ಅವ್ಯವಸ್ಥೆಯ ಆಗರವಾದ ಆಧಾರ ಕೇಂದ್ರ: ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : May 09, 2025, 12:38 AM IST
ಮುಂಡಗೋಡ: ಪಟ್ಟಣದ ಆಧಾರ ಕೇಂದ್ರದಲ್ಲಿ ನಿತ್ಯ ನೂಕು ನುಗ್ಗಲು ಏರ್ಪಡುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಸಾರ್ವಜನಿಕರು ಬುಧವಾರ ಆಧಾರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು ಆಧಾರ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.  | Kannada Prabha

ಸಾರಾಂಶ

ಆಧಾರ ಕೇಂದ್ರದಲ್ಲಿ ನಿತ್ಯ ನೂಕು ನುಗ್ಗಲು ಏರ್ಪಡುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ

ಮುಂಡಗೋಡ: ಪಟ್ಟಣದ ಆಧಾರ ಕೇಂದ್ರದಲ್ಲಿ ನಿತ್ಯ ನೂಕು ನುಗ್ಗಲು ಏರ್ಪಡುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಸಾರ್ವಜನಿಕರು ಬುಧವಾರ ಆಧಾರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಆಧಾರ್‌ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.

ಆಧಾರ್‌ ಕಾರ್ಡ್‌ ತಿದ್ದುಪಡಿ ಕಾರ್ಯ ನಿಮಿತ್ತ ತಾಲೂಕಿನ ವಿವಿಧೆಡೆಯಿಂದ ದಿನ ಬೆಳಗಾಗುತ್ತಿದ್ದಂತೆ ಸಾಕಷ್ಟು ಜನ ಸಾರ್ವಜನಿಕರು ಇಲ್ಲಿಯ ಆಧಾರ್‌ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಕೆಲವೊಂದು ದಿನ ಆಧಾರ್‌ ಸಿಬ್ಬಂದಿ ತಡವಾಗಿ ಬರುತ್ತಾರೆ. ಅಲ್ಲದೇ ದಿನಕ್ಕೆ ೩೦ ಆಧಾರ್‌ ಕಾರ್ಡ್‌ ಮಾತ್ರ ತಿದ್ದುಪಡಿ ಮಾಡುತ್ತಿರುವುದರಿಂದ ಇಡೀ ದಿನ ಸರದಿಯಲ್ಲಿ ನಿಂತು ಸಂಜೆಯಾದರೂ ತಮ್ಮ ಸರದಿ ಬಾರದೇ ಮನೆಗೆ ತೆರಳಿದ ಉದಾಹರಣೆ ಕೂಡ ಸಾಕಷ್ಟಿವೆ. ಒಂದು ಆಧಾರ್‌ ತಿದ್ದುಪಡಿಗಾಗಿ ಕೆಲಸ ಬಿಟ್ಟು ನಿತ್ಯ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಒಂದೇ ಆಧಾರ್‌ ಕೇಂದ್ರ ಇರುವುದರಿಂದ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಮತ್ತೊಂದು ಆಧಾರ್‌ ಕೆಂದ್ರ ತೆರೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದರು. ಬಳಿಕ ಮುಂಡಗೋಡ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ ಸ್ಥಳಕ್ಕಾಗಮಿಸಿ ಸಾರ್ವಜನಿಕರನ್ನು ಸಮಾಧಾನಪಡಿಸಿದರು.

ಮುಂಡಗೋಡ ಪಟ್ಟಣದ ಆಧಾರ್‌ ಕೇಂದ್ರದಲ್ಲಿ ನಿತ್ಯ ನೂಕು ನುಗ್ಗಲು ಏರ್ಪಡುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಸಾರ್ವಜನಿಕರು ಬುಧವಾರ ಆಧಾರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು ಆಧಾರ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ