ಸುನೀತಾ ವಿಲಿಯಂನಂತಹ ಮಹಿಳೆಯರು ನಮಗೆ ಪ್ರೇರಣೆ ಆಗಲಿ: ಶಕುಂತಲಾ ಬೆಲ್ದಾಳೆ

KannadaprabhaNewsNetwork |  
Published : Mar 23, 2025, 01:31 AM IST
ಚಿತ್ರ 22ಬಿಡಿಆರ್50 | Kannada Prabha

ಸಾರಾಂಶ

ವಿಶ್ವ ಮಹಿಳಾ ದಿನಾಚರಣೆ ಹಾಗೂ ಡಾ. ಪ್ರೇಮಾ ಸಿರ್ಸೆ ಅವರ ‘ಚುಕ್ಕಿಗಳು’ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ವಿವಿಧ ಸಾಧಕಿಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್ ಮಹಿಳೆಯರು ಇಂದು ನಮಗೆ ಸಿಕ್ಕ ಅಧಿಕಾರ ಉಪಯೋಗಿಸಲು ಸಾಧ್ಯವಾಗದೆ ಪತಿ ಹಾಗೂ ಮಕ್ಕಳಿಗೆ ವಹಿಸಿಕೊಡುತ್ತಿರುವುದು ಅಸಮಾಧಾನದ ಸಂಗತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ನುಡಿದರು.ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘ ಬೀದರ್, ರಾಣಿ ಕಿತ್ತೂರ ಚನ್ನಮ್ಮ ಮಹಿಳಾ ಮಂಡಳ ಬೀದರ್, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಬೀದರ್ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಡಾ.ಪ್ರೇಮಾ ಸಿರ್ಸೆ ಅವರ ಚುಕ್ಕಿಗಳು ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿಯೇ ಅಕ್ಕ ಮಹಾದೇವಿಯಂತಹ ಅನೇಕ ಸಾಧಕಿಯರು ಇದ್ದರು. ಈಗಲೂ ಇದ್ದಾರೆ, ಆದರೆ ಪ್ರೋತ್ಸಾಹ ಇಲ್ಲದೆ ಅವರು ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಪ್ರತಿ ಮಹಿಳೆ ಗುರಿ ಇಟ್ಟುಕೊಂಡಾಗ ಮಾತ್ರ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತಿಯಲ್ಲಿ ಶೇ.50 ರಷ್ಟು ಮೀಸಲಾತಿ ಸಿಕ್ಕರೂ ಅದನ್ನು ನಾವು ಅನುಭವಿಸದೇ ನಮ್ಮ ಕುಟುಂಬಸ್ಥರಿಗೆ ಅನುಭವಿಸಲು ಅನುವು ಮಾಡಿಕೊಡುತ್ತಿರುವುದು ಸರಿಯಲ್ಲ ಎಂದರು.ನಾವು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ, ಸುನೀತಾ ವಿಲಿಯಂನಂತಹ ಮಹಿಳೆಯರು ನಮಗೆ ಪ್ರೇರಣೆಯಾಗಬೇಕು. ಯಾವುದೇ ಗುರಿ ಸಾಧಿಸಲು ಛಲ ಇಟ್ಟುಕೊಳ್ಳಿ ಎಂದು ಶಕುಂತಲಾ ಬೆಲ್ದಾಳೆ ಮಹಿಳೆಯರಿಗೆ ಕರೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವಿದ್ಯಾ ಎಸ್. ಪಾಟೀಲ್ ವಿಶೇಷ ಉಪನ್ಯಾಸ ನೀಡಿ ಮಹಿಳೆಯರಲ್ಲಿ ಧೈರ್ಯ, ಜೀವನಶೈಲಿ ಬರಬೇಕು ಮಹಿಳೆ ಎಲ್ಲ ರೀತಿಯಿಂದ ಬೆಳೆದಾಗ ಮಾತ್ರ ಮಹಿಳಾ ದಿನಾಚರಣೆ ಮಾಡುವ ಅವಶ್ಯಕತೆ ಬರಬಾರದು ಎಂದರು.ನಮಗೆ ಎಲ್ಲಾ ರೀತಿಯ ಅಧಿಕಾರ ಇದ್ದಾಗ ಮಾತ್ರ ಸಮಾನತೆ ಸಾಧ್ಯವಿದೆ. ಇಂದಿಗೂ ಮಹಿಳೆಯರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಸಂಗತಿ ಎಂದರು.ಸಮಾಜದಲ್ಲಿ ಸ್ತ್ರೀ-ಪುರುಷರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ನಮ್ಮ ಮೂಲಭೂತ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ. ಭ್ರೂಣ ಹತ್ಯೆ ಯಂತಹ ಘಟನೆಗಳು ಸಮಾಜದಲ್ಲಿ ಕಡಿಮೆಯಾಗಬೇಕು. ಪೋಷಕರು ವಿಶೇಷವಾಗಿ ತಾಯಂದಿರೆ ತನ್ನ ಮಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆ ವಿನಹ ಅವರನ್ನು ಹಿಂದಕ್ಕೆ ತಳ್ಳುವ ಪ್ರವರ್ತಿ ಬಿಡಬೇಕು ಎಂದು ಕಿವಿ ಮಾತು ಹೇಳಿದರು.ಹಿರಿಯ ಮಹಿಳಾ ಸಾಹಿತಿ ಡಾ. ಪ್ರೇಮಾ ಸಿರ್ಸೆ ಅವರು ಬರೆದ ಚುಕ್ಕಿಗಳು ಪುಸ್ತಕ ಪರಿಚಯ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಮಹಾದೇವಿ ಹೆಬ್ಬಾಳೆ ಮಾಡಿ, ಕವನ ಸಂಕಲನದಲ್ಲಿರುವ ಅನೇಕ ಪ್ರಮುಖ ಸಂಗತಿಗಳ ಬಗ್ಗೆ ಮೆಲಕು ಹಾಕಿದರು. ಕಳೆದ 30 ವರ್ಷಗಳ ಹಿಂದೆ ಹೊರತಂದ ಈ ಕೃತಿ ಇಂದಿಗೂ ಜನರ ಮನದಲ್ಲಿ ಮನೆಮಾತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ರಾಣಿ ಚೆನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿದರು. ತಿಂಗಳ ಪುಸ್ತಕ ಪರಿಚಯ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿ, ಅಕ್ಕ ಮಹಾದೇವಿ ಮಹಿಳಾ ಸಹಕಾರ ಸಂಘ ಕಳೆದ 27 ವರ್ಷಗಳ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ರೀಟಾ ನಿರೂಪಿಸಿದರು. ಜಾನಪದ ಮಹಿಳಾ ಘಟಕದ ಮಲ್ಲಮ್ಮ ಸಂತಾಜಿ, ಭುವನೇಶ್ವರಿ ಹಿರೇಮಠ, ಪುಣ್ಯವತಿ ವಿಸಾಜಿ, ಮಲ್ಲಮ್ಮಾ ಹೆಬ್ಬಾಳೆ ಇದ್ದರು. ಅರ್ಪೀತಾ ಅಶೋಕ ಹೆಬ್ಬಾಳೆ ಅವರಿಂದ ಸುಗ್ಗಿ ನೃತ್ಯ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಲಕ್ಷ್ಮೀಬಾಯಿ ಪಾಟೀಲ್ ಹಾಗೂ ಶೋಭಾ ಔರಾದೆ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ, ಪುಣ್ಯವತಿ ವಿಸಾಜಿ, ಶಿವಲೀಲಾ ಖಂಡೆ ಅವರನ್ನು ಸಮಾಜ ಕ್ಷೇತ್ರ, ಮೀನಾಕ್ಷಿ ಪಾಟೀಲ್ ಅವರನ್ನು ಉತ್ತಮ ಸೋಸೆ, ರಶ್ಮಿ ಶರ್ಮಾ ಅವರನ್ನು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅಕ್ಕ ಮಹಾದೇವಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ. ಸಾವಿತ್ರಿ ಹೆಬ್ಬಾಳೆ ಸ್ವಾಗತಿಸಿದರು. ರೀಟಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!