ಚನ್ನಪಟ್ಟಣ: ತಾಲೂಕಿನ ಲಂಬಾಣಿ ತಾಂಡ್ಯ ಬಳಿ, ತಮಿಳುನಾಡು ಸಬ್ ಇನ್ಸ್‌ಪೆಕ್ಟರ್ ಅವರನ್ನು ಬೆದರಿಸಿ ಅವರ ಬಳಿ ಇದ್ದ ಹಣ, ಚಿನ್ನಾಭರಣ ಮತ್ತು ಮೊಬೈಲ್ ಪೋನ್ ದೋಚಿದ್ದ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣದ ಸೈಯ್ಯದ್ ವಾಡಿ ನಿವಾಸಿ ಸೈಯ್ಯದ್ ತನ್ವೀರ್, ರಾಮನಗರದ ಫೈರೋಜ್ ಪಾಷಾ, ರಾಮನಗರ ಗೆಜ್ಜಲಗುಡ್ಡೆ ನಿವಾಸಿ ತನ್ವೀರ್ ಪಾಷಾ ಬಂಧಿತರು. ಅ.7ರಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ತಾಲೂಕಿನ ಲಂಬಾಣಿ ತಾಂಡ್ಯ ಬಳಿ ಬೆಂ-ಮೈ ಎಕ್ಸ್‌ಪ್ರೆಸ್ ವೇ ಬೈಪಾಸ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮಲಗಿದ್ದ ತಮಿಳುನಾಡಿನ ನೀಲಗಿರಿ ಜಿಲ್ಲೆ ಚೇರಂಬಾಡಿ ಠಾಣೆ ಪಿಎಸ್‌ಐ ಶಾಜಿಪ್ ಅವರಿಗೆ ಚಾಕು ತೋರಿಸಿ ಅವರಿಂದ 10 ಸಾವಿರ ರು. ನಗದು, 16 ಗ್ರಾಂ ತೂಕದ ಚಿನ್ನದ ಸರ ಹಾಗೂ 2 ಮೊಬೈಲ್ ಪೋನ್ ಕಸಿದು ಪರಾರಿಯಾಗಿದ್ದರು.ಸಿಸಿ ಕ್ಯಾಮರಾ ಆಧರಿಸಿ ಪತ್ತೆ:
ಎಕ್ಸ್ ಪ್ರೆಸ್ ವೇ ಹಾಗೂ ಸುತ್ತಮುತ್ತಲ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸೈಯ್ಯದ್ ತನ್ವೀರ್, ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಈ ಹಿಂದೆ ಸಹ ಭಾಗಿಯಾಗಿದ್ದು, ಈತನ ಮೇಲೆ ಶ್ರೀರಂಗಪಟ್ಟಣ ಮತ್ತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದರೋಡೆ ಪ್ರಕರಣ ದಾಖಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ಈತನ ಸುಳಿವು ಸಿಗುತ್ತಿದ್ದಂತೆ ಈತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ವಿವರ ತಿಳಿದು ಬಂದಿದೆ.ಬಂಧಿತ ಆರೋಪಿಗಳಿಂದ ಎರಡು ಮೊಬೈಲ್ ಪೋನ್, ಮಾರಕಾಸ್ತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಚನ್ನಪಟ್ಟಣ ಡಿವೈಎಸ್ಪಿ ಗಿರೀಶ್ ಮಾರ್ಗದರ್ಶನದಲ್ಲಿ ಚನ್ನಪಟ್ಟಣ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ತಂಡದಲ್ಲಿ ಗ್ರಾಮಾಂತರ ಪಿಎಸ್‌ಐ ಮನೋಹರ.ಬಿ, ಪ್ರೊಬೆಷನರಿ ಪಿಎಸ್‌ಐ ಅಜಯ್‌ಗೌಡ, ಅಕ್ಕೂರು ಠಾಣೆ ಪ್ರೊಬೆಷನರಿ ಪಿಎಸ್‌ಐ ಪ್ರಜ್ವಲ್, ಮುಖ್ಯ ಪೇದೆ ಶಿವಕುಮಾರ್, ಹನುಂತಶೆಟ್ಟಿ, ಪೇದೆಗಳಾದ ಪವನ್ ಕುಮಾರ್, ಪ್ರವೀಣ್, ಜಿಲ್ಲಾ ತಾಂತ್ರಿಕ ವಿಭಾಗದ ಮಹಾದೇವ್ ಇದ್ದರು. ಆರೋಪಿಗಳನ್ನು ಪತ್ತೆ ಹಚ್ಚಿದ ತನಿಖಾತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಸಿಸಿಕ್ಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.10ಕೆಆರ್ ಎಂಎನ್ 13,14,15,16.ಜೆಪಿಜಿ
13.ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳು.14. ಸೈಯ್ಯದ್ ತನ್ವೀರ್
15.ಫೈರೋಜ್ ಪಾಷಾ16. ತನ್ವೀರ್ ಪಾಷಾ