ತರೀಕೆರೆ: ರಾಷ್ಟ್ರೀಯ ಹೆದ್ದಾರಿ 206 ಬಳಿ ಶ್ರೀಗಂಧ ಮರ,ಗಿಡಗಳ ತೆರವು ಕಾರ್ಯ ಪ್ರಾರಂಭ

KannadaprabhaNewsNetwork |  
Published : Feb 10, 2026, 01:15 AM IST
ತರೀಕೆರೆ ರಾಷ್ಟ್ರೀಯ ಹೆದ್ದಾರಿ 206 ಬಳಿ ಜೆಸಿಬಿಯಿಂದ ಶ್ರೀಗಂಧ ಗಿಡಗಳ ತೆರುವು ಕಾರ್ಯ ಪ್ರಾರಂಭ | Kannada Prabha

ಸಾರಾಂಶ

ತರೀಕೆರೆ ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಅವರ ವಾಗ್ವಾದ ಮತ್ತು ಪ್ರತಿಭಟನೆ ನಡುವೆಯೇ ನ್ಯಾಯಾಲಯದ ಆದೇಶದಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳು ತಾಲೂಕು ಅಡಳಿತ, ಅರಣ್ಯ ಹಾಗೂ ಪೊಲೀಸ್ ಇಲಾಖೆ ನೆರವಿನಿಂದ, ಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀಗಂಧ ಮರ,ಗಿಡಗಳನ್ನು ಜೆಸಿಬಿಯಿಂದ ತೆರವು ಗೊಳಿಸಿದರು.

ಶ್ರೀಗಂಧ ಬೆಳೆಗಾರ ವಿಶುಕುಮಾರ್ ಅವರ ಪ್ರತಿಭಟನೆ ನಡುವೆಯೇ ಕರ್ತವ್ಯ ನಿರ್ವಹಿಸಿದ ವಿಶೇಷ ಭೂಸ್ವಾಧೀನಾಧಿಕಾರಿಗಳು

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಅವರ ವಾಗ್ವಾದ ಮತ್ತು ಪ್ರತಿಭಟನೆ ನಡುವೆಯೇ ನ್ಯಾಯಾಲಯದ ಆದೇಶದಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳು ತಾಲೂಕು ಅಡಳಿತ, ಅರಣ್ಯ ಹಾಗೂ ಪೊಲೀಸ್ ಇಲಾಖೆ ನೆರವಿನಿಂದ, ಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀಗಂಧ ಮರ,ಗಿಡಗಳನ್ನು ಜೆಸಿಬಿಯಿಂದ ತೆರವು ಗೊಳಿಸಿದರು.

ಪಟ್ಟಣ ಸಮೀಪ ಹಳಿಯೂರು ಬಳಿ ಸ.ನಂ.28 ಮತ್ತು 31ರಲ್ಲಿ ಸ್ಥ ಗಿತಗೊಂಡಿದ್ದ ರಾ.ಹೆ.206 ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದ್ದ ಶ್ರೀಗಂಧ ಮರ, ಗಿಡಗಳನ್ನು ಸೋಮವಾರ ತೆರವು ಗೊಳಿಸುವ ಕಾರ್ಯ ಆರಂಭಿಸಲಾಯಿತು. ತಾನು ಬದುಕಿರುವಾಗಲೇ ತನ್ನ ವೈಕುಂಠ ಸಮಾರಾಧನೆ ಘೋಷಿಸಿಕೊಂಡು ಅಧಿಕಾರಿಗಳ ಕ್ರಮ ಖಂಡಿಸಿದ್ದ ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ತೆರವು ಕಾರ್ಯಾಚರಣೆ ನಿಲ್ಲಿಸಲು ಅಧಿಕಾರಿಗಳೊಡನೆ ವಾಗ್ವಾದ ನಡೆಸಿ ತೀವ್ರವಾಗಿ ವಿರೋಧಿಸಿದರು.ಆದರೆ ಭೂಸ್ವಾಧೀನಾಧಿಕಾರಿಗಳು, ತಾಲೂಕು ಅಡಳಿತ ಮತ್ತು ಅರಣ್ಯ ಇಲಾಖೆ ಶ್ರೀಗಂಧ ಬೆಳೆಗಾರ ಟಿ.ಎನ್. ವಿಶು ಕುಮಾರ್ ಅವರಿಗೆ ನ್ಯಾಯಾಲಯದ ನಿರ್ದೇಶನದ ಮಾಹಿತಿ, ನಂತರ ಕಾರ್ಯಾಚರಣೆ ಬಗ್ಗೆ ವಿವರಣೆ ನೀಡು ನೀಡುತ್ತಲೆ ಶ್ರೀಗಂಧ ಗಿಡಗಳನ್ನು ತೆರವು ಮಾಡಿಸಿದರು. ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ಶ್ರೀಗಂಧ ಮರಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿರುವ ಪರಿಹಾರ ಅವೈಜ್ಞಾನಿಕವಾಗಿದೆ ಶ್ರೀಗಂಧದ ಗಿಡಗಳ ತಪ್ಪು ಅಳತೆಯನ್ನು ಅಧಿಕಾರಿಗಳು ಕೊಟ್ಟಿದ್ದಾರೆ ಎಂದು ಟಿ.ಎನ್.ವಿಶುಕುಮಾರ್ ಆರೋಪಿಸಿದರು.

ಶ್ರೀಗಂಧಕ್ಕೆ ಸೂಕ್ತ ಪರಿಹಾರ ನೀಡಿಲ್ಲ. ಶ್ರೀಗಂಧ ಮರಗಳ ಹತ್ಯೆ ನನ್ನ ಹತ್ಯೆಯಾಗಿದೆ. ಈ ಗಿಡಗಳನ್ನು ನನ್ನ ಮಕ್ಕಳಂತೆ ಸಾಕಿ ಬೆಳೆಸಿದ್ದೇನೆ. ಆ ನೋವು ನನಗಿದೆ ಎಂದು ಕಣ್ಣೀರಿಟ್ಟರು. ಗಿಡಗಳ ಲೆಕ್ಕ ಮತ್ತು ಅಳತೆಯಲ್ಲಿ ವ್ಯತ್ಯಾಸ ಮಾಡಬಾರದು ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿ ಮಾತನಾಡಿ ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸಲಾಗಿದೆ. ಶ್ರೀಗಂಧ ಹೊರತುಪಡಿಸಿ ಬೇರೆ ಬೇರೆ ಮರಗಳಿಗೆ ಪರಿಹಾರ ನೀಡಲಾಗಿದೆ. ಹತ್ತು ವರ್ಷಗಳ ಹಿಂದೆ ಆರಂಭವಾಗಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧ ಪ್ರಾಧಿಕಾರದಿಂದ ಈ ಕ್ರಮ ಕೈಗೊಳ್ಳಲಾಗಿದ್ದು ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ಸದರಿ ಜಾಗ ದಲ್ಲಿ ಸ್ಥಗಿತಗೊಂಡಿತ್ತು, ಇದೀಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೂರ್ಣಗೊಳಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ತಹಸೀಲ್ದಾರ್ ವಿಶ್ವಜಿತ್ ಮೇಹತಾ, ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಉಮ್ಮರ್ ಬಾದ್ ಷಾ, ಆರ್.ಎಫ್.ಒ.ಆಸಿಫ್ ಆಹಮದ್, ಪೊಲೀಸ್ ನೀರೀಕ್ಷಕರಾದ ರಾಮಚಂದ್ರನಾಯಕ್, ಗಿರೀಶ್, ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.-

9ಕೆಟಿಆರ್.ಕೆ.8ಃ ತರೀಕೆರೆ ಸಮೀಪದ ಹಳಿಯೂರು ಬಳಿ ಸ್ತಗಿತಗೊಂಡಿದ್ದ ರಾ.ಹೆ.206 ನಿರ್ಮಾಣ ಕಾರ್ಯಕ್ಕೆ ಅ್ಡಡಿಯಾಗಿದ್ದ ಶ್ರೀಗಂಧ ಗಿಡಗಳನ್ನು ತೆರವು ಗೊಳಿಸುವ ಕಾರ್ಯ ಪ್ರಾರಂಭಿಸಲಾಯಿತು. ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿ, ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ತಹಸೀಲ್ದಾರ್ ವಿಶ್ವಜೀತ್ ಮೇಹತಾ ಮತ್ತಿತರರು ಇದ್ದರು.

-9ಕೆಟಿಆರ್.ಕೆ.9ಃ

ತರೀಕೆರೆ ಸಮೀಪದ ಹಳಿಯೂರು ಬಳಿ ರಾ.ಹೆ.206 ರಸ್ತೆ ನಿರ್ಮಾಣ ಕಾರ್ಯಕ್ಕೆ ಅ್ಡಡಿಯಾಗಿದ್ದ ಶ್ರೀಗಂಧ ಗಿಡಗಳನ್ನು ಜಿಸಿಬಿಯಿಂದ ತೆರವು ಗೊಳಿಸುವ ಕಾರ್ಯ ಪ್ರಾರಂಭಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಔಷಧಿ ಪೂರೈಸದಷ್ಟು ಸರ್ಕಾರ ದಿವಾಳಿಯೇ ? ಸಿಟಿ ರವಿ ಪ್ರಶ್ನೆ
ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಡಾ.ಸುಹಾಸ್