ಗ್ರಾಮಾಂತರಕ್ಕೆ ಶಿಕ್ಷಕರ ವೃತ್ತಿ ಅತ್ಯಂತ ಗೌರವವಾದದ್ದು: ಸಚಿವ ಕೆ. ವೆಂಕಟೇಶ್

KannadaprabhaNewsNetwork |  
Published : Oct 01, 2024, 01:15 AM IST
57 | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಶಿಕ್ಷಣ ಇಂದು ಅನೇಕ ವಿಚಾರಗಳಿಗೆ ಚರ್ಚೆಗೆ ಗ್ರಾಸವಾಗುತ್ತಿದೆ, ಆದ್ದರಿಂದ ಶಿಕ್ಷಕರು ಕೂಡ ನೂತನವಾದ ಅಧ್ಯಾಯಗಳನ್ನು, ತಂತ್ರಜ್ಞಾನಗಳನ್ನು, ಅವಿಷ್ಕಾರಗಳನ್ನು ಅರಿತು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ನೂತನ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಸಂಪಾದಿಸಬೇಕು ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರು ವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಶಿಕ್ಷಣ ಇಂದು ಅನೇಕ ವಿಚಾರಗಳಿಗೆ ಚರ್ಚೆಗೆ ಗ್ರಾಸವಾಗುತ್ತಿದೆ, ಆದ್ದರಿಂದ ಶಿಕ್ಷಕರು ಕೂಡ ನೂತನವಾದ ಅಧ್ಯಾಯಗಳನ್ನು, ತಂತ್ರಜ್ಞಾನಗಳನ್ನು, ಅವಿಷ್ಕಾರಗಳನ್ನು ಅರಿತು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಬೇಕು. ನನ್ನ ಆಡಳಿತದ ಅವಧಿಯಲ್ಲಿ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಶಿಕ್ಷಣ ಬಹಳ ಮುಖ್ಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದು ಉನ್ನತ್ತ ವಿದ್ಯಾಭ್ಯಾಸ ಮಾಡಿ ಪ್ರಸಿದ್ದಿ ಹೊಂದುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸದೆ ವಿದ್ಯಾಭ್ಯಾಸ ಕೊಡಿಸುವಲ್ಲಿ ಮುಂದಾಗಬೇಕು ಎಂದರು.ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಸಿ.ಎಸ್. ರಾಮಲಿಂಗು ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಅಪಾರ ಶಿಕ್ಷಣ ಜ್ಞಾನ ಹೊಂದಿ ಅನೇಕ ಹುದ್ದೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದು, ಇವರ ಜನ್ಮದಿನವನ್ನು ಶಿಕ್ಷರ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಚಿವರು ಲ್ಯಾಪ್ ಟಾಪ್ ವಿತರಿಸಿದರು.ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೆಡಿಪಿ ಸದಸ್ಯರಾದ ಶೇಖರ್, ಮಹದೇವ್, ಆರ್. ಎಸ್. ಮಹದೇವ್, ವಿವಿಧ ಸಂಘದ ಅಧ್ಯಕ್ಷರಾದ ಮೋಹನ್, ನವೀನ್ ಕುಮಾರ್, ಮಹದೇವಪ್ಪ, ದೇವರಾಜ್, ಸುರೇಶ, ನಿರಂಜನ್, ಶಿವಮೂರ್ತಿ, ಪರಮಶಿವಯ್ಯ, ವೆಂಕಟೇಶ್, ಗಾಯತ್ರಿ, ಮೇರಿ ಸ್ಟೇಲ್ಲಾ, ನಟರಾಜ್, ಶಿಕ್ಷಕರಾದ ಗಣೇಶ್, ಮುಖಂಡರಾದ ನಿರೂಪ ರಾಜೇಶ್, ಸರಸ್ವತಿ, ಲೋಕೇಶ್, ಮೋಹನ್ ಮಾಸ್ಟರ್, ಡಿ.ಟಿ. ಸ್ವಾಮಿ, ಎಇಇ ವೆಂಕಟೇಶ್ ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ