ಕನ್ನಡಪ್ರಭ ವಾರ್ತೆ ತರೀಕೆರೆ
ಅವರು, ಪುರಸಭಾ ಕಾರ್ಯಾಲಯ ವತಿಯಿಂದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಎಸ್ಎಫ್‌ಸಿ ಮುಕ್ತನಿಧಿ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನದಲ್ಲಿ ಅಂದಾಜು 28.40 ಲಕ್ಷ ಮೊತ್ತದಲ್ಲಿ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನೆಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡುತ್ತಿದ್ದರು.
ಎಂ.ಜಿ.ರಸ್ತೆ ತುಂಬಾ ಹಾಳಾಗಿದ್ದು, ಬಹಳ ದಿನಗಳ ನಂತರ ಎಂ.ಜಿ.ರಸ್ತೆ ಡಾಂಬರೀಕರಣ ಕಾರ್ಯ ನೆಡಯುತ್ತಿದೆ, ಕಾಮಗಾರಿ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು ಎಂದು ಅವರು ಹೇಳಿದರು.ಪುರಸಭಾ ಸದಸ್ಯ ಟಿ.ದಾದಾಪೀರ್ ಮಾತನಾಡಿ, ವಾರ್ಡ್ ನಂ.17 ಮತ್ತು 20ರಲ್ಲಿ ರಸ್ತೆಯ ಎರಡೂ ಭಾಗದಲ್ಲಿ ಪಾದಚಾರಿಗಳು ಸಂಚರಿಸಲು ಅನುಕೂಲವಾಗುವಂತೆ ಇಂಟರ್ ಲಾಕ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯರಾದ ಟಿ.ಜಿ.ಅಶೋಕ್ ಕುಮಾರ್, ಟಿ.ಜಿ.ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ಹೆಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.
----ಫೋಟೋ: ತರೀಕೆರೆಯಲ್ಲಿ ಎಂ.ಜಿ.ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪುರಸಭೆ ಅಧ್ಯಕ್ಷರು ವಸಂತಕುಮಾರ್ ಪರಿಶೀಲಿಸಿದರು. ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಟಿ.ಎಂ.ಬೋಜರಾಜ್, ಟಿ.ಜಿ.ಲೋಕೇಶ್, ಟಿ.ಜಿ.ಅಶೋಕ ಕುಮಾರ್, ಮುಖ್ಯಾದಿಕಾರಿ ಹೆಚ್.ಪ್ರಶಾಂತ್ ಇದ್ದಾರೆ.
22ಕೆಟಿಆರ್.ಕೆ.1