ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಕಲಿಸಿ: ನಿಶ್ಚಲಾನಂದ ಸ್ವಾಮೀಜಿ

KannadaprabhaNewsNetwork |  
Published : Oct 19, 2024, 12:26 AM IST
ಫೋಟೋ ಅ.೧೮ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ಇಂದು ಆಳರಸರ ಭಾಷೆಯನ್ನು ವೈಭವೀಕರಿಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕಿದೆ.

ಯಲ್ಲಾಪುರ: ದೇವರ ಅನುಗ್ರಹ ಇರುವ ಕಾರಣ ಸನಾತನ ಧರ್ಮವನ್ನು ನಾಶಪಡಿಸಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ದತ್ತ ಗುರು ಇದೊಂದು ಅವತಾರ. ಬ್ರಹ್ಮ, ವಿಷ್ಣು, ಮಹೇಶ್ವರರ ಸಮನ್ವಯತೆಯ ರೂಪ. ಅವಧೂತ ಪರಂಪರೆಯನ್ನು ಸ್ಥಾಪಿಸಿದ ಮಹಾ ಮಹಿಮರು ಎಂದು ನಿಶ್ಚಲಾನಂದ ಸ್ವಾಮಿಗಳು ನುಡಿದರು.ಅ. ೧೮ರಂದು ಪಟ್ಟಣದ ನಾಯಕನಕೆರೆಯ ತಟದ ಮೇಲೆ ದತ್ತಮಂದಿರದ ಪುನರ್ ನಿರ್ಮಾಣದ ನಿಧಿಕುಂಭ ಸ್ಥಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.ಇಂದು ಆಳರಸರ ಭಾಷೆಯನ್ನು ವೈಭವೀಕರಿಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕಿದೆ. ಸಂಸ್ಕಾರವನ್ನು ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಗುರುಪರಂಪರೆ ವೇದಗಳನ್ನು ಸಿದ್ಧಿಕರಿಸುತ್ತದೆ. ನಮ್ಮದು ಕರ್ಣ ಮೌಖಿಕ ಪರಂಪರೆ. ಇದನ್ನು ಪ್ರತ್ಯಕ್ಷಿಕರಿಸಲು ಸಾಧ್ಯವಿಲ್ಲ. ಇಂದು ಸಂಸ್ಕೃತವನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಅನೇಕ ಲೋಪಗಳಿಗೆ, ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತಿದೆ. ಮಾತೃ ದೇವೋ ಭವ'''' ಎನ್ನುವುದನ್ನು ಇಂದು ಮಮ್ಮಿ ಗಾಡ್ ಎಂದು ವಿಕೃತಗೊಳಿಸಿದ್ದೇವೆ ಎಂದರು. ಉಮ್ಮಚಗಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ.ಸಿ. ನಾಗೇಶ ಮಾತನಾಡಿ, ದೇವಾಲಯ ಯಾಕೆ ಬೇಕು ಎನ್ನುವ ಪ್ರಶ್ನೆ ಹಲವರಲ್ಲಿ ಉದ್ಭವವಾಗಬಹುದು. ದೇವರು ಸರ್ವಾಂತರ್ಯಾಮಿಯಾಗಿದ್ದಾಗ ಆತನಿಗೆ ದೇವಾಲಯದ ಅಗತ್ಯವಿಲ್ಲ ಎಂಬುದು ಅವರ ಅಭಿಮತ. ಗಾಳಿ ಎಲ್ಲ ಕಡೆ ಇದ್ದರೂ ಹೆಚ್ಚಿನ ಗಾಳಿಗಾಗಿ ಪಂಕವನ್ನು ಹಾಕುತ್ತೇವೆ. ಅದರಂತೆ ದೈವಕೃಪೆ ದೊರೆಯಲು ಗುಡಿ ಅಗತ್ಯ. ಜೀವ ಇರುವವನೇ ಪರಮಾತ್ಮ ಎಂದರು.

ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು, ಉದ್ಯಮಿ ದಿಲೀಪ ಭಟ್ಟ ಉಪಸ್ಥಿತರಿದ್ದರು. ಆಚಾರ್ಯ ಗಜಾನನ ಭಟ್ಟ, ವೇ.ಮೂ. ವೆಂಕಟ್ರಮಣ ಭಟ್ಟ ಮೊಟ್ಟೆಗದ್ದೆ ಉಪಸ್ಥಿತರಿದ್ದರು.ರಾಮಚಂದ್ರಾಪುರದ ಪ್ರತಿನಿಧಿ ಮಹೇಶ ಚಟ್ನಳ್ಳಿ ಸ್ವಾಗತಿಸಿದರು. ಸಮಿತಿ ಸದಸ್ಯ ನಾಗರಾಜ ಮದ್ಗುಣಿ ನಿರ್ವಹಿಸಿದರು. ಮಠದ ಪ್ರತಿನಿಧಿ ಎಸ್.ವಿ. ಯಾಜಿ ವಂದಿಸಿದರು.

PREV

Recommended Stories

ಭವಿಷ್ಯದಲ್ಲಿ ಆನೇಕಲ್‌ ಭಾಗ ಜಿಬಿಎ ವ್ಯಾಪ್ತಿಗೆ: ಡಿ.ಕೆ.ಶಿವಕುಮಾರ್‌
ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!