ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ; ನಂಜಾವಧೂತ ಶ್ರೀ

KannadaprabhaNewsNetwork |  
Published : Dec 07, 2025, 02:15 AM IST
೬ಶಿರಾ೩: ಶಿರಾ ತಾಲೂಕಿನ ನಾದೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶ್ರೀ ನಂಜಾವಧೂತ ಶ್ರೀಗಳು ಭಾಗವಹಿಸಿ ಶುಭಕೋರಿದರು. | Kannada Prabha

ಸಾರಾಂಶ

ನಾಡಿನ ಹಿತ, ಅಭಿವೃದ್ಧಿ, ಆಡಳಿತ ಸುಧಾರಣೆಗಾಗಿ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರರವರ ಅನುಭವ ಅಗತ್ಯವಾಗಿದ್ದು, ಇಂತಹ ಮುತ್ಸದ್ದಿ ರಾಜಕಾರಣಿಗೆ ಸಚಿವ ಸ್ಥಾನ ನೀಡಲೇಬೇಕು.

ಕನ್ನಡಪ್ರಭ ವಾರ್ತೆ ಶಿರಾ

ನಾಡಿನ ಹಿತ, ಅಭಿವೃದ್ಧಿ, ಆಡಳಿತ ಸುಧಾರಣೆಗಾಗಿ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರರವರ ಅನುಭವ ಅಗತ್ಯವಾಗಿದ್ದು, ಇಂತಹ ಮುತ್ಸದ್ದಿ ರಾಜಕಾರಣಿಗೆ ಸಚಿವ ಸ್ಥಾನ ನೀಡಲೇಬೇಕು. ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಯಚಂದ್ರರವರ ಸೇವೆ ಸರಕಾರಕ್ಕೆ ಅಗತ್ಯವಾಗಿ ಬೇಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಅಗ್ರಹಿಸಿದರು.

ಅವರು ತಾಲೂಕಿನ ನಾದೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿ ಮಾತನಾಡಿದರು. ಶಿರಾ ತಾಲೂಕಿಗೆ ಹೇಮಾವತಿ, ಎತ್ತಿನಹೊಳೆ, ಅಪ್ಪರ ಭದ್ರ ನೀರಾವರಿ ಯೋಜನೆಯಡಿ ಮೂರು ನದಿಗಳ ಸಂಗಮ ಮಾಡಿದ ಕೀರ್ತಿ ಜಯಚಂದ್ರ ರವರಿಗೆ ಸಲ್ಲುತ್ತದೆ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಹಲವಾರು ರಾಜಕಾರಣಿಗಳ ಪ್ರಯತ್ನ ಇದ್ದರೂ ಕೂಡ ಯೋಜನೆ ಯಶಸ್ವಿಗೊಳಿಸಿ, ಹೇಮಾವತಿ ನೀರಿನಿಂದ ಮದಲೂರು ಕೆರೆ ಭರ್ತಿಯಾಗಲು ಜಯಚಂದ್ರ ಅವರ ಕೊಡುಗೆ ಅಪಾರ. ನಮಗೆ ವಿಶ್ವಾಸವಿದ್ದು ಮುಂಬರುವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಲ್ಲಿ ಟಿ.ಬಿ. ಜಯಚಂದ್ರ ಅವರಿಗೆ ಮಂತ್ರಿ ಸ್ಥಾನ ಸಿಕ್ಕೆ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಮಧುಸೂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಕ್ಷಿತಾ ಆರ್. ಕೆ. ಮಾರುತಿ, ಮಾಜಿ ಅಧ್ಯಕ್ಷರುಗಳಾದ ಮೆಹರ್ ತಾಜ್ ಬಾಬು, ಪಾರ್ವತಮ್ಮ, ಮೇಘಶ್ರೀ ನವೀನ್, ಕಲ್ಲೇಗೌಡ, ಸದಸ್ಯರಾದ ಮಂಜುನಾಥ ಸ್ವಾಮಿ, ಪಿ.ಬಿ.ನಾಗರಾಜು, ಭೂತರಾಜು, ವಿಜಯಕುಮಾರ್ ,ಮಂಜುನಾಥ್, ರಾಮಣ್ಣ, ಲಕ್ಷ್ಮಮ್ಮ, ನಾದೂರು ಲಕ್ಷ್ಮಮ್ಮ, ಸುನಂದಮ್ಮ, ಪಿಡಿಒ ಮಹೇಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ , ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ