ರಾಜ್ಯದಲ್ಲಿ 114 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

KannadaprabhaNewsNetwork |  
Published : May 09, 2025, 12:38 AM ISTUpdated : May 09, 2025, 08:02 AM IST
ಬಿತ್ತನೆ | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 114.40 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗುವ ಗುರಿ ಹೊಂದಿದ್ದು ಕೃಷಿ ಇಲಾಖೆಯು ಬಿತ್ತನೆ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಮಾಡಿಕೊಂಡಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 114.40 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗುವ ಗುರಿ ಹೊಂದಿದ್ದು ಕೃಷಿ ಇಲಾಖೆಯು ಬಿತ್ತನೆ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಮಾಡಿಕೊಂಡಿದೆ. 4.63 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಆದರೆ 5.99 ಲಕ್ಷ ಕ್ವಿಂಟಲ್‌ ದಾಸ್ತಾನಿರುವುದು ವಿಶೇಷವಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳ 4,63,958 ಕ್ವಿಂಟಲ್‌ ಬಿತ್ತನೆ ಬೀಜದ ಅವಶ್ಯಕತೆ ಇದೆ. ಈ ಪೈಕಿ 4,03,645 ಕ್ವಿಂಟಲ್‌ ಪ್ರಮಾಣಿತ ಬಿತ್ತನೆ ಬೀಜ ದಾಸ್ತಾನಿದೆ. ಅಲ್ಲದೆ, 1,95,457 ಕ್ವಿಂಟಲ್‌ ನಿಜಚೀಟಿ ಸೇರಿ ಒಟ್ಟಾರೆ 5,99,102 ಕ್ವಿಂಟಲ್‌ ಬಿತ್ತನೆ ಬೀಜ ಲಭ್ಯವಿದೆ. ಭತ್ತ, ರಾಗಿ, ಹೆಸರು, ತೊಗರಿ, ಉದ್ದು, ಅಲಸಂದೆ ಮತ್ತಿತರ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

‘2025-26ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೂ 4 ಲಕ್ಷ ಮೆಟ್ರಿಕ್‌ ಟನ್‌ ಡಿಎಪಿ, 1.17 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ, 9 ಲಕ್ಷ ಮೆಟ್ರಿಕ್‌ ಟನ್‌ ಕಾಂಪ್ಲೆಕ್ಸ್‌ ಸೇರಿ 26.77 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರದ ಅವಶ್ಯಕತೆ ಇದೆ. ಸದ್ಯ ನಮ್ಮಲ್ಲಿ ಒಟ್ಟಾರೆ 10.87 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನಿದೆ. ಕೇಂದ್ರದಿಂದ ಪೂರೈಕೆಯೂ ಆಗಲಿದ್ದು, ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

160.74 ಲಕ್ಷ ಟನ್‌ ಉತ್ಪಾದನೆ ಅಂದಾಜು:

ಮುಂಗಾರಿನಲ್ಲಿ 82.50 ಲಕ್ಷ ಹೆಕ್ಟೇರ್‌, ಹಿಂಗಾರಿನಲ್ಲಿ 25.50 ಲಕ್ಷ ಹೆಕ್ಟೇರ್‌ ಮತ್ತು ಬೇಸಿಗೆ ಹಂಗಾಮಿನಲ್ಲಿ 6.40 ಲಕ್ಷ ಹೆಕ್ಟೇರ್‌ ಸೇರಿ ಒಟ್ಟಾರೆ 114.40 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಕೃಷಿ ಬೆಳೆಗಳ ಬಿತ್ತನೆ ನಿರೀಕ್ಷಿಸಲಾಗಿದೆ. 148.48 ಲಕ್ಷ ಟನ್‌ ಆಹಾರ ಧಾನ್ಯ ಮತ್ತು 12.26 ಲಕ್ಷ ಟನ್‌ ಎಣ್ಣೆ ಕಾಳುಗಳ ಉತ್ಪಾದನೆ ಸೇರಿ ಒಟ್ಟಾರೆ 160.74 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನಾ ಗುರಿ ಹೊಂದಲಾಗಿದೆ.

ಬೆಳೆಗಳುವಿಸ್ತೀರ್ಣ(ಲಕ್ಷ ಹೆಕ್ಟೇರ್‌) ಉತ್ಪಾದನೆ(ಲಕ್ಷ ಕ್ವಿಂಟಾಲ್‌)ಏಕದಳ ಧಾನ್ಯಗಳು 51.35125.99ದ್ವಿದಳ ಧಾನ್ಯಗಳು 33.8622.49ಎಣ್ಣೆ ಕಾಳುಗಳು 12.4112.26

ಹತ್ತಿ8.1724.52 ಲಕ್ಷ ಬೇಲ್ಸ್‌ಕಬ್ಬು7.89757.58

ತಂಬಾಕು-ವಿಎಫ್‌ ಸಿ0.710.62-ಬಾಕ್ಸ್‌-

ಪ್ರಮುಖ ಬಿತ್ತನೆ ಬೀಜಗಳ ಬೇಡಿಕೆ ಮತ್ತು ಲಭ್ಯತೆ (ಕ್ವಿಂಟಲ್‌ಗಳಲ್ಲಿ)ಬೆಳೆ ಬೇಡಿಕೆಲಭ್ಯತೆ

ಪ್ರಮಾಣಿತ ನಿಜಚೀಟಿ ಒಟ್ಟುಭತ್ತ70,00079,09082079,910

ರಾಗಿ23,00031,288-31,288ತೊಗರಿ33,80040,741-40,741

ಹೆಸರು8,1008,136-8136ಉದ್ದು3,0004,020-4,020

ಅಲಸಂದೆ3,0003962-3962ನೆಲಗಡಲೆ70,00032,92578,2521,11,177

ಸೋಯ ಅವರೆ1,80,5002,00,000-2,00,000ತೃಣ ಧಾನ್ಯಗಳು2501,3351001,435-ಕೋಟ್‌-

ಈ ಬಾರಿ ಉತ್ತಮ ಮಳೆಯಾಗಿ ಆಹಾರ ಧಾನ್ಯಗಳ ಉತ್ಪಾದನೆ ಅಧಿಕವಾಗುವ ನಿರೀಕ್ಷೆ ಇದೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ