ಶಾಲಾ ಹಂತದಲ್ಲಿ ಪರಿಸರದ ಸುಸ್ಥಿರತೆ ಕಲಿಸಿ: ವೀರಣ್ಣ ಒಡ್ಡೀನ

KannadaprabhaNewsNetwork |  
Published : Jun 26, 2024, 12:36 AM IST
23ಡಿಡಬ್ಲೂಡಿ6ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ಕುರಬಗಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ಆಯೋಜಿಸಿದ್ದ ಮಕ್ಕಳಿಗೆ ಚಿತ್ರಕಲೆ, ಭಾಷಣ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಾಯಿತು.  | Kannada Prabha

ಸಾರಾಂಶ

ಪರಿಸರ ದಿನಾಚರಣೆ ಕೇವಲ ಜೂ. 5ಕ್ಕೆ ಸೀಮಿತವಲ್ಲ. ಇಡೀ ವರ್ಷ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಬದ್ಧರಾಗಿರಬೇಕು. ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು.

ಧಾರವಾಡ:

ಪರಿಸರ ಅಧ್ಯಯನ ವಿಜ್ಞಾನದ ಒಂದು ಭಾಗವಾಗಿದ್ದು, ಪರಿಸರದ ಸುಸ್ಥಿರತೆ ಕಾಪಾಡಲು ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಕಾರ್ಯಪ್ರವೃತ್ತರಾಗಲು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ತಿಳಿಸಿದರು.

ಸಂಘದ ಮಕ್ಕಳ ಮಂಟಪ ಕುರಬಗಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ಆಯೋಜಿಸಿದ್ದ ಮಕ್ಕಳಿಗೆ ಚಿತ್ರಕಲೆ, ಭಾಷಣ ಹಾಗೂ ಉಪನ್ಯಾಸದಲ್ಲಿ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು’ ಉಪನ್ಯಾಸ ನೀಡಿದರು.

ಪರಿಸರ ದಿನಾಚರಣೆ ಕೇವಲ ಜೂ. 5ಕ್ಕೆ ಸೀಮಿತವಲ್ಲ. ಇಡೀ ವರ್ಷ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಬದ್ಧರಾಗಿರಬೇಕು. ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಪರಿಸರದ ಬಗ್ಗೆ ನಿರಂತರ ಜಾಗೃತಿ ಜನರಲ್ಲಿ ಮೂಡಿಸಲು ಬೀದಿ ನಾಟಕ, ಉಪನ್ಯಾಸ, ಚಿತ್ರ ಪ್ರದರ್ಶನ, ಶಿಬಿರಗಳನ್ನು ಆಯೋಜಿಸುವ ಮೂಲಕ ಪರಿಸರ ಪ್ರೇಮಿಗಳನ್ನಾಗಿಸಬೇಕು. ವಿದ್ಯಾರ್ಥಿಗಳು ಶಾಲೆ, ವಾಸಿಸುವ ಮನೆ, ಸುತ್ತಮುತ್ತಲು ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರದ ಸಮತೋಲನ ಕಾಪಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಕಸ ಚೆಲ್ಲುವುದು ನಿಷೇಧಿಸಬೇಕು ಎಂದರು.

ಪರಿಸರ ಸಂರಕ್ಷಣೆಯ ಜತೆಗೆ ಸಾಮಾಜಿಕ ಪರಿಸರದ ಬಗ್ಗೆಯೂ ಪ್ರಜ್ಞೆ ಹೊಂದಿರಬೇಕು. ಕುಟುಂಬದ ಸದಸ್ಯರೊಂದಿಗೆ ನೆರೆಹೊರೆಯವರ ಜತೆಗೆ ಸೌಜನ್ಯದ ನಡುವಳಿಕೆ ಹೊಂದಿರಬೇಕು. ನಾವಾಡುವ ಭಾಷೆಯೂ ಸಾಮಾಜಿಕ ಪರಿಸರದ ಒಂದು ಭಾಗವಾಗಿದೆ. ಸಾಮಾಜಿಕ ಪರಿಸರ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಪತ್ರಕರ್ತ ಚನ್ನಬಸಪ್ಪ ಲಗಮಣ್ಣವರ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಜತೆಗೆ ಪಾಲಕರ ಹಾಗೂ ಸಮಾಜದ ಜವಾಬ್ದಾರಿ ಇದೆ. ಕವಿವಿ ಸಂಘ ಮಕ್ಕಳ ಶ್ರೇಯೋಭಿಲಾಷೆಗಾಗಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಮಕ್ಕಳು ಬಾಲ್ಯದಿಂದಲೇ ಪರಿಸರ ಪ್ರಿಯರಾಗಬೇಕು ಎಂದರು.

ಮುಖ್ಯಾಧ್ಯಾಪಕಿ ಸರಸ್ವತಿ ನಾಯಕ, ಪುಂಡಲೀಕ ಗುಂಡಗೋವಿ, ಮಹಾಂತೇಶ ನರೇಗಲ್, ಕೃಷ್ಣಾ ಅಂಗಡಿ ಮಾತನಾಡಿದರು.

ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಗ್ರಾಪಂ ಅಧ್ಯಕ್ಷರಾದ ನಾಗಮ್ಮ ಮಾಳಗಿಮನಿ ಇದ್ದರು. ಮಧುಮತಿ ಶಿವಪುರ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಗಸ್ತಿ ನಿರೂಪಿಸಿದರು. ಸುಮಂಗಲಾ ಡಿ.ಕೆ. ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?