ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕ ಪಾತ್ರ ಮಹತ್ತರ: ತೇಗಲತಿಪ್ಪಿ

KannadaprabhaNewsNetwork |  
Published : Jan 07, 2024, 01:30 AM IST
ಜೇವರ್ಗಿ: ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪದಕ ಪುರಸ್ಕಾರ ಸಮಾರಂಭವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ಸಾಲಿಮಠ ಉದ್ಘಾಟಿಸಿದರು. ವಿಜಯಕುಮಾರ ತೇಗಲತಿಪ್ಪಿ, ಚನಮಲ್ಲಯ್ಯ ಹಿರೇಮಠ ಇದ್ದರು. ಜೇವರ್ಗಿ:ಅ: ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪದಕ ಪುರಸ್ಕಾರ ಸಮಾರಂಭದಲ್ಲಿ ವಿಜಯಕುಮಾರ ಪಾಟೀಲ ತೆಗಲತಿಪ್ಪಿ, ಎಸ.ಕೆ.ಬಿರಾದಾರ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಹಾಗು ನಿವೃತ್ತ ಶಿಕ್ಷಕರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜೇವರ್ಗಿ ಪಟ್ಟಣದ ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವರ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರು ಹಾಗು ಪಾಲಕರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಮುನ್ನುಡಿ ಬರೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಅವರು ಶನಿವಾರ ಪಟ್ಟಣದ ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪದಕ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದರು.

ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅಲ್ಲಾವುದೀನ್ ಸಾಗರ ಮಾತನಾಡಿ, ಇಂದಿನ ಮಕ್ಕಳು ಮುಂದಿನ ನಾಗರಿಕರು ಎಂಬಂತೆ ಪ್ರತಿಯೊಬ್ಬ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ಸಾಲಿಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎನ್.ಎಸ್. ಮಠ, ಗುಂಡಣ್ಣ ಯರಗೋಳ, ಸರಸ್ವತಿ ನಾಟೀಕಾರ, ನಿಂಗಣ್ಣ ನಾಯಿಕೋಡಿ, ಸಿದ್ರಾಮಪ್ಪ ತಳಕೇರಿ, ಬಸಣ್ಣ ಪೂಜಾರಿ, ಈರಯ್ಯ ಹಿರೇಮಠ, ಪರಸಪ್ಪ ಮಾದರ, ಕೇಸು ಪವಾರ ಇವರನ್ನು ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಎಸ್.ಕೆ. ಬಿರಾದಾರ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುಕುಲ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಚನಮಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ, ಡಾ.ಧರ್ಮಣ್ಣ ಬಡಿಗೇರ, ಎಸ್.ಟಿ. ಬಿರಾದಾರ, ಗುರು ಸಾಲಿಮಠ, ವಿಜಯಕುಮಾರ ಬಂಗಾರಶೆಟ್ಟಿ, ಶಾಂತಲಿಂಗ ಪಾಟೀಲ ಕೋಳಕೂರ, ಶಿವರಾಜ ಅಂಡಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಪಾಲಕರ ಪ್ರತಿನಿಧಿ ಬಸವರಾಜ ಹೊನ್ನಳ್ಳಿ ಕುಮ್ಮನಶಿರಸಗಿ, ಬಿ.ಎಂ. ಪಾಟೀಲ ಕಲ್ಲೂರ (ಕೆ), ಗುರುಕುಲ ಕಾಲೇಜಿನ ಪ್ರಾಂಶುಪಾಲ ಜಗದೀಶ ಉಕ್ಕನಾಳಕರ್, ಮುಖ್ಯ ಶಿಕ್ಷಕಿ ಜ್ಯೋತಿ ಸಾಲಿಮಠ, ರಾಜೇಂದ್ರ ಮಠ, ರಶ್ಮೀ ಕುಲಕರ್ಣಿ, ಮಲ್ಕಮ್ಮ ಹಿರೇಗೌಡ, ನಟರಾಜ ಕುಲಕರ್ಣಿ, ಶ್ರೀಹರಿ ಕರಕಿಹಳ್ಳಿ ಸೇರಿದಂತೆ ಗುರುಕುಲ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌