ಕಲಘಟಗಿ: ಪಟ್ಟಣದ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪ್ರಭಾಕರ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ತಾಲೂಕು ಚುಟುಕು ಪರಿಷತ್ ವತಿಯಿಂದ ಪತ್ರಕರ್ತ ಪ್ರಭಾಕರ ನಾಯ್ಕ ಅವರ ಮನೆಗೆ ತೆರಳಿ ಸರ್ವಾಧ್ಯಕ್ಷರನ್ನು ಸನ್ಮಾನಿಸಿ ಆಮಂತ್ರಿಸಲಾಯಿತು.
ನಂತರ ಮಾತನಾಡಿದ ತಾಲೂಕು ಚುಟುಕು ಪರಿಷತ್ ಅಧ್ಯಕ್ಷ ವೀರಣ್ಣ ಕುಬಸದ ಹಾಗೂ ಜಾನಪದ ಕಲಾವಿದ ಮಲ್ಲಯ್ಯ ತೋಟಗಂಟಿ, ಹಿರಿಯ ಪತ್ರಕರ್ತ ಪ್ರಭಾಕರ ನಾಯ್ಕ ಅವರು ಪಟ್ಟಣದಲ್ಲಿ ನಡೆಯುತ್ತಿರುವ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಸಮಾರಂಭಕ್ಕೆ ವಿಶೇಷ ಕಳೆ ಬಂದಂತಾಗಿದೆ. ಸುದೀರ್ಘ ೩೪ ವರ್ಷಗಳಿಂದಲೂ ಕಲಘಟಗಿ ತಾಲೂಕಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಏಪ್ರಿಲ್ ೫ರಂದು ಬೆಳಗ್ಗೆ ಕುಂಭಮೇಳ ಹಾಗೂ ಡೊಳ್ಳು, ಕರಡಿ ಮಜಲು, ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಗಲ್ಲಿಗಳಲ್ಲಿ ಭವ್ಯ ಮೆರವಣಿಗೆ ಮುಖಾಂತರ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಶಿಕ್ಷಕರಾದ ಶಿವಾನಂದ್ ಚಿಕ್ಕನರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಈರಣ್ಣ ಕುಬಸದ, ಸಾಹಿತಿಗಳಾದ ವೈ.ಜಿ. ಭಗವತಿ , ಎಸ್.ಎ. ಚಿಕ್ಕನರ್ತಿ, ಮಲ್ಲಯ್ಯ ತೋಟಗಂಟಿ, ಸುನಿಲ್ ಕಮ್ಮಾರ, ಮಂಜುನಾಥ ಚಿಕ್ಕಮಠ, ಎಚ್.ಎನ್. ಸುನಗದ, ಬಿ.ಎಂ. ಪುರದನಗೌಡ್ರು, ಕೆ.ಬಿ. ಗುಡಿಹಾಳ, ಎ.ಕೆ. ಕುಮಟಾಕರ, ಶರಣಪ್ಪ ಉಣಕಲ, ಜಿ.ಎನ್. ಗಾಳಿ, ಪ್ರಭು ರಂಗಾಪುರ, ಎಸ್.ಎಂ. ಒಡೆಯರ, ಪಿ.ಬಿ. ಮಿರ್ಜಿ, ಕಲಾವಿದರ ಬಳಗ, ತಾಲೂಕಿನ ಸಂಘ, ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಫೋಟೋ: ಕೆ ಎಲ್ ಜಿ ತಾಲೂಕು ಚುಟುಕು ಪರಿಷತ್ ವತಿಯಿಂದ ಪತ್ರಕರ್ತ ಪ್ರಭಾಕರ ನಾಯ್ಕ ಅವರ ಮನೆಗೆ ತೆರಳಿ ಸರ್ವಾಧ್ಯಕ್ಷರನ್ನು ಸನ್ಮಾನಿಸಿಆಮಂತ್ರಿಸಲಾಯಿತು.