24 ರಿಂದ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಸಂಭ್ರಮ

KannadaprabhaNewsNetwork |  
Published : Jan 10, 2026, 02:15 AM IST
01ತರಳಬಾಳು ಶ್ರೀಗಳು02ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಗ್ರಹ ಚಿತ್ರ | Kannada Prabha

ಸಾರಾಂಶ

ಈ ಬಾರಿ ಹಲವು ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ । 30ಕ್ಕೆ ವಿಜ್ಞಾನ ವಸ್ತು ಪ್ರದರ್ಶನ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವು ಜ.24 ರಿಂದ ಫೆ.1ರವರೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಂಪ್ರದಾಯಿಕ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀಮಠವು ಹಲವು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಜ.25ರಂದು ಬೆಳಗ್ಗೆ 10 ರಿಂದ 3ರ ವರೆಗೆ ಭಜನಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ ಹಾಗೂ ಶಿವಮೊಗ್ಗ ತಾಲೂಕಿನ ಆಸಕ್ತರೂ ಭಾಗವಹಿಸಬಹುದಾಗಿದೆ. ಪ್ರಥಮ 10,೦೦೦ ದ್ವಿತೀಯ, ೮,೦೦೦, ತೃತೀಯ ೬೦೦೦ ರೂಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೨೦ರ ಒಳಗೆ ೭೮೯೨೧೫೪೬೯೫, ೯೫೩೮೪೩೭೭೭೯ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಜ.26ರ ಸೋಮವಾರ ಗಣರಾಜ್ಯೋತ್ಸವ ಆಚರಣೆಯಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಭದ್ರಾವತಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಲಿದ್ದು, ಮಧ್ಯಾಹ್ನ ೨ಗಂಟೆಗೆ ಭದ್ರಾವತಿ ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ. ಮೊದಲ ಹಂತದ ಲಿಖಿತ ಪರೀಕ್ಷೆಗಳನ್ನು ಜ.೨೦ ರಂದು ಭದ್ರಾವತಿಯ ಭದ್ರಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದು, ಅದರಲ್ಲಿ ಆಯ್ಕೆಯಾದ ತಂಡಗಳಿಗೆ ಜ.೨೬ರ ಸೋಮವಾರ ಮಧ್ಯಾಹ್ನ ೨ಗಂಟೆಗೆ ಅಂತಿಮ ಸುತ್ತಿನ ಸ್ಪರ್ಧೆಗಳು ಜರುಗಿವೆ. ವಿಜೇತವಾದ ತಂಡಗಳಿಗೆ ಪ್ರಥಮ ೬೦೦೦, ದ್ವಿತೀಯ, ೪೦೦೦, ತೃತೀಯ ೨೦೦೦ ರು. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಆಸಕ್ತರು ಜ.೨೦ರ ಒಳಗೆ ೯೮೪೫೪೭೦೮೯, ೯೪೪೮೩೩೭೪೨೨ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಜ.೨೭ರ ಮಂಗಳವಾರ ಬೆಳಗ್ಗೆ ೯.೩೦ ರಿಂದ ೩ರ ವರೆಗೆ ‘ದೇಶದ ಅಭಿವೃದ್ಧಿಯಲ್ಲಿ ಕೈಗಾರಿಗೆಗಳ ಪಾತ್ರ’ ವಿಷಯಕ್ಕೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ ಹಾಗೂ ಶಿವಮೊಗ್ಗ ತಾಲೂಕಿನ ಎಲ್ಲಾ ಹಾಗೂ ಶ್ರೀಸಂಸ್ಥೆಯ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ಪ್ರಥಮ ೬೦೦೦, ದ್ವಿತೀಯ ೪೦೦೦, ತೃತೀಯ ೨೦೦೦ ನಗದು ಬಹುಮಾನಗಳನ್ನ ನೀಡಲಾಗುವುದು. ಆಸಕ್ತರು ಜ.೨೦ರ ಒಳಗೆ ೮೦೫೦೪೭೬೭೯೬, ೯೭೪೮೪೦೯೦೫ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಜ.೨೮ರ ಬುಧವಾರ ಬೆಳಗ್ಗೆ ೯.೩೦ ರಿಂದ ೨ರ ವರೆಗೆ ವೀರಗಾಸೆ ಸ್ಪರ್ಧೆ ಏರ್ಪಡಿಸಿದ್ದು, ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ ಹಾಗೂ ಶಿವಮೊಗ್ಗ ತಾಲೂಕಿನವರಿಗೆ ಅವಕಾಶ ಇರಲಿದೆ. ಜಾನಪದ ಸೊಗಡಿನ ಕಲೆಯ ಜೊತೆಗೆ ಪ್ರತಿ ತಂಡದಲ್ಲಿ ೧೨ ಕಲಾವಿದರಿಗೆ ಮಾತ್ರ ಅವಕಾಶ ಇರಲಿದೆ. ಸ್ಪರ್ಧೆಯಲ್ಲಿ ವಿಜೇತರಾÀದ ತಂಡದವರಿಗೆ ಪ್ರಥಮ ೧೦,೦೦೦, ದ್ವಿತೀಯ ೮,೦೦೦, ತೃತೀಯ ೬೦೦೦ ರಂತೆ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೨೦ರ ಒಳಗೆ ೯೯೮೬೦೫೬೭೪೩, ೯೯೮೬೦೫೬೭೪ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಜ.೨೯ರ ಗುರುವಾರ ಬೆಳಗ್ಗೆ ೯.೩೦ ರಿಂದ ೨ರ ವರೆಗೆ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ಭದ್ರಾವತಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ವಿಜೇತರಾದ ತಂಡಗಳಿಗೆ ಪ್ರಥಮ ೧೦,೦೦೦, ದ್ವಿತೀಯ ೭,೦೦೦, ತೃತೀಯ ೫,೦೦೦ಗಳನ್ನ ನಗದು ಬಹುಮಾನ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ವಚನನೃತ್ಯದಲ್ಲಿ ೧೨ನೇ ಶತಮಾನದ ಶಿವಶರಣರ ವಚನಗಳಿಗೆ ಮಾತ್ರ ನೃತ್ಯಮಾಡಲು ಅವಕಾಶ ಕಲ್ಪಿಸಿದ್ದು, ಜನಪದ ನೃತ್ಯಗಳಲ್ಲಿ ರಿಮಿಕ್ಸ್ ಹಾಡಿಗೆ ಅವಕಾಶ ಇರುವುದಿಲ್ಲ. ಆಸಕ್ತರು ಜ.೨೦ರ ಒಳಗೆ ೯೯೬೪೭೯೫೨೦೨, ೮೮೬೧೩೧೯೮೯೪ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಜ.೩೦ರ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನವನ್ನು ಶ್ರೀ ತರಳಬಾಳು ಜಗದ್ಗುರು ವದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಉತ್ತಮ ವಸ್ತು ಪ್ರದರ್ಶನಗಳಿಗೆ ವಿಶೇಷ ಬಹುಮಾನ, ಆಕರ್ಷಕ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ಫೆ.1 ರಂದು ಭಾನುವಾರ ಜಾನಪದ ಕಲಾ ಪ್ರದರ್ಶನವು ಕರ್ನಾಟಕದ ವಿವಿದ ಜಾನಪದ ಕಲಾತಂಡಗಳಿಂದ ಜರುಗಲಿದೆ.

ಬಾಕ್ಸ್

ಪ್ರತಿಭಾನ್ವಿತರಿಗೆ ಸುವರ್ಣ ಆಹ್ವಾನ:

ತರಳಬಾಳು ಹುಣ್ಣಿಮೆಯಲ್ಲಿ ಜ.31ರ ಶನಿವಾರ ಬೆ.10 ಗಂಟೆಗೆ ಪ್ರತಿಭಾನ್ವೇಷಣಾ ಸ್ಪರ್ಧೆಗಳು ಸಂಗೀತ, ನೃತ್ಯ, ಅಭಿನಯ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿವೆ. ಪ್ರತಿ ಭಾಗದಲ್ಲಿ ಕಿರಿಯರ ಹಂತ, ವಯಸ್ಕರ ಹಂತ, ಹಿರಿಯರ ಹಂತ ಎಂದು ನಿಗದಿಪಡಿಸಿದ್ದು, ಒಬ್ಬ ಸ್ಪರ್ಧೆಯು ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಪ್ರತಿಸ್ಪರ್ಧಿಗೆ 5 ನಿಮಿಷ ಸಮಯ ನಿಗದಿ ಮಾಡಲಾಗಿದೆ. ವಿಜೇತರಿಗೆ ಪ್ರಥಮ 60000, ದ್ವಿತೀಯ 4000, ತೃತೀಯ 2000 ರು. ನಗದು ಬಹುಮಾನಗಳ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕವನ್ನ ನೀಡಲಾಗುವುದು. ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಿಗೂ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ. ಸಂಗೀತ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್ ಅಥವಾ ಕರೋಕೆಗೆ ಅವಕಾಶ ಇರುವುದಿಲ್ಲ. ಇತರ ಎಲ್ಲಾ ವಾದ್ಯಗಳನ್ನು ಸ್ಪರ್ಧೆಯೇ ನುಡಿಸಿ ಗಾಯನವನ್ನ ಹಾಡಬಹುದು. ೧೨ನೇ ಶತಮಾನದ ವಚನಗಳು ಜನಪದ ಗೀತೆಗಳು, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ತತ್ವಪದಗಳು, ಕೀರ್ತನೆಗಳನ್ನು ಹಾಡಬಹುದು. ನೃತ್ಯ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್‌ಅನ್ನು ಮಾತ್ರ ಬಳಸಬೇಕು. ಅಭಿನಯ ಸ್ಪರ್ಧೆಯಲ್ಲಿ ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಧಾರ್ಮಿಕ, ವಿಚಾರಗಳಿಗೆ ಸಂಬAಸಿದ ವಿಷಯಗಳಿಗೆ ಅಭಿನಯಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಆಸಕ್ತರು ಜ.೨೦ರ ಒಳಗೆ ೯೯೮೦೫೩೪೪೦೬, ೮೪೮೧೬೫೫೧೯೪, ೯೦೦೮೦೭೯೧೧೬ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ