ಮಕ್ಕಳಿಗೆ ಯೋಗ್ಯ ಸಂಸ್ಕಾರ, ಸದ್ಗುಣಗಳ ಕಲಿಸಿ

KannadaprabhaNewsNetwork |  
Published : Feb 05, 2026, 01:30 AM IST
ತಾಲೂಕಿನ ಬೆಳಗುತ್ತಿ-ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಕಾರಿಪುರ ತಾಲೂಕು ಹೊಸೂರು ವಲಯ ಒಕ್ಕೂಟದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಎಳೆಯ ಬಿದಿರು ಸುಲಭವಾಗಿ ಬಗ್ಗುತ್ತದೆ. ಆದರೆ ಬಲಿತ ಬಿದಿರು ಸುಲಭವಾಗಿ ಬಗ್ಗದು. ಹಾಗೆಯೇ ಎಳೆಯ ಮನಸ್ಸುನ್ನು ತಿದ್ದಿ ತೀಡಬಹುದು, ಬಲಿತ ಮನಸ್ಸನ್ನು ತಿದ್ದುವುದು ಕಷ್ಟ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಪ್ರಾಪಂಚಿಕ ವಾಸನೆಗಳ ತಟ್ಟುವ ಮೊದಲೇ ಯೋಗ್ಯ ಸಂಸ್ಕಾರ ನೀಡಿ, ಅವರನ್ನು ಸದ್ಗುಣಿಗಳನ್ನಾಗಿ ಮಾಡಬೇಕು ಎಂದು ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ನುಡಿದಿದ್ದಾರೆ.

- ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಆಶೀರ್ವಚನ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಎಳೆಯ ಬಿದಿರು ಸುಲಭವಾಗಿ ಬಗ್ಗುತ್ತದೆ. ಆದರೆ ಬಲಿತ ಬಿದಿರು ಸುಲಭವಾಗಿ ಬಗ್ಗದು. ಹಾಗೆಯೇ ಎಳೆಯ ಮನಸ್ಸುನ್ನು ತಿದ್ದಿ ತೀಡಬಹುದು, ಬಲಿತ ಮನಸ್ಸನ್ನು ತಿದ್ದುವುದು ಕಷ್ಟ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಪ್ರಾಪಂಚಿಕ ವಾಸನೆಗಳ ತಟ್ಟುವ ಮೊದಲೇ ಯೋಗ್ಯ ಸಂಸ್ಕಾರ ನೀಡಿ, ಅವರನ್ನು ಸದ್ಗುಣಿಗಳನ್ನಾಗಿ ಮಾಡಬೇಕು ಎಂದು ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ನುಡಿದರು.

ತಾಲೂಕಿನ ಬೆಳಗುತ್ತಿ- ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿಕಾರಿಪುರ ತಾಲೂಕಿನ ಹೊಸೂರು ವಲಯ ಒಕ್ಕೂಟದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಅಂತೆಯೇ ತಂದೆ- ತಾಯಿಗಳು ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರಗಳ ಪಾಠ ಕಲಿಸಬೇಕು. ಅದಕ್ಕೂ ಮುನ್ನ ಪೋಷಕರಲ್ಲೂ ಸಂಸ್ಕಾರವಿರಬೇಕು. ಶಿಕ್ಷಣ ಇಲ್ಲದೇ ಬದುಕಬಹುದು. ಆದರೆ ಸಂಸ್ಕೃತಿ, ಸಂಸ್ಕಾರಗಳ ಅರಿವು ಇಲ್ಲದೇ ಹೋದರೆ ಸಮಾಜ ಬೆಳೆಯದು. ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳ ಜೀವನ ಸಂತೋಷ, ನೆಮ್ಮದಿಯಿಂದ ಕೂಡಿರುತ್ತದೆ. ಮಕ್ಕಳಿಗೆ ವಿದ್ಯೆಯ ಜೊತೆಗೆ ನೈತಿಕ ಮೌಲ್ಯಗಳ ಕುರಿತು ಅರಿವು ಮೂಡಿಸಿದರೆ ಅವರ ವ್ಯಕ್ತಿತ್ವವನ್ನು ಕಾಪಾಡುತ್ತದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಿರಸಿ ಶ್ರೀ ಕ್ಷೇತ್ರದ ಮಂ.ಗ್ರಾ. ನಿರ್ದೇಶಕ ಡಿ.ದಿನೇಶ್‌, ಶ್ರೀ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಎಂ.ಜಿ. ಬಸವರಾಜಪ್ಪ, ಬೆಳಗುತ್ತಿ ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ರಂಗನಾಥ್‌, ಉಪಾಧ್ಯಕ್ಷ ಎಲ್‌.ನಾಗರಾಜ್‌, ತಾ.ಪಂ. ಮಾಜಿ ಸದಸ್ಯ ಬಿ.ಟಿ. ಕುಬೇರಪ್ಪ, ಬೆ.ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಡಿ.ಜಗದೀಶ್‌, ಶಿಕಾರಿಪುರ ಶ್ರೀ. ಕ್ಷೇ. ಮಂ.ಗ್ರಾ. ಯೋಜನಾಧಿಕಾರಿ ನಂಜುಂಡಿ, ಹೊಸೂರು ವಲಯ ಮೇಲ್ವಿಚಾರಕ ಅಶೋಕ್‌ ಮಾತನಾಡಿದರು.

ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷ ಡಿ.ಯೋಗೀಶ್‌ ವಹಿಸಿದ್ದರು. ಉಪಾಧ್ಯಕ್ಷ ಜಿ.ಎಚ್‌. ಪರಮೇಶ್ವರಪ್ಪ, ಕೋಶಾಧಿಕಾರಿ ಸಿ.ಕೆ.ಭೋಜರಾಜ್‌, ಶಿವಮೂರ್ತಿ, ಹೊಸೂರು ವಲಯದ ಒಕ್ಕೂಟದ ಎಲ್ಲ ಸದಸ್ಯರು, ಸೇವಾ ಪ್ರತಿನಿಧಿಗಳು, ಮಹಿಳಾ ಸದಸ್ಯರು, ಬೆಳಗುತ್ತಿ ಮಲ್ಲಿಗೇನಹಳ್ಳಿ ಗ್ರಾಮಸ್ಥರು ಮತ್ತಿತರರಿದ್ದರು.

- - -

-ಚಿತ್ರ:

ನ್ಯಾಮತಿ ತಾಲೂಕಿನ ಬೆಳಗುತ್ತಿ- ಮಲ್ಲಿಗೇನಹಳ್ಳಿಯಲ್ಲಿ ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶ್ರೀ ಸಾನ್ನಿಧ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿ ಮಾರಿಕಾಂಬೆ ಉತ್ಸವ ಮೂರ್ತಿ ಮೆರವಣಿಗೆ
ಗುರಿ ಸಾಧನೆಗೆ ಶ್ರಮ ಮುಖ್ಯ: ಭುವನೇಶ್ವರಿ