ಎಳೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಸುನೀತಾ

KannadaprabhaNewsNetwork |  
Published : Dec 14, 2025, 02:30 AM IST
13ಕೆಎಂಎನ್‌ಡಿ-4ಕಿಕ್ಕೇರಿಯ 2ನೇ ವೃತ್ತದಅಂಗನವಾಡಿಕೇಂದ್ರಕ್ಕೆ ಗ್ರಾಮೀಣ ಕೂಟದಿಂದ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.  | Kannada Prabha

ಸಾರಾಂಶ

ಸರ್ಕಾರಿ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಸರ್ಕಾರದ ಜೊತೆಗೆ ದಾನಿಗಳು ನೀಡುವ ಸಹಾಯ ಸಹಕಾರಿಯಾಗಿದೆ. ಮಕ್ಕಳಿಗೆ ಆರೋಗ್ಯ, ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ವಾತಾವರಣ ಕಲ್ಪಿಸಿಕೊಡಬೇಕು.

ಕಿಕ್ಕೇರಿ: ಪುಟಾಣಿ ಮಕ್ಕಳಿಗೆ ಮೊಬೈಲ್‌ಗಳಿಂದ ದೂರವಿರಲು ಕಾಳಜಿ ವಹಿಸಿ. ಗುರು- ಹಿರಿಯರು, ತಂದೆ-ತಾಯಿಗಳನ್ನು ಗೌರವದಿಂದ ಕಾಣುವ ಸಂಸ್ಕಾರವನ್ನು ಬೆಳೆಸುವಂತೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ ತಿಳಿಸಿದರು. ಪಟ್ಟಣದ ನಾಡ ಕಚೇರಿ ಎರಡನೇ ವೃತ್ತದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಗ್ರಾಮೀಣಕೂಟ ಸಂಸ್ಥೆ ಕೇಂದ್ರಕ್ಕೆಅಗತ್ಯ ಪರಿಕರಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಮಾನಸಿಕವಾಗಿ ಖಿನ್ನತೆ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಕ್ಕಳ ಮೆದುಳು ತುಂಬಾ ಸೂಕ್ಷ್ಮವಾಗಿದೆ. ಮೆದುಳಿಗೆ ಆಘಾತವಾಗಿ ಸಿಡುಕು, ಹಠ, ಅಳುವ ಸ್ವಭಾವ ಹೆಚ್ಚಲಿದೆ. ಮಕ್ಕಳನ್ನು ಖುಷಿಪಡಿಸಲು, ಸಮಾಧಾನಪಡಿಸಲು ಮೊಬೈಲ್‌ನ್ನುಅಟಿಕೆಯಂತೆ ಬಳಸುವುದನ್ನು ತಪ್ಪಿಸಿ ಎಂದು ಮನವರಿಕೆ ಮಾಡಿದರು.

ಸರ್ಕಾರಿ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಸರ್ಕಾರದ ಜೊತೆಗೆ ದಾನಿಗಳು ನೀಡುವ ಸಹಾಯ ಸಹಕಾರಿಯಾಗಿದೆ. ಮಕ್ಕಳಿಗೆ ಆರೋಗ್ಯ, ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ವಾತಾವರಣ ಕಲ್ಪಿಸಿಕೊಡಬೇಕು. ಕೇಂದ್ರದಲ್ಲಿ ನೀಡುವ ಪೌಷ್ಟಿಕಾಂಶಭರಿತ ಆಹಾರಗಳಾದ ಚಿಕ್ಕಿ, ಮೊಳಕೆ ಕಾಳು, ಹಸಿರು ತರಕಾರಿ ಪಲ್ಯದಂತಹ ವಿವಿಧ ಬಗೆಯ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಲು ಮಕ್ಕಳಿಗೆ ತಾಕೀತು ಮಾಡಿ ಎಂದರು.

ಗ್ರಾಮೀಣ ಕೂಟದಿಂದ ಚೇರು, ಕಾರ್ಪೆಟ್‌ಗಳಂತಹ ಅಗತ್ಯ ಪರಿಕರಗಳನ್ನು ವಿತರಿಸಿದರು. ಕೂಟದ ಚೇತನ್, ರಕ್ಷಿತ್, ಅರುಣ್, ಸಹನಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಸಹಾಯಕಿ ವರದಮ್ಮ, ಪಾಲಕರಾದ ವಿನೋದ, ಸುಮಿತ್ರಾ, ಅಶ್ವಿನಿ, ಸ್ನೇಹಾ, ದಿವ್ಯಾ, ಚೇತನಾ, ಸಿದ್ದಮ್ಮ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ