ಪ್ರಯಾಣಿಕರ ಉಪಯೋಗಕ್ಕಿಲ್ಲದ ತಣ್ಣೀರುಹಳ್ಳ ಬಸ್‌ ತಂಗುದಾಣ

KannadaprabhaNewsNetwork |  
Published : Nov 30, 2023, 01:15 AM IST
ತಣ್ಣೀರುಹಳ್ಳ ಗ್ರಾಮದಲ್ಲಿ ೩೦ ವರ್ಷಗಳ ಹಿಂದೆ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಉಪಯೋಗಕ್ಕೆ ಬಾರದ ಸ್ಥಿತಿ  | Kannada Prabha

ಸಾರಾಂಶ

ಬಸ್ ತಂಗುದಾಣದ ಹಿಂದೆ ಅಂಗನವಾಡಿ ಕೇಂದ್ರವಿದ್ದು, ತಂಗುದಾಣಕ್ಕೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಕ್ಕೆ ರಸ್ತೆ ದೀಪದ ಸ್ವಿಚ್ಚನ್ನು ಅಳವಡಿಸಿದ್ದು, ಇದಕ್ಕೆ ಯಾವುದೇ ಮುಚ್ಚಳವಿಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತಿರುವಿನಲ್ಲಿ ಬಸ್ ನಿಲ್ಲಿಸದ ಕಾರಣ, ಪ್ರಯಾಣಿಕರು ಮಳೆ ಬಿಸಿಲೆನ್ನದೆ ಬೇರೆ ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಿರುವುದರಿಂದ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮದ ಹರೀಶ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ೩೦ ವರ್ಷಗಳ ಹಿಂದೆ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದ್ದು, ಕೂಡಲೇ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಇದು ರಸ್ತೆ ತಿರುವಿನಲ್ಲಿ ನಿರ್ಮಿಸಲ್ಪಟ್ಟಿದ್ದು, ಇಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಒಳಗಡೆ ಅಶುಚಿತ್ವದಿಂದ ಕೂಡಿದ್ದು, ಹೊರಗೆ ದಾರಿಯಲ್ಲಿಯೇ ಮಣ್ಣನ್ನು ಸುರಿಯಲಾಗಿದೆ. ಪ್ರಯಾಣಿಕರಿಗೆ ಉಪಯೋಗಕ್ಕೆ ಬಾರದ ಬಸ್ ನಿಲ್ದಾಣ ಇಂದು ಪುಂಡ ಪೋಕರಿಗಳಿಗೆ ಕಾಲಹರಣ ಮಾಡಲು, ಧೂಮಪಾನ ಮತ್ತು ಮದ್ಯಪಾನಕ್ಕೆ ಸೀಮಿತವಾಗಿದೆ. ಇದರ ಎದುರಿನಲ್ಲಿಯೇ ಸಾಕಷ್ಟು ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಹಾಗೂ ಅಧ್ಯಕ್ಷರು ಸಂಚರಿಸುತ್ತಿದ್ದರೂ, ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಆನಂದ್‌ರಾಜ್ ದೂರಿದರು.

ಬಸ್ ತಂಗುದಾಣದ ಹಿಂದೆ ಅಂಗನವಾಡಿ ಕೇಂದ್ರವಿದ್ದು, ತಂಗುದಾಣಕ್ಕೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಕ್ಕೆ ರಸ್ತೆ ದೀಪದ ಸ್ವಿಚ್ಚನ್ನು ಅಳವಡಿಸಿದ್ದು, ಇದಕ್ಕೆ ಯಾವುದೇ ಮುಚ್ಚಳವಿಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತಿರುವಿನಲ್ಲಿ ಬಸ್ ನಿಲ್ಲಿಸದ ಕಾರಣ, ಪ್ರಯಾಣಿಕರು ಮಳೆ ಬಿಸಿಲೆನ್ನದೆ ಬೇರೆ ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಿರುವುದರಿಂದ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮದ ಹರೀಶ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೇ ಲವ್‌ ವಿಷಯ ಗೊತ್ತಾಗಿದ್ದಕ್ಕೆ ಪ್ರಿಯಕರನಿಗೆ ಪೆಟ್ರೋಲ್‌, ಸೀಮೆ ಎಣ್ಣೆ ಹಾಕಿ ಸುಟ್ಟು ಕೊಂದಳು!
ಬೆಂಗಳೂರು ನಗರದಲ್ಲಿ ಹೀಟ್ ಸ್ಟ್ರೋಕ್‌ : ಅಂಗಾಂಗ ವೈಫಲ್ಯ ಭೀತಿ! ಮುನ್ನೆಚ್ಚರಿಕೆ ಮತ್ತು ಪರಿಹಾರಗಳು