ಮಕ್ಕಳಿಗೆ ತಕ್ಕ ಆಟ ಪಾಠ ಕಲಿಸಿ: ಬಾಲಶೇಖರ ಬಂದಿ

KannadaprabhaNewsNetwork |  
Published : Jan 11, 2024, 01:30 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಆಟಪಾಠಗಳಲ್ಲಿ ಮಕ್ಕಳು ಮುಂದೆ ಬರುವಂತೆ ಪೋಷಕರು, ಶಿಕ್ಷಕರು ಗಮನಿಸಬೇಕು ಎಂದು ಪ್ರಾಚಾರ್ಯ ಅನೀಲಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಕ್ಕಳು ಯಾವುದೇ ತರಗತಿಯಲ್ಲಿದ್ದರೂ ಅವರಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ತಕ್ಕ ಆಟ ಪಾಠಗಳನ್ನು ಕಲಿಸುವುದು ಪ್ರತಿಯೊಬ್ಬ ಶಿಕ್ಷಕರ ಪಾತ್ರವಾಗಿದೆ. ಮಕ್ಕಳಲ್ಲಿರುವ ತಪ್ಪುಗಳನ್ನು ತಿದ್ದಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುವವರೆ ನಿಜವಾದ ಶಿಕ್ಷಕರು ಎಂದು ಕೆ.ಜೆ ಸೋಮಯ್ಯ ಆಂಗ್ಲ ಮಾದ್ಯಮ ಶಾಲೆಯ ಪ್ರಾಚಾರ್ಯ ಸಿ.ಅನೀಲಕುಮಾರ ಹೇಳಿದರು.

ಬುಧವಾರ ಸಮೀರವಾಡಿ ಕೆ.ಜೆ ಸೋಮಯ್ಯ ಶಾಲೆಯಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಹಾಗೂ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದು ಎಷ್ಟು ಮಹತ್ವ ಇದೆಯೋ ಅಷ್ಟೆ ಅವರನ್ನು ಆಟಪಾಠಗಳಲ್ಲಿಯೂ ಮುಂದೆ ಬರುವಂತೆ ಮಾಡುವುದು ತಂದೆ-ತಾಯಿ, ಪಾಲಕರು ಶಿಕ್ಷಕರ ಕೆಲಸವಿದೆ ಎಂದರು.

ಮಕ್ಕಳಿಗೆ ಈಗಿನಿಂದಲೇ ವೇದಿಕೆ ಮೇಲೆ ಬಂದು ತಮ್ಮ ಪ್ರತಿಭೆಗಳನ್ನು ತೋರಿಸುವ ಧೈರ್ಯ ಮಾಡಬೇಕು. ಅಂದಾಗ ಅವರು ಮುಂದೆ ಒಂದು ದಿನ ದೊಡ್ಡ ವೇದಿಕೆಗಳಲ್ಲಿಯೂ ಧೈರ್ಯದಿಂದ ತಮ್ಮ ಸಾಮರ್ಥ್ಯ ತೋರಿಸುತ್ತಾರೆ. ಕಾರಣ ಪ್ರತಿಯೊಬ್ಬರಿಗೂ ಬರೀ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ ಎಂಥ ಪರಿಸ್ಥಿತಿ ಬಂದರೂ ಗಟ್ಟಿತನದಿಂದ ಬದುಕು ನಡೆಸುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಡಾ.ಪ್ರತಿಭಾ ಮುರಗೋಡ ಮಾತನಾಡಿ, ಮಕ್ಕಳ ಪಾಲಕರು ಇತ್ತೀಚೆಗೆ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ಕೈಗೆ ಮೊಬೈಲ್‌ ಕೊಡುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಮಕ್ಕಳ ಕಣ್ಣಿಗೆ ಮಾತ್ರವಲ್ಲದೆ ಅವರ ಮುಂದಿನ ಜೀವನಕ್ಕೂ ಇದರಿಂದ ಹಾನಿಯಾಗುತ್ತದೆ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್‌ ಕೊಡುವ ಬದಲು ತಂದೆ-ತಾಯಿಗಳು ಬೇರೆ ಬೇರೆ ಪಠ್ಯಗಳ ಜೋತೆ ಆಟವಾಡುವುದನ್ನು ಕಲಿಸುತ್ತ ಪಾಠ ಮಾಡಬೇಕು. ಇಂದರಿಂದ ಮಕ್ಕಳಲ್ಲಿ ಲವಲವಿಕೆ ಹೆಚ್ಚಾಗುತ್ತದೆ ಎಂದರು.

ಯಾರ ಮಕ್ಕಳು ಕೂಡ ಹುಟ್ಟಿನಿಂದಲೇ ದಡ್ಡರಾಗಿರುವುದಕ್ಕೆ ಸಾಧ್ಯವಿಲ್ಲ. ಅವರನ್ನು ಅವರ ಬುದ್ಧಿಮಾಂದ್ಯಕ್ಕೆ ತಕ್ಕಂತೆ ಕಲಿಸುತ್ತಾ ಹೋದಾಗ ಮಾತ್ರ ಅವರು ಮುಂದೆ ಬರಲು ಸಾಧ್ಯ. ಮಕ್ಕಳನ್ನು ಬರೀ ಶಾಲೆಗೆ ಕಳಿಸಿದರೆ ಸಾಲದು ಅವರು ದಿನಾಲು ಮನೆಗೆ ಬಂದಾಗ ಶಾಲೆಯಲ್ಲಿ ಏನು ಕಲಿಸಿದ್ದಾರೆ ಎಂಬುದನ್ನು ನಿತ್ಯ ಪರಿಶೀಲನೆ ಮಾಡುತ್ತಿರಬೇಕು. ಮಕ್ಕಳೊಂದಿಗೆ ನಾವು ಮಕ್ಕಳಾಗಿ ಕಲಿಸುವುದನ್ನು ಕಲಿಯಬೇಕು ಅಂದಾಗ ಮಕ್ಕಳು ಪ್ರಗತಿ ಹೊಂದಲು ಸಾಧ್ಯ ಎಂದರು.

ಇದಕ್ಕೂ ಮುನ್ನ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ನರ್ಸರಿಯಿಂದ ಎಲ್.ಕೆ.ಜಿ ಯುಕೆಜಿಯವರೆಗಿನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪಾಲಕರಿಗೂ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಮಹೇಶ ಆರಿ, ಗಚ್ಚನ್ನವರ, ದೀಪಕ ಉಂದ್ರಿ, ಡಾ. ಮಾದರ, ಡಾ.ಸಂಗಮೇಶ ಆರಂದ, ಸ್ಮಿತಾ ಗುಂಡಾ, ರೋಹಿಣಿ ಗುಂಡಾ, ರೋಹಿಣಿ ಗುಗ್ಗರಿ, ಶ್ರೀಕುಡಲಿ, ಸಂಧ್ಯಾ ಗುಗ್ಗರಿ, ಈರಣ್ಣ ಕೊಣ್ಣೂರ, ತಬಸೂಮ ಗೋರಿ, ಸೀಮಾ ಕಾಡದೇವರ, ಧರಿತ್ರಿ ಜ್ಯೋಷಿ, ರಮಾ ಕಮಲಾಕರ, ವೈಭವಿ ಮೈಂಡ, ಅಹಲ್ಯಾ ಪಾಟೀಲ ಮತ್ತು ಶಾಲಾ ಶಿಕ್ಷಕರು, ಶಿಕ್ಷಕಿಯರು ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ