ಕುಷ್ಟಗಿ: ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ ಅವರನ್ನು ಆಸ್ತಿಯನ್ನಾಗಿ ಮಾಡಬೇಕು ಎಂದು ನಂದವಾಡಗಿಯ ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದ ವಿಶ್ವಚೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮನುಷ್ಯ ಜನ್ಮ ಅತಿ ಆಸೆ ಪಡುವಂತದ್ದು, ಅಂದುಕೊಂಡಂತೆ ಜೀವನ ನಡಯೊದಿಲ್ಲ, ಹೊಂದಿಕೊಂಡು ಹೋದರೆ ಮಾತ್ರ ಜೀವನ ನಡೆಸಲು ಸಾಧ್ಯ. ಮಾವನ ಜೀವಿತಾವಧಿ ಕುಸಿಯುತ್ತಿದೆ. ಇರುವಷ್ಟು ದಿನ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡುವ ಕನಸ್ಸು ಕಂಡು ನನಸು ಮಾಡುವ ಯಶಸ್ವಿ ಸಮಯ ಕಳೆಯಬೇಕು ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆ ಹುಟ್ಟು ಹಾಕಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಆಡಳಿತ ಮಂಡಳಿಯ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.
ತಾವರಗೇರಾ ಪೊಲೀಸ್ ಠಾಣೆ ಪಿಎಸೈ ನಾಗರಾಜ ಕೊಟಗಿ, ಸಂಸ್ಥೆ ಅಧ್ಯಕ್ಷ ಡಾ. ರಮೇಶ ಬಂಡರಗಲ್, ಶೇಖರಪ್ಪ ಮುತ್ತೇನವರ, ಡಾ. ವೈ.ಜೆ.ಶಿರವಾರ, ಪಿ.ದಿವಾಕರ ಮಾತನಾಡಿದರು.ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕವಿತಾ ಬಂಡರಗಲ್ ವರದಿ ವಾಚನ ಮಾಡಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕ ಮಹಾಂತೇಶ ಬಂಡರಗಲ್ ಸ್ವಾಗತಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ವಿವಿಧ ಕ್ಷೇತ್ರ, ಶಾಲಾ ವಿಭಾಗದ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪೋಷಕರ ಹಾಡಿನ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆಯಿತು.ಸಂಸ್ಥೆ ಉಪಾಧ್ಯಕ್ಷ ಚಂದಪ್ಪ ಕಟಗಿ, ಸಿಆರ್ ಪಿ ಕಾಶಿನಾಥ ನಾಗಲಿಕರ, ಶೇಖರಪ್ಪ ಮಾನಭಾವಿ, ದೊಡ್ಡನಗೌಡ, ಪ್ರಹ್ಲಾದಗೌಡ ಮೆದಿಕೇರಿ, ಜ್ಯೋತಿ ಪಾಟೀಲ್, ಸಂಗಯ್ಯ ಹಿರೇಮಠ, ಮಹೇಶ್ವರಸ್ವಾಮಿ ಹಿರೇಮಠ, ಶಿವಪ್ಪ ದಂಡಿನ್, ಶಿವನಗೌಡ ಪಾಟೀಲ್ ಮತ್ತು ಸಂಸ್ಥೆ ಪದಾಧಿಕಾರಿಗಳು ಶಿಕ್ಷಕರು, ಸಿಬ್ಬಂದಿ, ಪೋಷಕರು ಇದ್ದರು.