ಇಂದು ಲಕ್ಕವಳ್ಳಿಯಲ್ಲಿ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ

KannadaprabhaNewsNetwork |  
Published : Feb 04, 2024, 01:31 AM IST
ಇಂದು ಲಕ್ಕವಳ್ಳಿಯಲ್ಲಿ ತರೀಕೆರೆ ತಾ.ದ್ವಿತೀಯ ಜಾನಪದ ಸಮ್ಮೇಳನ | Kannada Prabha

ಸಾರಾಂಶ

ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು, ತರೀಕೆರೆ ತಾಲೂಕು ಘಟಕ, ಲಕ್ಕವಳ್ಳಿ ಹೋಬಳಿ ಘಟಕ ದಿಂದ ಲಕ್ಕವಳ್ಳಿಯಲ್ಲಿ ಫೆ.4 ರಂದು ಭಾನುವಾರ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು, ತರೀಕೆರೆ ತಾಲೂಕು ಘಟಕ, ಲಕ್ಕವಳ್ಳಿ ಹೋಬಳಿ ಘಟಕ ದಿಂದ ಲಕ್ಕವಳ್ಳಿಯಲ್ಲಿ ಫೆ.4 ರಂದು ಭಾನುವಾರ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಏರ್ಪಡಿಸಲಾಗಿದೆ.

ಬೆಳಿಗ್ಗೆ 8.30ಕ್ಕೆ ಹೆಸರುಕೊಪ್ಪ ನಿವೃತ್ತ ಶಿಕ್ಷಕ ಎಸ್.ಹೊರಕೇರಪ್ಪ ರಾಷ್ಟ್ರಧ್ವಜಾರೋಹಣ, ಲಕ್ಕವಳ್ಳಿ ಕಜಾಪ ಅಧ್ಯಕ್ಷ ಕೆ.ಪಾಂಡರಂಗ ನಾಡ ಧ್ಜಜಾರೋಹಣ, ಜಾನಪದ ದ್ವಜಾರೋಹಣ ನೆರವೇರಿಸಲಿದ್ದು, ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಗ್ರಾ.ಜ್ಯೋ.ವಿ.ಸಂಸ್ಥೆ ನಿವೃತ್ತ ಶಿಕ್ಷಕ ಬಾಲಕೃಷ್ಣ ಪುರಾಣಿಕ್ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾರಂಭ ಉದ್ಘಾಟಿಸಲಿದ್ದು, ಕಜಾಪ ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್ ಪ್ರಾಸ್ತಾವಿಕ ನುಡಿ, ಸಾಂತವೇರಿ ಸಾಂಸ್ಕೃತಿಕ ಚಿಂತಕರು ವೇಲಾಯುಧನ್ ಅಶಯ ನುಡಿ, ತಾಪಂ ಮಾಜಿ ಅಧ್ಯಕ್ಷ ಎಲ್.ಎ.ಅನ್ಬು ಸಮ್ಮೇಳನಾಧ್ಯಕ್ಷರ ಕುರಿತು ಅಭಿನಂದನಾ ನುಡಿ ನುಡಿಯಲ್ಲಿದ್ದಾರೆ. ತರೀಕೆರೆ ಕಜಾಪ ಅಧ್ಯಕ್ಷ ಆರ್. ನಾಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರು ಲಕ್ಕವಳ್ಳಿ ಮಲ್ಲಿಕಾರ್ಜುನ ಜಾದವ್ ಉಪಸ್ಥಿರಿರುತ್ತಾರೆ.

ಮಧ್ಯಾನ್ಹ 2 ಕ್ಕೆ ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಾನಪದ ಗೋಷ್ಠಿ ನಡೆಯಲಿದ್ದು, ಕುವಿವಿ ಜಾನಪದ ತಜ್ಞರು ಪ್ರೋ.ಬಸವರಾಜ ನೆಲ್ಲಿಸರ ಜನಪದ ಕಲೆಗಳಲ್ಲಿ ಜೀವನ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಕಲಾ ವೈಭವವನ್ನು ಅಜ್ಜಂಪುರ ರಂಗಸಂಘಟಕ ಎ.ಸಿ.ಚಂದ್ರಪ್ಪ ಮತ್ತು ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಸಂಜೆ 4. 30ಕ್ಕೆ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದು, ಲಕ್ಕವಳ್ಳಿ ಕಜಾಪ ಗೌರವಾಧ್ಯಕ್ಷ ಸೀನೋಜಿರಾವ್ ಸೂರ್ಯವಂಶಿ ಅಧ್ಯಕ್ಷತೆ ವಹಿಸಲಿದ್ದು, ಸುದ್ದಿ ಅಕ್ಷಯ ಪತ್ರಿಕೆ ಸಂಪಾದಕರು ಎನ್.ರಾಜು ಸಮಾರೋಪ ನುಡಿ ನುಡಿಯಲಿದ್ದಾರೆ.

ಲಕ್ಕವಳ್ಳಿ ಮಲ್ಲಿಕಾರ್ಜುನರಾವ್ ಜಾದವ್ ಕಿರುಪರಿಚಯ: ತರೀಕೆರೆ ತಾಲೂಕು ಲಕ್ಕವಳ್ಳಿಯ ಜಾನಪದ ಕಲಾವಿದರಾದ ಮಲ್ಲಿಕಾರ್ಜುನರಾವ್ ಜಾದವ್ ತಾಲೂಕು ದ್ವಿತೀಯ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಲಾವಿದ ಲಕ್ಕವಳ್ಳಿ ಮಲ್ಲಿಕಾರ್ಜುನರಾವ್ ಜಾದವ್ , ರೈತಾಪಿ ಜೀವನ ನಡೆಸಿಕೊಂಡು ಬಿಡುವಿನ ವೇಳೆಯಲ್ಲಿ ಹಿರಿಯರ ಜೊತೆಗೆ ಭಜನೆ ಮಾಡುತ್ತಾ ಭಜನೆ ಗೀಳು ಹಚ್ಚಿಕೊಂಡು, ಊರು ಊರುಗಳಲ್ಲಿ ಭಜನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾದವ್ ಅವರು ಸಂಗಡಿಗರ ಜೊತೆಯಲ್ಲಿ ಶನಿದೇವರ ಕಥೆ, ಕೀಲು ಕುದುರೆ ಇತ್ಯಾದಿ ಕಾರ್ಯಕ್ರಮ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2014ರಲ್ಲಿ ಅಖಿಲ ಭಾರತ ಪತ್ರಿಕಾ ಸಂಪಾದಕರ ದ್ವಿತೀಯ ಸಮಾವೇಶದಲ್ಲಿ ಭಾಗಿಯಾಗಿ ನಯನ ಕಲಾ ಮಂದಿರದಲ್ಲಿ ಜಾನಪದ ಕಲಾವಿದ ಎಂಬ ಪ್ರಶಸ್ತಿ ಪಡೆದಿದ್ದಾರೆ, ಇವರ ಜಾನಪದ ಕಲಾ ಸೇವೆ ಗುರುತಿಸಿ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತರೀಕೆರೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಆರ್.ನಾಗೇಶ್ ತಿಳಿಸಿದ್ದಾರೆ.3ಕೆಟಿಆರ್.ಕೆ.1ಃ

ತರೀಕೆರೆ ತಾಲೂಕು ಲಕ್ಕವಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಹಮ್ಮಿಕೋಳ್ಳಲಾಗಿದೆ.3ಕೆಟಿಆರ್.ಕೆ.2ಃ

ಸಮ್ಮೇಳನಾಧ್ಯಕ್ಷರು ಮತ್ತು ಜಾನಪದ ಕಲಾವಿದರಾದ ಮಲ್ಲಿಕಾರ್ಜುನರಾವ್ ಜಾದವ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು