ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಅಗತ್ಯ: ಡಾ. ವಿಘ್ನೇಶ್ವರ ಗಾಂವ್ಕರ

KannadaprabhaNewsNetwork |  
Published : Nov 21, 2025, 02:30 AM IST
ಫೋಟೋ ನ.೧೮ ವೈ.ಎಲ್.ಪಿ. ೦೪  | Kannada Prabha

ಸಾರಾಂಶ

ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಅವರಿಗೆ ಒಂದು ವೇದಿಕೆಯ ಅಗತ್ಯವಿದೆ.

ಸಿಇಟಿ, ನೀಟ್ ಪರೀಕ್ಷಾ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಮೂಹದ ನಿರ್ದೇಶಕ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಅವರಿಗೆ ಒಂದು ವೇದಿಕೆಯ ಅಗತ್ಯವಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ನಿರ್ದೇಶಕ ಡಾ. ವಿಘ್ನೇಶ್ವರ ಗಾಂವ್ಕರ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಿಇಟಿ, ನೀಟ್ ಪರೀಕ್ಷಾ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಳೀಯವಾಗಿ ಇಂತಹ ತರಬೇತಿಗಳ ಕೊರತೆಗಳು ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ತರಬಾರದು ಎನ್ನುವ ಉದ್ದೇಶಕ್ಕೆ ಈ ತರಗತಿಗಳನ್ನು ಆರಂಭಿಸಲಾಗಿದೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ ಎಂದರು.

ಸಿಇಟಿ ಮತ್ತು ನೀಟ್ ಕಾರ್ಯಕ್ರಮದ ಸಂಯೋಜಕ ಆರೋಗ್ಯ ಸ್ವಾಮಿ ಮಾತನಾಡಿ, ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಮಾತಿದೆ. ಇಂದು ಓದಿನ ಜೊತೆ ಬುದ್ಧಿ ಕೂಡಾ ಮುಖ್ಯ. ಈ ಸಂಸ್ಥೆಯು ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಕುರಿತು ವಿಶೇಷ ಕಳಕಳಿ ಇರುವ ಸಂಸ್ಥೆಯಾಗಿದೆ. ಈ ತರಬೇತಿಯ ಪ್ರಯೋಜನಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳಬೇಕು. ಇಂತಹ ತರಬೇತಿಗಳನ್ನು ಪಡೆದುಕೊಳ್ಳಲು ಇಂದು ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಆದ್ದರಿಂದ ಇದರ ಉಪಯೋಗವನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದರು.

ಈ ಸಂದರ್ಭ ಕ್ವಾಂಟಮ್ ಕ್ವೆಸ್ಟ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ಡಾ. ಸಂತೋಷ್ ಕುಮಾರ್ ಎಂ., ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ್ ಸ್ವಾಗತಿಸಿದರು. ಉಪನ್ಯಾಸಕ ವಿನಾಯಕ ಭಟ್ಟ ನಿರ್ವಹಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಕಾವ್ಯಾ ಹೆಗಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ
ಇ-ಆಫೀಸ್ ಬಳಕೆ ರಾಜ್ಯದಲ್ಲೇ ಕಲಬುರಗಿ ನಂಬರ್-1