ತೆರಿಗೆ ಕಾರ್ಯಾಗಾರ ಯಶಸ್ವಿ

KannadaprabhaNewsNetwork |  
Published : Oct 12, 2025, 01:01 AM IST
ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ತೆರಿಗೆ ಕಾರ್ಯಗಾರಕ್ಕೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಜಿ.ಕುಮಾರ ನಾಯಕ್ ಚಾಲನೆ ನೀಡಿದರು.  | Kannada Prabha

ಸಾರಾಂಶ

ತೆರಿಗೆ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದಾಗುವ ಅನುಕೂಲಗಳು ಹಾಗೂ ತೆರಿಗೆ ಸಂಬಂಧಿಸಿದಂತೆ ಇರುವ ಅನೇಕ ಮಾನದಂಡಗಳು ಕುರಿತು ವಿವರಿಸಿದರು.

ಬಳ್ಳಾರಿ: ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಂಗಣದಲ್ಲಿ ತೆರಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಜಿ.ಕುಮಾರ ನಾಯಕ್ ಮಾತನಾಡಿ, ತೆರಿಗೆ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದಾಗುವ ಅನುಕೂಲಗಳು ಹಾಗೂ ತೆರಿಗೆ ಸಂಬಂಧಿಸಿದಂತೆ ಇರುವ ಅನೇಕ ಮಾನದಂಡಗಳು ಕುರಿತು ವಿವರಿಸಿದರು.ಪ್ರಾಸ್ತಾವಿಕ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ,

ಸಂಸ್ಥೆಯು ಜನಪರವಾಗಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ನಮ್ಮ ಸಂಸ್ಥೆಯು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಭವಿಷ್ಯದ ಉದ್ಯಮಿಗಳಿಗಾಗಿ ಇಂಕ್ಯುಬೇಷನ್ ಸೆಂಟರ್ ಪ್ರಾರಂಭಿಸಿದೆ. ವಿವಿಧ ವಿಷಯಗಳ ತಜ್ಞರು - ಪರಿಣಿತರು ಉದ್ಯಮದ ಆರಂಭದಿಂದ ಮಾರುಕಟ್ಟೆಯವರೆಗೂ ಎಲ್ಲ ಹಂತದಲ್ಲೂ ಸಲಹೆ- ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಸಂಪನ್ಮೂಲವ್ಯಕ್ತಿ ಜಸ್ಟಿನ್ ಕ್ರಿಸ್ಟಪರ್ ಅವರು, ಸ್ಪಾಂಜ್ ಐರನ್, ಮೆಡಿಕಲ್, ಕಿರಾಣಿ, ಕೋಲ್ಡ್ ಸ್ಟೋರೇಜ್, ಕಾಟನ್‌ಮಿಲ್ ಸೇರಿ ವಿವಿಧ ಕ್ಷೇತ್ರಗಳಲ್ಲಿಯ ತೆರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಟ್ಯಾಕ್ಸ್ ಪ್ರಾಕ್ಟೀಷನರ್ ಶ್ರೀಧರ ಪಾರ್ಥಸಾರಥಿ ಅವರು, ವಿವಿಧ ಬಗೆಯ ತೆರಿಗೆ ಪಾವತಿಗಳು, ಗೊಂದಲ - ಸಮಸ್ಯೆಗಳು, ತಾಂತ್ರಿಕ ತೊಡಕುಗಳು ಹಾಗೂ ಪರಿಹಾರೋಪಾಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್‌ ಸಹಾಯಕ ಆಯುಕ್ತ ಎನ್.ಎಂ.ಗಣೇಶ್, ಆಲ್ ಇಂಡಿಯಾ ಟ್ಯಾಕ್ಸ್ ಪೇಯರ್ಸ್ ಒಕ್ಕೂಟದ ಅಧ್ಯಕ್ಷರಾಗಿರುವ ಎಸ್.ಆರ್. ಮಠಪತಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಮರ್ಚೆಡ್ ಮಲ್ಲಿಕಾರ್ಜುನಗೌಡ, ಹಿರಿಯ ವಕೀಲ ಅಪ್ಪಯ್ಯ ಭಟ್, ಕೆಪಿಸಿಇಎಸ್‌ಸಿಯ ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ಕೆ.ಬಿ.ಸಂಜೀವ್ ಪ್ರಸಾದ್, ಟ್ಯಾಲಿ ಸೆಲ್ಯೂಷನ್ಸ್‌ ರವಿ ತಾಳಿಕೋಟೆ ಹಾಗೂ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು, ವಿ.ರಾಮಚಂದ್ರ ಮತ್ತಿತರರಿದ್ದರು. ಕೆ.ರಾಜಶೇಖರ ಹಾಗೂ ವೆಂಕಟೇಶ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಟ್ಯಾಕ್ಸ್ ಪ್ರಾಕ್ಟೀಷರ‍್ಸ್ ಇಂಡಿಯಾ, ಬಳ್ಳಾರಿ ಟ್ಯಾಕ್ಸ್ ಪ್ರಾಕ್ಟೀಷರ‍್ಸ್ ಅಸೋಸಿಯೇಷನ್, ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ‍್ಸ್ ಸ್ಟೀರಿಂಗ್ ಕಸ್ಟೋರಿಯ ಹಾಗೂ ಚೇತನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಸೆಲ್ಯೂಷನ್ಸ್ ಅವರ ಜಂಟಿ ಆಶ್ರಯದಲ್ಲಿ `ತೆರಿಗೆ’ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ