ತಂಬೂರಿ ಕಲಾವಿದ ಕೆ.ಬಿ. ರಾಚಯ್ಯ ಮಣ್ಣಿನ ವರಪ್ರಸಾದ

KannadaprabhaNewsNetwork |  
Published : Sep 17, 2024, 12:46 AM IST
ತಂಬೂರಿ ಕಲಾವಿದ ಕೆ.ಬಿ.ರಾಚಯ್ಯ ಮಣ್ಣಿನ ವರಪ್ರಸಾದ' | Kannada Prabha

ಸಾರಾಂಶ

ಗುಂಡ್ಲುಪೇಟೆಯಲ್ಲಿ ನಡೆದ ರಾಚಪ್ಪಾಜಿ ಜಾನಪದ ಕಲಾಸಂಘದ ವತಿಯಿಂದ ಆಕಾಶವಾಣಿ 'ಎ' ಗ್ರೇಡ್ ತಂಬೂರಿ ಕಲಾವಿದರಾದ ದಿ.ಕೆ.ಬಿ. ರಾಚಯ್ಯರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಯಾವತ್ತೂ ಸಾವಿಲ್ಲ, ನಾಡಿನಾದ್ಯಂತ ತಮ್ಮ ಕಲೆಯನ್ನು ಪಸರಿಸಿದ ತಂಬೂರಿ ಕಲಾವಿದ ಕೆ.ಬಿ. ರಾಚಯ್ಯ ಈ ಮಣ್ಣಿನ ವರಪ್ರಸಾದ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊ. ಇಂದುವಾಡಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಭಾನುವಾರ ನಡೆದ ರಾಚಪ್ಪಾಜಿ ಜಾನಪದ ಕಲಾಸಂಘ ಆಯೋಜಿಸಿದ್ದ ಆಕಾಶವಾಣಿ ''''''''ಎ'''''''' ಗ್ರೇಡ್ ತಂಬೂರಿ ಕಲಾವಿದರಾದ ದಿ.ಕೆ.ಬಿ. ರಾಚಯ್ಯ ಅವರ ೨೫ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ನೆಲದ ಮಣ್ಣಿನ ಸೊಗಡೇ ಹಾಗೇ, ಜನಪದವನ್ನು ಉತ್ತಿ ಬೆಳೆಸಿ, ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದ ಭರಾಟೆಯಲ್ಲಿಯೂ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.

ಜಾನಪದ ಅಕಾಡೆಮಿ ಸದಸ್ಯ ಉಮೇಶ್ ಮಾತನಾಡಿ, ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರಸ್ವಾಮಿ ನೆಲೆ ನಿಂತಿರುವ ನಾಡು ಚಾಮರಾಜನಗರ, ಮಂಡ್ಯ, ಮೈಸೂರು. ಈ ನೆಲವು ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿ ರಾಷ್ಟ್ರಾದ್ಯಂತ ನಾಡಿನ ಕಲೆ, ಸಂಸ್ಕೃತಿಯನ್ನು ಪಸರಿಸಿದೆ ಎಂದರು.

ಚಿಕ್ಕಲ್ಲೂರು ಕ್ಷೇತ್ರದ ಪ್ರಭುರಾಜೇ ಅರಸು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಕೊಳ್ಳೇಗಾಲ ಉಪಖಜಾನಾಧಿಕಾರಿ ಪಿ.ನಾಗರತ್ನಮ್ಮ, ಬೆಂಗಳೂರಿನ ಜಾನಪದ ಸಿರಿ ಚಾನೆಲ್‌ನ ಕಾಂತರಾಜು, ಜಾನಪದ ಅಕಾಡೆಮಿ ಸದಸ್ಯರಾದ ಉಮೇಶ್, ಸಮಾಜ ಸೇವಕ ಗಿರೀಶ್ ಬಾಬು, ಸರ್ಕಾರಿ ವೈದ್ಯಾಧಿಕಾರಿ ಸಿ.ಮಹೇಶ್, ಹಸಗೂಲಿ ಸಿದ್ದಯ್ಯ, ಗಾಯಕ ಆರ್. ರವಿಕುಮಾರ್, ರಾಚಪ್ಪಾಜಿ ಜಾನಪದ ಕಲಾ ಸಂಘದ ಅಧ್ಯಕ್ಷ ಆರ್. ಸಿದ್ದರಾಜು, ಕಾರ್ಯದರ್ಶಿ ಬಾಚಹಳ್ಳಿ ಸೋಮಣ್ಣ, ವಕೀಲರಾದ ಸಿದ್ದಯ್ಯ, ಸಿದ್ದೇಶ್, ಸುಭಾಸ್ ಮಾಡ್ರಹಳ್ಳಿ, ಆರ್.ಸೋಮಣ್ಣ, ಸಾಹಿತಿ ಕಾಳಿಂಗಸ್ವಾಮಿ, ಉಪನ್ಯಾಸಕಿ ಎಸ್. ಶೃತಿ, ಸುರೇಶ ಕಂದೇಗಾಲ, ಎಸ್.ಬಿ.ನಾಗರಾಜ್, ತಂಬೂರಿ ಕಲಾವಿದರಾದ ಚಿಕ್ಕರಂಗಶೆಟ್ಟಿ, ಮಹಾದೇವಯ್ಯ, ಸೋಬಾನೆ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಸನ್ಮಾನಿತ ಕಲಾವಿದರು

ರಾಜ್ಯ ಪ್ರಶಸ್ತಿ ವಿಜೇತ ದೊಡ್ಡಗವಿಬಸಪ್ಪ, ತಂಬೂರಿ ಕಲಾವಿದರಾದ ಸಿದ್ದರಾಜು, ಸಿದ್ದಶೆಟ್ಟಿ, ನಾಗಯ್ಯ, ಸಿದ್ದರಾಜು, ಸಿದ್ದಯ್ಯ, ಗುರುಸಿದ್ಧಯ್ಯ, ಮಹದೇವನಾಯಕ, ಸಿದ್ದರಾಜು, ರಘು, ಕೈಲಾಸಮೂರ್ತಿ, ಶಿವಕುಮಾರ್, ಶ್ರೀನಿವಾಸ, ಮಾದಯ್ಯ, ಹರಳುಕೂಟಯ್ಯ, ಬಸವರಾಜು, ಸೋಬಾನೆ ಕಲಾವಿದರಾದ ದೊಡ್ಡಮ್ಮ, ಬೆಳ್ಳಮ್ಮ,ವೆಂಕಟಮ್ಮ, ಲಕ್ಷ್ಮಮ್ಮ, ರಾಜಮ್ಮರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ