ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಸಿ

KannadaprabhaNewsNetwork |  
Published : Oct 14, 2025, 01:00 AM IST
ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯನವರ ಗುರುವಂದನಾ ಕಾರ್ಯಕ್ರಮ | Kannada Prabha

ಸಾರಾಂಶ

300 ವರ್ಷಗಳ ಹಿಂದೆಯೇ ತಾತಯ್ಯನವರು ತಮ್ಮ ತತ್ವ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ದತಿ ವಿರುದ್ದ ಕ್ರಾಂತಿಯನ್ನೇ ಮಾಡಿದ್ದರು, ತಾತಯ್ಯನವರು ಕರ್ನಾಟಕ, ಆಂಧ್ರ ಪ್ರದೇಶವನ್ನು ಸುತ್ತಿ ತಮ್ಮ ತತ್ವಗಳ ಮೂಲಕ ಅಪಾರವಾದ ಭಕ್ತ ಸಮೂಹವನ್ನೇ ಹೊಂದಿದ್ದಾರೆ, ಅಂದು ತಾತಯ್ಯನವರು ತಿಳಿಸಿರುವ ಕಾಲಜ್ಞಾನ ಇಂದಿಗೂ ಪಸ್ತುತ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕಾಲಜ್ಞಾನವನ್ನು ಬರೆದು ಜ್ಞಾನ ಜ್ಯೋತಿ ಬೆಳಗಿದ ಮಹಾ ಜ್ಞಾನಿ ಕೈವಾರ ತಾತಯ್ಯ ರವರು ಪ್ರಸ್ತುತವಾಗಿವೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಡಾ.ಎಚ್.ಕಲಾಭವನದಲ್ಲಿ ಬಲಿಜ ಯುವ ಘರ್ಜನೆ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಿದ್ದ ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯನವರ ಗುರುವಂದನಾ ಕಾರ್ಯಕ್ರಮ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾತಯ್ಯನವರ ಕಾಲಜ್ಞಾನ

300 ವರ್ಷಗಳ ಹಿಂದೆಯೇ ತಾತಯ್ಯನವರು ತಮ್ಮ ತತ್ವ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ದತಿ ವಿರುದ್ದ ಕ್ರಾಂತಿಯನ್ನೇ ಮಾಡಿದ್ದರು, ತಾತಯ್ಯನವರು ಕರ್ನಾಟಕ, ಆಂಧ್ರ ಪ್ರದೇಶವನ್ನು ಸುತ್ತಿ ತಮ್ಮ ತತ್ವಗಳ ಮೂಲಕ ಅಪಾರವಾದ ಭಕ್ತ ಸಮೂಹವನ್ನೇ ಹೊಂದಿದ್ದಾರೆ, ಅಂದು ತಾತಯ್ಯನವರು ತಿಳಿಸಿರುವ ಕಾಲಜ್ಞಾನ ಸರ್ವಕಾಲಕ್ಕೂ ಪಸ್ತುತ ಎಂದು ತಿಳಿಸಿದರು.ಇಂದಿನ ದಿನಗಳಲ್ಲಿ ವಿದ್ಯೆಗೆ ಬಹಳಷ್ಟು ಬೆಲೆ ಇದೆ. ವಿದ್ಯಾರ್ಥಿಗಳು ಒಳ್ಳೆಯ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದುಕೊಂಡು ಉನ್ನತಸ್ಥಾನವನ್ನು ಅಲಂಕರಿಸಬೇಕೆಂದರು, ಪೋಷಕರ ಬಳಿ ಎಷ್ಟೇ ಹಣ-ಆಸ್ತಿಇದ್ದರೂ ಎಲ್ಲವೂ ಖಾಲಿಯಾಗುತ್ತದೆ ಕಡೆಯವರೆವಿಗೂ ಎಲ್ಲರನ್ನು ಕೈ ಹಿಡಿಯುವುದು ವಿದ್ಯೆ ಮಾತ್ರ, ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಸಂಸ್ಕಾರವಂತರನ್ನಾಗಿಸಲು ಹೆಚ್ಚುಒತ್ತು ನೀಡಬೇಕು ಎಂದು ತಿಳಿಸಿದರು.

ರಾಜಕೀಯ ಅವಕಾಶಬಲಿಜ ಸಮುದಾಯವು ವಿಶ್ವಾಸದಿಂದ ಎಲ್ಲರ ಜೊತೆಯಲ್ಲಿ ಬೇರೆಯುವ ಒಂದು ಸಮಾಜ ಬಲಿಜ ಸಮಾಜ ವಾಗಿದೆ. ಆದುದರಿಂದಲೇ ಬಲಿಜ ಸಮುದಾಯದಲ್ಲಿ ಉತ್ತಮರಿಗೆ ರಾಜಕೀಯವಾಗಿ ಅವಕಾಶವನ್ನು ಕಲ್ಪಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.ಬಲಿಜ ಯುವ ಘರ್ಜನೆಯ ಅಧ್ಯಕ್ಷ ಜಿ.ಎ.ಪ್ರದೀಪ್ ಮಾತನಾಡಿ, ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ ಹಿಂದುಳಿದಿದ್ದು, ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಸಮುದಾಯ ಭವನಕ್ಕೆ ಜಾಗ ಗುರ್ತಿಸಿ

ನಂತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ, ಮತ್ತು ಬಲಿಜ ಸುಮಾಯ ಭವನಕ್ಕಾಗಿ 3 ಎಕರೆ ಜಮೀನನ್ನು ಮಂಜೂರು ಮಾಡಿಕೊಡಬೇಕಾಗಿ ಸಮುದಾಯದವರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು ಸಮುದಾಯದವರು ವಿದ್ಯಾರ್ಥಿನಿಲಯ ಮತ್ತು ಸಮುದಾಯ ಭವನ ನಿರ್ಮಿಸಲು ಸರ್ಕಾರಿ ಜಮೀನನ್ನು ಗುರುತಿಸಿಕೊಟ್ಟಲ್ಲಿ ಖಂಡಿತವಾಗಿಯೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರುಇದೇ ವೇಳೆ ನಗರಸಭೆ ಸದಸ್ಯರಾದ ಎ.ಮೋಹನ್, ರಾಜ್ಕುಮಾರ್, ಪದ್ಮವತಮ್ಮ ಜೂಲಪ್ಪ, ಸಾವಿತ್ರಮ್ಮ, ಬಲಿಜ ಯುವ ಘರ್ಜನೆಯ ಉಪಾಧ್ಯಕ್ಷ ಛತ್ರಂ ಎಸ್.ವೆಂಕಟಾದ್ರಿ, ಪ್ರದಾನ ಕಾರ್ಯದರ್ಶಿಗಳಾದ ಜಿ.ಎಸ್.ರಮೇಶ್ ಬಾಬು, ಪಾರ್ವತಮ್ಮ, ಕಾರ್ಯದರ್ಶಿ ಫ್ಯಾಕ್ಟರಿ ರಮೇಶ್, ಸಂಘಟನಾ ಕಾರ್ಯದರ್ಶಿ ಪರಮೇಶ್ವರ, ಖಜಾಂಚಿ ಅನಿಲ್ ಕುಮಾರ್, ಸಹ ಕಾರ್ಯದರ್ಶಿಗಳಾದ ರಾಕೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು. .

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ