ತಮಿಳು ಕಾಲೋನಿ ವಿವಾದ; ನ್ಯಾಯಾಲಯದ ತೀರ್ಪಿಗೆ ನಾವು ಬದ್ಧ: ಜೆ.ರಾಮಯ್ಯ

KannadaprabhaNewsNetwork |  
Published : Jun 25, 2025, 01:18 AM IST
ನ್ಯಾಯಾಲಯದ ತೀರ್ಪಿಗೆ ನಾವು ಬದ್ಧ: ಜೆ.ರಾಮಯ್ಯ | Kannada Prabha

ಸಾರಾಂಶ

ಕೆಆರ್‌ಎಸ್, ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಕಲ್ಲು ಕಟ್ಟಡ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ತಮಿಳುನಾಡಿನಿಂದ ಕೂಲಿ ಕಾರ್ಮಿಕರಾಗಿ ಬಂದಿದ್ದ ಜನರಿಗೆ ಜಾಗವನ್ನು ಮಹಾರಾಜರು ನೀಡಿದ್ದರು. ಎಂಟು ದಶಕಗಳಿಂದಲೂ ಆ ಜಾಗದಲ್ಲೇ ತಮಿಳು ನಿವಾಸಿಗಳು ವಾಸವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎಂದು ಜೈ ಭೀಮ್ ಸಂಘಟನೆ ಅಧ್ಯಕ್ಷ ವೆಂಕಟೇಶ್ ಹಾಗೂ ಜೆ. ರಾಮಯ್ಯ ತಿಳಿಸಿದರು.

ಕೆಆರ್‌ಎಸ್, ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಕಲ್ಲು ಕಟ್ಟಡ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ತಮಿಳುನಾಡಿನಿಂದ ಕೂಲಿ ಕಾರ್ಮಿಕರಾಗಿ ಬಂದಿದ್ದ ಜನರಿಗೆ ಜಾಗವನ್ನು ಮಹಾರಾಜರು ನೀಡಿದ್ದರು. ಎಂಟು ದಶಕಗಳಿಂದಲೂ ಆ ಜಾಗದಲ್ಲೇ ತಮಿಳು ನಿವಾಸಿಗಳು ವಾಸವಾಗಿದ್ದಾರೆ. ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ ಈ ಜಾಗದಲ್ಲಿ ವಾಸವಾಗಿರುವ ನಮ್ಮನ್ನು ಸ್ಥಳಾಂತರ ಮಾಡಲು ಕೆಲವರು ಹುನ್ನಾರ ನಡೆಸುತ್ತಿದ್ದು, ಈ ಬಗ್ಗೆ ನ್ಯಾಯಾಲಯದಲ್ಲೂ ಸಹ ಪ್ರಕರಣ ದಾಖಲಿಸಲಾಗಿದೆ ಎಂದರು.

ನ್ಯಾಯಾಲದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸ್ಥಳದಿಂದ ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿದೆ. ಪರಿಸ್ಥಿತಿ ಹೀಗಿರುವಾಗ ತಮಿಳು ನಿವಾಸಿಗಳಿಗಾಗಿ ದೂರದ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಇದು ಸರಿಯಲ್ಲ. ನಾವು ವಾಸಿಸುವ ಸ್ಥಳದಲ್ಲೇ ನಮಗೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.

ವಿವಾದಿತ ತಮಿಳು ಕಾಲೋನಿಗೆ ಸಂಬಂಧಿಸಿದಂತೆ ಮುಂದೆ ನ್ಯಾಯಾಲಯದಿಂದ ಯಾವುದೇ ಆದೇಶ ಬಂದರೂ ಅದಕ್ಕೆ ತಮ್ಮ ಸಹಮತ ಇದೆ ಎಂದು ಸ್ಪಷ್ಟಪಡಿಸಿದರು.

ವಕೀಲ ಲಕ್ಷ್ಮಣ್ ಚೀರನಹಳ್ಳಿ, ಮುಖಂಡರಾದ ಜೆ.ವಿಜಯಾನಂದ, ಬಿ.ಪ್ರಕಾಶ್ ಇತರರು ಗೋಷ್ಠಿಯಲ್ಲಿದ್ದರು.

ಸಹಕಾರ ಸಂಘಕ್ಕೆ ಜವರೇಗೌಡ ಅಧ್ಯಕ್ಷ

ಮಂಡ್ಯ: ಗಾಂಧಿನಗರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಜವರೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಜಯಶೀಲ ಆಯ್ಕೆಯಾದರು. ನಿರ್ದೇಶಕರಾಗಿ ಶಿವಣ್ಣ, ಕೃಷ್ಣ, ರವಿ, ಪ್ರಶಾಂತ್, ವೆಂಕಟೇಶ್, ಚಂದನ್, ಸತ್ಯ, ಮಮತಾ, ಗಿರೀಶ್ ಆಯ್ಕೆಯಾದರು. ಆಯ್ಕೆಯಾದ ಎಲ್ಲರಿಗೂ ಭಗವದ್ಗೀತೆ ಕೃತಿ ಕೊಟ್ಟು ಅಭಿನಂದಿಸಲಾಯಿತು. ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ, ಸಂಘದ ಮುಖ್ಯ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ನವೀನ್, ಮುಖಂಡರಾದ ರಾಘವೇಂದ್ರ, ಶಿವು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ