ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಆಚಾರ ವಿಚಾರ ತಿಳಿಸದೇ ಹೋದರೆ ಪರಂಪರೆ ಉಳಿಯಲು ಸಾಧ್ಯವಿಲ್ಲ.
ದೇಹಳ್ಳಿ ವ್ಯಾಪ್ತಿಯ ಆರು ಹಳ್ಳಿಗಳ ಹಿಂದೂ ಸಮಾವೇಶಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಆಚಾರ ವಿಚಾರ ತಿಳಿಸದೇ ಹೋದರೆ ಪರಂಪರೆ ಉಳಿಯಲು ಸಾಧ್ಯವಿಲ್ಲ ಎಂದು ಧಾರವಾಡದ ರಾಮಕೃಷ್ಣಾಶ್ರಮದ ವಿಜಯಾನಂದ ಸ್ವಾಮೀಜಿ ಹೇಳಿದರು.
ಆರ್.ಎಸ್.ಎಸ್.ನ ೧೦೦ನೇ ವರ್ಷದ ಪ್ರಯುಕ್ತ ತಾಲೂಕಿನ ದೇಹಳ್ಳಿ ವ್ಯಾಪ್ತಿಯ ಆರು ಹಳ್ಳಿಗಳ ಹಿಂದೂ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗತ್ತಿನಲ್ಲಿ ಹಿಂದುತ್ವ ಕಣ್ಮರೆಯಾದರೆ ಆ ಕ್ಷಣ ಇಡೀ ವಿಶ್ವ ಪ್ರಳಯವಾಗಬೇಕಾಗುತ್ತದೆ ಎಂದರು.
ಕರ್ನಾಟಕ ಪ್ರಾಂತದ ಆರ್.ಎಸ್.ಎಸ್. ಮುಖ್ಯಸ್ಥ ಅರುಣಕುಮಾರ ಮಾತನಾಡಿ, ಇಡೀ ವಿಶ್ವವೇ ಭಾರತದ ಸನಾತನ ಧರ್ಮ, ಇಲ್ಲಿನ ಆರ್ಥಿಕ ನೀತಿಗಳನ್ನು ಗಂಭೀರವಾಗಿ ಗಮನಿಸುತ್ತಿದೆ. ನಮ್ಮ ಮಕ್ಕಳಿಗೆ ಅಂಕವೇ ಪ್ರಧಾನ, ಹಣವೇ ಪ್ರಧಾನ, ಉದ್ಯೋಗವೇ ಮಹತ್ವ ಎಂಬ ಸ್ವಾರ್ಥಲೋಕಕ್ಕೆ ಒಯ್ದು ನಮ್ಮ ಮೌಲಿಕ ಸನಾತನ ಸಂಸ್ಕೃತಿಯಿಂದ ವಿಮುಖರಾಗುವುದಕ್ಕೆ ನಾವು ಕಾರಣರಾಗುತ್ತಿದ್ದೇವೆ. ಜಾತೀಯತೆ ತೊಲಗಿಸಿ ನಾವೆಲ್ಲ ಹಿಂದೂ ಎನ್ನುವ ಭಾವನೆ ಬೆಳೆಸಿಕೊಂಡಾಗ ಮಾತ್ರ ಸಂಘಟನೆ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ವೆಂಕಟ್ರಮಣ ಮುದ್ದೆಪಾಲ, ಶಾಂತಾ ಶಿರೋಡಕರ ಹಾರೈಸಿದರು.
ಮಾತೆಯರು ಭಗವದ್ಗೀತೆ ಪಠಿಸಿದರು. ಬಳಗಾರ ಭಜನಾ ಮಂಡಳಿಯವರು ಭಜನೆ ಪ್ರಸ್ತುತಪಡಿಸಿದರು. ಕಟ್ಟಿಗೆಯ ಕುಣಬಿ ಸಮಾಜದವರಿಂದ ಸುಗ್ಗಿ ಕುಣಿತ ನಡೆಯಿತು. ಬಾಲಕಿಯರು ಸಾಂಸ್ಕೃತಿಕ ನೃತ್ಯ ಪ್ರದರ್ಶನವಾಯಿತು. ಬಾಲಚಂದ್ರ ಕೂಡಗೆ ವಂದಿಸಿದರು. ಗೀತಾ ಆರತಿ ನಡೆಯಿತು.ಆನಗೋಡಿನಲ್ಲಿ ಹಿಂದೂ ಸಮಾವೇಶ
ಸನಾತನ ಧರ್ಮ ಮಾತ್ರ ಈ ಭೂಮಿ ಇರುವವರೆಗೆ ಶಾಶ್ವತವಾಗಿರುತ್ತದೆ. ಇದು ರಾಮಕೃಷ್ಣ ಪರಮಹಂಸರು ನಮ್ಮ ಸನಾತನ ಧರ್ಮದ ಬಗ್ಗೆ ಹೇಳಿದ ಮಾತು ಎಂದು ಗದಗಿನ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಗನ್ನಾಥಾನಂದ ಸ್ವಾಮೀಜಿ ನುಡಿದರು.ಯಲ್ಲಾಪುರದ ಆನಗೋಡಿನಲ್ಲಿ ಆರ್.ಎಸ್.ಎಸ್.ನ ೧೦೦ ವರ್ಷದ ನೆನಪಿನ ಅಂಗವಾಗಿ ಹಮ್ಮಿಕೊಂಡ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರಾಜಾರಾಮ ಬಳ್ಳಾಜೆ ದಿಕ್ಸೂಚಿ ಭಾಷಣ ಮಾಡಿದರು. ಸಾಮೂಹಿಕ ಭಗವದ್ಗೀತಾ ಪಠಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಿತಿ ಅಧ್ಯಕ್ಷ ಶ್ರೀಧರ ಭಟ್ಟ ಬೆಳಖಂಡ ಸ್ವಾಗತಿಸಿದರು. ವೀಣಾ ಭಟ್ಟ ನಿರ್ವಹಿಸಿದರು. ಸಮಿತಿ ಕಾರ್ಯದರ್ಶಿ ನಾಗರಾಜ ಪಟಗಾರ ವಂದಿಸಿದರು. ನಾಗರಾಜ ಗಣಪೂಮನೆ ವಂದೇ ಮಾತರಂ ಗೀತೆ ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.