ತಮಿಳುನಾಡು ಸರ್ಕಾರ ಹಿಂದೂಗಳ ಕ್ಷಮೆಯಾಚಿಸಲಿ: ಕಾಂತೇಶ್

KannadaprabhaNewsNetwork |  
Published : Nov 29, 2026, 01:30 AM IST
ಹುಬ್ಬಳ್ಳಿಯ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಕಾನೂನು ಮಹಾವಿದ್ಯಾಲಯದ 2026-27ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಚಟುವಟಿಕೆಗಳನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

Tamil Nadu government should apologize to Hindus: Kantesh

ಶಿವಮೊಗ್ಗ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ. ಈ. ಕಾಂತೇಶ್ ಒತ್ತಾಯಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ತಮಿಳುನಾಡಿನ ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ಮಾಸದ ಪೂರ್ಣಿಮೆಯಂದು ಹಲವು ವರ್ಷಗಳಿಂದ ದೀಪ ಬೆಳಗಿಸುವ ಸಂಪ್ರದಾಯ ಇದೆ. ಆದರೆ ಈ ಬಾರಿ ಸರ್ಕಾರ ದೀಪ ಬೆಳಗಿಸಲು ಅವಕಾಶ ನೀಡಿರಲಿಲ್ಲ. ಈ ವಿಚಾರದಲ್ಲಿ ದೀಪಸ್ತಂಭದಲ್ಲಿ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಷ್ಟ್ರಭಕ್ತರ ಬಳಗದಿಂದ ಸ್ವಾಗತಿಸುತ್ತೇವೆ ಎಂದರು. ಯಾವುದೇ ಸರ್ಕಾರ ಸಂವಿಧಾನಕ್ಕೆ ಗೌರವ ನೀಡಿ, ಧಾರ್ಮಿಕ ವಿಚಾರಗಳಲ್ಲಿ ಪಕ್ಷಪಾತ ಮಾಡದೆ ನಡೆದುಕೊಳ್ಳಬೇಕು. ಒಂದು ಕೋಮಿನ ಪರವಾಗಿ ಮಾತ್ರ ಒಲವು ತೋರುವ ಧೋರಣೆ ಅನುಸರಿಸಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆ ಮೇಲೆ ಯುವಕರಿಂದ ಹಲ್ಲೆ: ಅಪ್ರಾಪ್ತೆ ಆತ್ಮಹತ್ಯೆ
ತಿಪ್ಪೇಗೌಡರಿಂದಲೇ ಈಡಿಗರ ಸ್ವಾಭಿಮಾನಕ್ಕೆ ಧಕ್ಕೆ