಶದಲ್ಲಿ ನೆಲಸಿರುವ ಪ್ರತಿಭಾವಂತರು ನಮ್ಮ ದೇಶದವರಾಗಿದ್ದಾರೆ. ಭಾರತೀಯರು ತಮ್ಮ ಪ್ರತಿಭೆಯ ಮೂಲಕ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಇಂದಿನ ನಮ್ಮ ಯುವ ಪ್ರತಿಭೆಗಳು ಭಾರತವನ್ನು ಬಿಟ್ಟು ಹೋಗದೇ ನಮ್ಮಲ್ಲಿಯೇ ಇದ್ದು ನಮ್ಮ ದೇಶಕ್ಕೆ ಸಮಾಜಕ್ಕೆ ಕೀರ್ತಿಯನ್ನು ತರುವಂತ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಪ್ರತಿಭೆಗಳು ನಿರ್ಧಿಷ್ಟ ಸಮುದಾಯ ಸೊತ್ತಲ್ಲ ರಾಷ್ಟ್ರದ ಸೊತ್ತು ಇಂದಿನ ಮಕ್ಕಳಿಗೆ ಎಲ್ಲಾ ರೀತಿಯಾದ ಸೌಲಭ್ಯಗಳು ಬೆರಳಿನ ತುದಿಯಲ್ಲಿಯೇ ದೊರಕುತ್ತಿದೆ ನಿಮ್ಮ ತಂದೆ, ತಾತರವರ ಕಾಲದಲ್ಲಿ ಈ ರೀತಿಯಾದ ಸೌಲಭ್ಯ ಇರಲಿಲ್ಲ ಮನೆ, ಹೊಲದ ಕೆಲಸವನ್ನು ಮಾಡುತ್ತಾ ಶಿಕ್ಷಣವನ್ನು ಪಡೆಯಬೇಕಿತ್ತು. ಇಂದಿನ ದಿನಮಾನದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಿ ಸಮಾಜ ಇದೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯಾದ ಸನ್ಮಾನ ಮಾಡುತ್ತಿರಲಿಲ್ಲ, ನಿಮ್ಮ ಪೋಷಕರು ಸಹಾ ಸನ್ಮಾನವನ್ನು ಪಡೆದಿಲ್ಲ, ಅವರಿಗೆ ಶಿಕ್ಷಣಕ್ಕಿಂತ ಹಸಿವನ್ನು ನೀಗಿಸುವ ಕಾರ್ಯ ಹೆಚ್ಚಾಗಿತ್ತು ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇವೆ. ಅವುಗಳನ್ನು ಬಳಕೆಮಾಡಿಕೊಂಡು ನೀವುಗಳು ಸತತವಾದ ಪರಿಶ್ರಮ ಪ್ರಯತ್ನ ಮಾಡುವುದರ ಮೂಲಕ ಪ್ರಗತಿ ಸಾಧಿಸಬೇಕಿದೆ. ಈಗ ಜಗತ್ತನ್ನು ತಿಳಿಯಲು ಬೇರೆ ಕಡೆ ಹೋಗುವ ಅಗತ್ಯ ಇಲ್ಲ. ಎಲ್ಲವನ್ನು ನಿಮ್ಮ ತುದಿ ಬೆರಳಿನಲ್ಲಿಯೇ ಪಡೆಯಬಹುದಾಗಿದೆ ಅಷ್ಟೊಂದು ಮಟ್ಟದಲ್ಲಿ ತಂತ್ರಜ್ಞಾನ ಹೆಚ್ಚಿದೆ. ಇಂದಿನ ಶಾಲಾ–ಕಾಲೇಜುಗಳು ಪ್ರಮಾಣ ಪತ್ರವನ್ನು ನೀಡುವ ಕೇಂದ್ರಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ವಹಿಸಿದ್ದರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಗಂಗಾಧರ ಪಿ.ಎಸ್. ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಸಮಾಜದ ನಿರ್ದೆಶಕರಾದ ಪಟೇಲ್ ಶಿವಕುಮಾರ್, ಸಿದ್ದವ್ವನಹಳ್ಳಿ ಪರಮೇಶ್, ಕೆ.ಎನ್.ವಿಶ್ವನಾಥಯ್ಯ, ಡಿ.ಎಸ್.ಮಲ್ಲಿಕಾರ್ಜನ್, ಎಂ.ಸಿದ್ದಪ್ಪ ಪಿ.ಪಿಳ್ಳೆಕೇರನ ಹಳ್ಳಿ, ಎಸ್.ವಿ.ನಾಗರಾಜಪ್ಪ, ಶ್ರೀಮತಿ ಟಿ.ಕೆ.ಲತಾ ಉಮೇಶ್, ಜಿ.ಎಂ.ಪ್ರಕಾಶ್, ಎಸ್.ವಿ.ಸಿದ್ದಪ್ಪ ಜ್ಞಾನಮೂರ್ತಿ ಭಾಗವಹಿಸಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ