ತರೀಕೆರೆ: ಕಾಡಾನೆಗಳ ಹಾವಳಿಗೆ ಅಪಾರ ಪ್ರಮಾಣದ ಬೆಳೆ ನಾಶ

KannadaprabhaNewsNetwork |  
Published : Mar 24, 2026, 01:15 AM IST
ತರೀಕೆರೆ ಸಮೀಪದ ಅತ್ತಿಗನಾಳು ಮತ್ತು ದ್ಯಾಂಪುರ ಮತ್ತಿತರ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಾವಳಿಯಿಂದ ಅಡಿಕೆ-ಬಾಳೆ-ತೆಂಗು ನಾಶ | Kannada Prabha

ಸಾರಾಂಶ

ತರೀಕೆರೆಪಟ್ಟಣದಿಂದ ಕೇವಲ ಐದು ಕಿಲೋ ಮೀಟರ್ ದೂರದ ಅತ್ತಿಗನಾಳು ಮತ್ತು ದ್ಯಾಂಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುಮಾರು 3-4 ಕಾಡಾನೆಗಳು ದಾಳಿ ಮಾಡಿ ಅಡಕೆ, ತೆಂಗು, ಬಾಳೆ ಮತ್ತಿತರ ಬೆಳೆ ಮತ್ತು ತಂತಿ ಬೇಲಿಗಳನ್ನು ನಾಶ ಮಾಡಿವೆ.

ಯಿಂದ ಅಡಿಕೆ-ಬಾಳೆ-ತೆಂಗು ನಾಶ । ಕಾಡಾನೆಗಳ ಹಾವಳಿಯಿಂದ ಆಪಾರ ಪ್ರಮಾಣದ ಬೆಳೆಗಳ ನಾಶ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದಿಂದ ಕೇವಲ ಐದು ಕಿಲೋ ಮೀಟರ್ ದೂರದ ಅತ್ತಿಗನಾಳು ಮತ್ತು ದ್ಯಾಂಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುಮಾರು 3-4 ಕಾಡಾನೆಗಳು ದಾಳಿ ಮಾಡಿ ಅಡಕೆ, ತೆಂಗು, ಬಾಳೆ ಮತ್ತಿತರ ಬೆಳೆ ಮತ್ತು ತಂತಿ ಬೇಲಿಗಳನ್ನು ನಾಶ ಮಾಡಿವೆ.ಅತ್ತಿಗನಾಳು ಗ್ರಾಮದ ಸರ್ವೇ ನಂ.120.ರಲ್ಲಿ ರಂಗಸ್ವಾಮಿ ಜಮೀನಿನ ಸಿಸಿ ಕ್ಯಾಮರದಲ್ಲಿ ಭಾನುವಾರ ಸಂಜೆ 6.50ರ ಸುಮಾರಿಗೆ ಒಂದು ಮರಿ ಆನೆ ಮತ್ತು 2 ದೊಡ್ಡಾನೆಗಳು ಇವರ ಜಮೀನಿನ ಪಕ್ಕದಲ್ಲೇ ತಿರುಗಾಡುತ್ತಿರುವುದು ಕಂಡು ಬಂದಿವೆ. ಅತ್ತಿಗನಾಳು ಅರಣ್ಯ ಭಾಗದಿಂದ ಬಂದ ಈ ಆನೆಗಳು ಅತ್ತಿಗನಾಳು ಮತ್ತು ದ್ಯಾಂಪುರ ಭಾಗದ ಹಲವಾರು ರೈತರ ತೋಟಗಳಿಗೆ ಹಾಕಿರುವ ಸೋಲಾರ್ ಐಬಿಎಕ್ಸ್ ತುಳಿದು, ಒಳ ನುಗ್ಗಿ ಹಾಳುಮಾಡಿವೆ. ನಂತರ ಭದ್ರಾ ಮೇಲ್ದಂಡೆ ನಾಲೆಗೆ ನಿರ್ಮಿಸಿದ ಸೇತುವೆಯಿಂದ ರಾ. ಹೆದ್ದಾರಿ 206 ರ ಬೈಪಾಸ್ ರಸ್ತೆಗೆ ಬಂದಿವೆ ಎಂದು ಆ ಭಾಗದ ರೈತರು ತಿಳಿಸಿದ್ದಾರೆ.

ಕಾಡಾನೆಗಳ ಉಪಟಳದಿಂದ ಅಪಾರ ಪ್ರಮಾಣದ ಬೆಳೆಗಳನ್ನು ಪ್ರತಿ ವರ್ಷ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ತೋಟ ಗಳಲ್ಲಿರುವ ಕೊಳವೆಬಾವಿಗಳಿಗೆ ಅಳವಡಿಸಿದ ಮೋಟಾರ್ ಮತ್ತು ಪೈಪ್ ಕಿತ್ತಿವೆ. ಅರಣ್ಯ ಅಧಿಕಾರಿಗಳು ಕೂಡಲೆ ಕ್ರಮವಹಿಸಿ ನಾಡಿನತ್ತ ಆನೆಗಳು ಬರುವುದನ್ನು ನಿಯಂತ್ರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.ಈಗಾಗಲೇ ಗುಡ್ಡದಬಸವನಹಳ್ಳಿ ಕಡೆಯಿಂದ ಅತ್ತಿಗನಾಳು ಸರ್ವೇ ನಂ. 120 ರ ವರೆಗೆ, ಕಂಚೇನಹಳ್ಳಿಯಿಂದ ದ್ಯಾಂಪು ರದ ಗಡಿವರೆಗೆ , ಅತ್ತಿಗನಾಳು ಸರ್ವೇ ನಂ 120 ರ ವರೆಗೆ ಇಪಿಟಿ ಟ್ರಂಚ್ ತೆಗೆಯಲಾಗಿದೆ. ಈ ಸರ್ವೇ ನಂಬರ್ ನ ರೈತರ ಜಮೀನುಗಳನ್ನು ಸುತ್ತುವರೆದು 1.7 ಕಿ.ಮೀ. ಸಿಪಿಟಿ ತೆಗೆಯಲಾಗಿದೆ. ಅದರಲ್ಲೇ ಅತೀ ಶೀಘ್ರ ಇಪಿಟಿ ಟ್ರಂಚ್ ತೆಗೆದರೆ ಈ ಭಾಗದಲ್ಲಿ ಆನೆಗಳನ್ನು ಸಂಪೂರ್ಣ ನಿಯಂತ್ರಿಸಿದಂತಾಗುತ್ತದೆ ಎಂದು ಈ ಭಾಗದ ನೊಂದ ರೈತರು ತಿಳಿಸಿದ್ದಾರೆ.ಕೋಟ್ಃ

ತರೀಕೆರೆ ಸಮೀಪದ ಅತ್ತಿಗನಾಳು, ದ್ಯಾಂಪುರ, ಗುಡ್ಡದ ಬಸವನಹಳ್ಳಿ, ಭೈರಾಪುರ, ಮಲ್ಲಿಗೇನಹಳ್ಳಿ, ಕಂಚೇನಹಳ್ಳಿ ಈ ಗ್ರಾಮಗಳ ಸುತ್ತಮುತ್ತ ಪದೇ ಪದೇ ಕಾಡಾನೆಗಳು ರೈತರು ಬೆಳೆದ ಮತ್ತು ಫಲ ನೀಡುತ್ತಿರುವ ತೆಂಗು, ಅಡಕೆ, ಬಾಳೆ ಮಾವು ಬೆಳೆ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ಜೋಳ ಹುರುಳಿಗಳನ್ನು ತಿಂದು ತುಳಿದು ನಾಶ ಮಾಡುತ್ತಿರು ವುದರಿಂದ ಪ್ರತಿವರ್ಷ ರೈತರು ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಕಾಡಾನೆಗಳು ದಾಟದಂತೆ ಇಪಿಟಿ ನಿರ್ಮಿಸಲು ಇಲಾಖೆಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಕ್ರಮ ವಹಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ

ಕೆ.ನಾಗರಾಜ್, ರೈತ --

23ಕೆಟಿಆರ್.ಕೆ. 10ಃ ಭಾನುವಾರ ರಾತ್ರಿ ಅತ್ತಿಗನಾಳು ಗ್ರಾಮ ಸರ್ವೇ ನಂ. 120 ರ ಪಕ್ಕದ ರೈತರ ಜಮೀನಿನಲ್ಲಿ ಕಾಡಾನೆಗಳು ಹಾವಳಿ ಮಾಡಿ ತಂತಿ ಬೇಲಿ ಮತ್ತು ಅಡಕೆ ಮರವನ್ನು ಮುರಿದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯ
ವಾಗಟ ಯೋಗಪುರಿ ವರದರಾಜಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ