ಕನಸುಗಳೊಂದಿಗೆ ಮರೆಯಾದ ತಾಳಿಕೋಟಿ

KannadaprabhaNewsNetwork |  
Published : Oct 14, 2025, 01:01 AM IST
4456 | Kannada Prabha

ಸಾರಾಂಶ

2024 ಆ. 16ರಂದು ಧಾರವಾಡ ರಂಗಾಯಣ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜು ತಾಳಿಕೋಟಿ ಅವರಲ್ಲಿ ರಂಗಾಯಣವನ್ನು ಉನ್ನತ ಮಟ್ಟದಲ್ಲಿ ಕಾಣುವ ಅಭಿಲಾಸೆ ಇತ್ತು. ಆದರೆ, ಅಷ್ಟರೊಳಗಾಗಿ ಅವರ ಬಣ್ಣದ ಬದುಕು ಮುಗಿದಿದೆ.

ಧಾರವಾಡ:

ಉತ್ತರ ಕರ್ನಾಟಕದ ಗಡಸು ಧ್ವನಿ, ಭಾಷೆ ಮೂಲಕ ಚಿರಪರಿಚಿತರಾಗಿದ್ದ ಹಾಸ್ಯ ಕಲಾವಿದ ರಾಜು ತಾಳಿಕೋಟಿ, ಧಾರವಾಡ ರಂಗಾಯಣದಲ್ಲಿ ಬಿತ್ತಿ ಬೆಳೆಯಬೇಕಿದ್ದ ರಂಗ ಕಲೆಯ ಅನೇಕ ಕನಸುಗಳೊಂದಿಗೆ ಪರದೆಯ ಹಿಂದೆ ಮರೆಯಾಗಿದ್ದಾರೆ.

2024 ಆ. 16ರಂದು ಧಾರವಾಡ ರಂಗಾಯಣ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜು ತಾಳಿಕೋಟಿ ಅವರಲ್ಲಿ ರಂಗಾಯಣವನ್ನು ಉನ್ನತ ಮಟ್ಟದಲ್ಲಿ ಕಾಣುವ ಅಭಿಲಾಸೆ ಇತ್ತು. ಆದರೆ, ಅಷ್ಟರೊಳಗಾಗಿ ಅವರ ಬಣ್ಣದ ಬದುಕು ಮುಗಿದಿದೆ.

ಕಂದಗಲ್ ಹನುಮಂತರಾಯ ಹಾಗೂ ಅಮೀರಬಾಯಿ ಕರ್ನಾಟಕಿ ಅವರ ಎಲ್ಲ ನಾಟಕಗಳ ಪ್ರದರ್ಶನಕ್ಕೆ ತಾಳಿಕೋಟೆ ತಯಾರಿ ಮಾಡಿಕೊಂಡಿದ್ದರು. ಇದಕ್ಕೂ ಮುಂಚೆ ಶಾಂತ ಕವಿಗಳ ನಾಟಕೋತ್ಸವ ಮಾಡಿದ್ದರು. ಗ್ವಾಲೆ ಮತವಾಲೆ ಹಿಂದಿ ನಾಟಕ ಪ್ರದರ್ಶನ, ಧಾರವಾಡ ಕಾರಾಗೃಹದಲ್ಲಿ ಕೈದಿಗಳಿಂದ ತಲೆದಂಡ ನಾಟಕ ಪ್ರದರ್ಶನವನ್ನು ರಂಗಾಯಣದಿಂದ ಮಾಡಿದ ಕೀರ್ತಿ ತಾಳಿಕೋಟಿ ಅವರಿಗೆ ಸಲ್ಲುತ್ತದೆ.

ಧಾರವಾಡಕ್ಕೆ ಬಂದ ನಂತರ ಅವರು ಇಲ್ಲಿಯೇ ಜಮೀನು ಮಾಡಿಕೊಂಡು ಕೃಷಿ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು.

ರಂಗಾಯಣಕ್ಕೆ ಸರ್ಕಾರದ ಅನುದಾನ ಕೊರತೆ ಇದ್ದರೂ ತಾತ್ಕಾಲಿಕ ರೆಪರ್ಟರಿ ಕಟ್ಟಿ ಕೆಲ ನಾಟಕಗಳನ್ನು ತಯಾರಿ ಮಾಡಿದ್ದರು. ಸ್ಥಳೀಯ ಕಲಾವಿದರೊಂದಿಗೆ ಆತ್ಮೀಯತೆಯಿಂದ ರಂಗಾಯಣ ಮುನ್ನಡೆಸುತ್ತಿದ್ದರು. ರಂಗಾಯಣದಲ್ಲಿ ಅಂತಿಮ ದರ್ಶನ...

ಧಾರವಾಡ ರಂಗಾಯಣದ ಆವರಣದಲ್ಲಿ ಡಾ. ರಾಜು ತಾಳಿಕೋಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಗ್ಗೆ 7ರಿಂದ 8 ಗಂಟೆ ವರೆಗೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಧಾರವಾಡ ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಧಾರವಾರ ರಂಗಾಯಣಕ್ಕೆ ನಿರ್ದೇಶಕರಾದ ಬಳಿಕ ರಾಜು ತಾಳಿಕೋಟಿ ಅವರು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಮಕ್ಕಳಿಗೆ ರಂಗಗೀತೆ ಸೇರಿ ಕಾರಂತರ ಬಗ್ಗೆ ಹೇಳುವ ಕಾರ್ಯ ಮಾಡಿದ್ದರು. ಶೂಟಿಂಗ್ ಇದೆ ಉಡುಪಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ.ವಿಶ್ವೇಶ್ವರಿ ಹಿರೇಮಠ, ರಂಗಕರ್ಮಿ

ರಾಜು ತಾಳಿಕೋಟಿ ಅವರಿಗೆ ಧಾರವಾಡದ ರಂಗಾಯಣದಲ್ಲಿ ಕೆಲವು ನಾಟಕ ಮಾಡಬೇಕೆನ್ನೋ ಮನಸ್ಸಿತ್ತು. ನನಗೆ ರಂಗಭೂಮಿಯೇ ಎಲ್ಲವನ್ನು ನೀಡಿದೆ. ನನಗೆ ಯಾವ ಆಸೆಯೂ ಇಲ್ಲ ಅನ್ನುತ್ತಿದ್ದರು. ಇದೀಗ ಅವರಿಲ್ಲದೆ ರಂಗಭೂಮಿ ಬಡವಾಗಿದೆ.ಪ್ರಭು ಹಂಚಿನಾಳ, ರಂಗಕರ್ಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!