ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಷೇರುದಾರರಿಗೆ ತಲುಪಿಸಲಾಗಿದೆ. ಸಭೆಗೆ ಬರುವ ಷೇರುದಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ತಲುಪದ ಷೇರುದಾರರು ಇದನ್ನೆ ಆಹ್ವಾನ ಎಂದು ತಿಳಿದು ಸಭೆಗೆ ಹಾಜರಾಗಬೇಕು ಎಂದರು.
ಸಂಸ್ಥೆಯು ಈ ವರ್ಷವು ಸಹ ಲಾಭದಾಯಕವಾಗಿ ಮುನ್ನಡೆದು 11.79 ಲಕ್ಷ ರು. ಆದಾಯ ಗಳಿಸಿದೆ. ಸಂಸ್ಥೆಯಲ್ಲಿ 12 ಶಾಖೆಗಳು ಸಹ ಆದಾಯದಲ್ಲಿ ನಡೆಯುತ್ತಿವೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎಂದರು.ಸಂಸ್ಥೆಯಿಂದ ಹೊಸದಾಗಿ ವೇಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಜತೆಗೆ ಸಂಸ್ಥೆ ಸ್ಥಾಪನೆಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲಿ ಅಮೃತ ಮಹೋತ್ಸವ ಆಚರಿಸಲಾಗುವುದು. ಟಿಎಪಿಸಿಎಂಎಸ್ ಸಂಸ್ಥೆಯಿಂದ ನಿರ್ಮಿಸಿರುವ 14 ಮಳಿಗೆಗಳ ಹರಾಜು ಪ್ರಕ್ರಿಯೆ ಸೆ.17 ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.45 ಅಡಿ
ಒಳ ಹರಿವು – 8,196 ಕ್ಯುಸೆಕ್ಹೊರ ಹರಿವು – 6,902 ಕ್ಯುಸೆಕ್
ನೀರಿನ ಸಂಗ್ರಹ – 48.963 ಟಿಎಂಸಿ