- ಮಾಯಕೊಂಡ ಕ್ಷೇತ್ರದಲ್ಲಿ 150 ಎಕರೆ ಜಾಗ, 500 ಎಕರೆಗೆ ವಿಸ್ತರಿಸುವ ಗುರಿ: ಸಚಿವ - - -
ಕಾನೂನಾತ್ಮಕ ಚೌಕಟ್ಟಿನಲ್ಲಿ ಜನರಿಗೆ ತ್ವರಿತವಾಗಿ ಪರಿಹಾರ ಒದಗಿಸುವುದೇ ಪ್ರಜಾಸೇವಾ ಕಾರ್ಯಕ್ರಮದ ಉದ್ದೇಶವಾಗಿದೆ. ರಾಜ್ಯದಲ್ಲಿ ಸುಮಾರು 20-25 ಲಕ್ಷ ನಿವೇಶನ ನೀಡುವ ಗುರಿ ಹೊಂದಲಾಗಿದ್ದು, ಮಾಯಕೊಂಡ ಕ್ಷೇತ್ರದಲ್ಲೇ 150 ಎಕರೆ ಗುರುತಿಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ತಾಲೂಕಿನ ಅಣಜಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ, ತಾಪಂ, ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ಮಾಯಕೊಂಡ ಕ್ಷೇತ್ರದ ನಿವೇಶನ, ಸೂರು ರಹಿತರಿಗೆ ಸದ್ಯಕ್ಕೆ 150 ಎಕರೆ ಗುರುತಿಸಿದ್ದು, ಇದನ್ನು 500 ಎಕರೆಗೆ ವಿಸ್ತರಿಸುವ ಮೂಲಕ ಎಲ್ಲರಿಗೂ ನಿವೇಶನ ನೀಡುವ ಕೆಲಸ ಮಾಡಲಿದ್ದೇವೆ ಎಂದರು.ಈ ಹಿಂದೆ ನೀಡುತ್ತಿದ್ದ 20x30 ಅಳತೆ ಬದಲಾಗಿ, ಇನ್ನು ಮುಂದೆ ಪ್ರತಿ ಅರ್ಹ ಕುಟುಂಬಕ್ಕೆ 30x40 ಅಳತೆ ನಿವೇಶನ ನೀಡಲು ನಿರ್ಧರಿಸಲಾಗಿದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲೂ ನಿವೇಶನ, ಸೂರು ಇಲ್ಲದ ಸಾಕಷ್ಟು ಕುಟುಂಬಗಳಿವೆ. ಒತ್ತುವರಿಯಾದ ಸರ್ಕಾರಿ ಜಮೀನನ್ನು ಬಿಡಿಸಿ, ನಿವೇಶನಗಳ ಅಭಿವೃದ್ಧಿಗೆ ಬಳಸುತ್ತೇವೆ ಎಂದು ತಿಳಿಸಿದರು.
ಮಳೆಯಾಶ್ರಿತ ಮಾಯಕೊಂಡ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಕೊಳವೆ ಬಾವಿ, ಪೈಪ್ ಲೈನ್ ಸೇರಿದಂತೆ ಅಗತ್ಯವಿರುವಲ್ಲಿ ಆದ್ಯತೆ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ₹16 ಸಾವಿರ ಕೋಟಿಗಳ ದೊಡ್ಡ ಅನುದಾನ ಬಿಡುಗಡೆಯಾಗಿದೆ. ಪ್ರತಿ ಗ್ರಾ.ಪಂ.ಗೂ ಹಣ ಹಂಚಿಕೆ ಆಗುತ್ತಿದೆ. ಇದರಿಂದ ಹೊಲದ ರಸ್ತೆ, ಸಂಪರ್ಕ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರು ಮತ್ತು ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ, ಸರ್ಕಾರಿ ಸೌಲಭ್ಯ ನೇರವಾಗಿ ತಲುಪಿಸಬೇಕು. ಅಲ್ಲದೆ, ಫಸಲ್ ಬಿಮಾ ಪರಿಹಾರ ವಿತರಣೆಯಲ್ಲಿ ಯಾವುದೇ ತಾರತಮ್ಯವಾಗದಂತೆ ಎಚ್ಚರ ವಹಿಸಬೇಕು. ಅಧಿಕಾರಿ, ಸಿಬ್ಬಂದಿ ಜನರ ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕು. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಕೊಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವಂತೆ ನೋಡಿಕೊಳ್ಳಿ ಎಂದು ಸೂಚ್ಯವಾಗಿ ತಿಳಿಸಿದರು.
- - -
* ಅಧಿಕಾರಿಗಳಿಗೆ ತರಾಟೆ
ತಾಲೂಕಿನ ಅಣಜಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ವಿವಿಧ ಸ್ಟಾಲ್ಗೆ ಭೇಟಿ ನೀಡಿದ್ದ ವೇಳೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಸ್ಟಾಲ್ಗೆ ಭೇಟಿ ನೀಡಿದರು. ಆಗ ಬರೀ ಇಬ್ಬರು ಸಿಬ್ಬಂದಿ ಕೂಡಿಸಿದ್ದಿರಾ? ಇಲಾಖೆ ಯೋಜನೆ ಬಗ್ಗೆ ಏನು ಮಾಹಿತಿ ಹೊಂದಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
- - -
(ಬಾಕ್ಸ್-2)* ಪ್ರಜಾಸೇವಾ ಆಂದೋಲನ: ಅಣಜಿಯಲ್ಲಿ 175ಕ್ಕೂ ಹೆಚ್ಚು ಅರ್ಜಿ
- 20 ವರ್ಷ ಹಿಂದೆ ಹಂಚಿಕೆಯಾದ ಜಾಗ ನೋಂದಣಿ ಇಲ್ಲ: ಸಚಿವರ ಬಳಿ ಅಳಲುದಾವಣಗೆರೆ: ತಾಲೂಕಿನ ಅಣಜಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ, ತಾಪಂ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದಲ್ಲಿ 175ಕ್ಕೂ ಹೆಚ್ಚು ಅರ್ಜಿಗಳು ನೋಂದಣಿಯಾಗಿವೆ.
ಮಾಯಕೊಂಡ ಶಾಸಕ, ಸಚಿವ ಕೆ.ಎಸ್.ಬಸವಂತಪ್ಪ ಸ್ವತಃ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕೆಲ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದರು. ಇನ್ನುಳಿದ ಅರ್ಜಿಗಳನ್ನು ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಆನಗೋಡು ಹೋಬಳಿ ಕಿತ್ತೂರು ಗ್ರಾಮದ 24 ಮಹಿಳಾ ಫಲಾನುಭವಿಗಳು ''''ನಮ್ಮ ಭೂಮಿ ನಮ್ಮ ತೋಟ'''' ಯೋಜನೆಯಡಿ ಗ್ರಾಮದಲ್ಲಿ 3 ಎಕರೆ ಜಮೀನು ಗುರುತಿಸಿ, ಪ್ರತಿ ಫಲಾನುಭವಿಗೆ 5 ಗುಂಟೆಯಂತೆ ಸರ್ಕಾರ ಜಮೀನು ಹಂಚಿಕೆ ಮಾಡಿತ್ತು. ತಮಗೆ ಹಕ್ಕುಪತ್ರ ನೀಡಿದ್ದರೂ, 20 ವರ್ಷಗಳಿಂದ ಜಮೀನು ನೋಂದಣಿ ಮಾಡಿಕೊಡದೇ ಸತಾಯಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಕೂಡಲೇ ಜಮೀನನ್ನು ಅಧಿಕೃತವಾಗಿ ತಮಗೆ ನೋಂದಣಿ ಮಾಡಿಕೊಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಮರ್ಪಕವಾಗಿ ವಿತರಿಸುತ್ತಿಲ್ಲವೆಂಬ ದೂರಿಗೆ ಸಚಿವರು ಸ್ಪಂದಿಸಿದರು. ರಾಜ್ಯ ಸರ್ಕಾರದಿಂದ 5 ಕೆಜಿ ಹಾಗೂ ಕೇಂದ್ರ ಸರ್ಕಾರದಿಂದ 5 ಕೆಜಿ ಸೇರಿದಂತೆ ಪ್ರತಿ ಫಲಾನುಭವಿಗೆ ಒಟ್ಟು 10 ಕೆಜಿ ಅಕ್ಕಿ ವಿತರಿಸಬೇಕಿದೆ. ಆದರೆ, ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ 2 ಅಥವಾ 3 ಕೆಜಿ ಅಕ್ಕಿ ಮಾತ್ರ ನೀಡುತ್ತಿರುವ ದೂರು ಇವೆ. ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಪಡಿತರ ಕಡಿತಗೊಳಿಸಿ, ಆ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು. ನಿವೇಶನ ಮಂಜೂರಾತಿ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಪಡಿತರ ಚೀಟಿ ಹಾಗೂ ಸಮರ್ಪಕ ಪಡಿತರ ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದವು.
- - -(ಬಾಕ್ಸ್-3)
*ದಾವಣಗೆರೆ: ಸರ್ಕಾರಿ ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲಿ. ಜೀವನೋಪಾಯಕ್ಕಾಗಿ ಅಲ್ಪ ಪ್ರಮಾಣದ ಜಮೀನು ಅವಲಂಬಿಸಿದ ಬಡ ರೈತರಿಗೆ ತೊಂದರೆ ನೀಡದೆ, ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ಕಂದನಕೋವಿ, ಕಬ್ಬೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಭೂ ಸಮಸ್ಯೆ ಬಗೆಹರಿಸಿ, ಅರ್ಹರಿಗೆ ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಮಂಜೂರಾದ ಜಮೀನು ರೈತರಲ್ಲೇ ಉಳಿಯುವಂತೆ ನೋಡಿಕೊಳ್ಳಬೇಕು. ಹೆಚ್ಚುವರಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆದು ನಿವೇಶನ ಹಂಚಿಕೆಗೆ ಬಳಸಿಕೊಳ್ಳುವ ಉದ್ದೇಶವಿದೆ ಎಂದರು.ಅಧಿಕಾರಿಗಳು ಯಾವುದೇ ವ್ಯಕ್ತಿಯ ಪರ ಅಥವಾ ವಿರೋಧವಾಗಿ ಕೆಲಸ ಮಾಡದೇ ಕಾನೂನು ಚೌಕಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಿ. ರೈತರು ಸಲ್ಲಿಸುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ, ಅರ್ಹರಿಗೆ ನ್ಯಾಯ ಒದಗಿಸಿ. ಸಾಧ್ಯವಾದಷ್ಟು ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸಿ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದ ಬಗ್ಗೆ ವರದಿ ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
- - -(ಟಾಪ್ ಕೋಟ್)
ಮಾಯಕೊಂಡ ಕ್ಷೇತ್ರದ ಅಣಜಿಯಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ ನೀಡಿದ್ದೇವೆ. ಬಸವಾಪಟ್ಟಣದವರೆಗೂ ಹಂತ ಹಂತವಾಗಿ ಆಂದೋಲನ ನಡೆಸಲಾಗುವುದು. ಅಧಿಕಾರಿಗಳು ಜನರನ್ನು ಕಚೇರಿಗೆ ಅಲೆದಾಡಿಸದೆ ಸಮಸ್ಯೆಗೆ ತ್ವರಿತ ಪರಿಹಾರ ಕಲ್ಪಿಸಬೇಕು. ಪ್ರತಿ ತಿಂಗಳ 1 ಮತ್ತು 3ನೇ ಶನಿವಾರದ ಸಭೆಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು.- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.
- - --21ಕೆಡಿವಿಜಿ7: ದಾವಣಗೆರೆ ತಾ. ಅಣಜಿ ಗ್ರಾಮದಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ ನೀಡಿ, ಜನರಿಂದ ಅಹವಾಲು ಸ್ವೀಕರಿಸಿದರು.
-21ಕೆಡಿವಿಜಿ9: ದಾವಣಗೆರೆ ತಾ. ಅಣಜಿಯಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ ನೀಡಿದರು.-21ಕೆಡಿವಿಜಿ10: ದಾವಣಗೆರೆ ತಾ. ಅಣಜಿ ಗ್ರಾಮದಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ ನೀಡಿ, ವಿವಿಧ ಸ್ಟಾಲ್ಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲಿಸಿದರು.