ಗ್ರಾಮೀಣ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸಿದ ಶಿಕ್ಷಕ ಸಂದೇಶ್

KannadaprabhaNewsNetwork |  
Published : Sep 08, 2026, 02:15 AM IST
ಗ್ರಾಮೀಣ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸಿದ ಶಿಕ್ಷಕ ಸಂದೇಶ್ ಕೆ.ಎಲ್. ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.. | Kannada Prabha

ಸಾರಾಂಶ

ಕಳಸ ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನದ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕಳಸ ಕೆಪಿಎಸ್‌ ಶಿಕ್ಷಕ ಸಂದೇಶ್ ಕೆ.ಎಲ್. ಅವರಿಗೆ 2026–27ನೇ ಸಾಲಿನ ಜಿಲ್ಲಾ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ

ಕನ್ನಡಪ್ರಭ ವಾರ್ತೆ ಕಳಸ

ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನದ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕಳಸ ಕೆಪಿಎಸ್‌ ಶಿಕ್ಷಕ ಸಂದೇಶ್ ಕೆ.ಎಲ್. ಅವರಿಗೆ 2026–27ನೇ ಸಾಲಿನ ಜಿಲ್ಲಾ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.

ಕಳಸ ತಾಲೂಕು ಕಳಕೋಡಿನ ಲಕ್ಷ್ಮಣಚಾರ್ಯ, ಶಾಂತ ಅವರ ತೃತೀಯ ಪುತ್ರರಾದ ಸಂದೇಶ್ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪ್ರಾಥಮಿಕ ಶಿಕ್ಷಣ, ಕುದುರೆಮುಖ, ಶೃಂಗೇರಿ ಬಿಜಿಎಸ್ ನಲ್ಲಿ ಕಾಲೇಜು, ಬಿಇಡಿ ಪಡೆದು, ಕುವೆಂಪು ವಿವಿಯಲ್ಲಿ ಎಂ ಎಸ್ಸಿ ಪೂರ್ಣಗೊಳಿಸಿ ಪ್ರಸ್ತುತ ಕಳಸ ಕೆ ಪಿ ಎಸ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿರುವ ಕುತೂಹಲ ಗುರುತಿಸಿ ಜ್ಞಾನ ಮತ್ತು ಹೊಸ ಆವಿಷ್ಕಾರಗಳಾಗಿ ಪರಿವರ್ತಿ ಸುವುದು ಅವರ ಧ್ಯೇಯ. ವಿಜ್ಞಾನ, ಗಣಿತ, ತಂತ್ರಜ್ಞಾನ, ನವೀನತೆ ಹಾಗೂ ಸೃಜನಶೀಲ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ವಿದ್ಯಾರ್ಥಿಗಳಲ್ಲೂ ವಿಶ್ವಮಟ್ಟದ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.ಕಳಸದಂತಹ ಗ್ರಾಮೀಣ ವಿದ್ಯಾರ್ಥಿಗಳನ್ನು 6 ಬಾರಿ ರಾಷ್ಟ್ರಮಟ್ಟದ ವೈಜ್ಞಾನಿಕ ಸ್ಪರ್ಧೆಗಳಿಗೆ ಕರೆ ದೊಯ್ದು, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಿರುವುದು ಅವರ ಪ್ರಮುಖ ಸಾಧನೆ. ಅಲ್ಲದೆ, ಅಂತಾ ರಾಷ್ಟ್ರೀಯ ಮಟ್ಟದ ಬ್ರಿಕ್ಸ್ ಮ್ಯಾಥ್ಸ್ ಸ್ಪರ್ಧೆಯಲ್ಲೂ ಎಂಟು ವಿದ್ಯಾರ್ಥಿ ಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಿಂದುಳಿದ ಮಕ್ಕಳ ಪಾಲಿಗೆ ಸ್ಫೂರ್ತಿ: ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗುರುತಿಸಿ ವಿಶೇಷ ಕಾಳಜಿ ವಹಿಸುವುದು ಅವರ ಮತ್ತೊಂದು ವಿಶೇಷತೆ. ನಿರಂತರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಆಸಕ್ತಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.ಕೃಷಿಕ ಕುಟುಂಬದಿಂದ ಬಂದು ಶಿಕ್ಷಕನಾಗಿ, ಗ್ರಾಮೀಣ ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿ ಅವರನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕರೆದೊಯ್ದಿರುವುದು ಸಂದೇಶ್ ಅವರ ವಿಶೇಷತೆ.ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ನವೀನತೆ, ವಿದ್ಯಾರ್ಥಿ ಅಭಿವೃದ್ಧಿ ಹಾಗೂ ಶಾಲೆ ಸಮಗ್ರ ಪ್ರಗತಿಗೆ ಸಲ್ಲಿಸಿ ರುವ ಅಮೂಲ್ಯ ಸೇವೆ ಪರಿಗಣಿಸಿ ಅವರಿಗೆ 2026–27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

-- ಬಾಕ್ಸ್--

ಕಳಸದಿಂದ ಹೈದರಾಬಾದ್‌... ನೀತಿ ಆಯೋಗ ವೆಬ್‌ಸೈಟ್‌ವರೆಗೆ! ಯುನಿಸೆಫ್ ವಿಜ್ಞಾನ್ ಆಶ್ರಮ ಹಾಗೂ ಸಮಗ್ರ ಶಿಕ್ಷಣ ಸಹಭಾಗಿತ್ವದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಟಲ್ ಟಿಂಕರಿಂಗ್ ಲ್ಯಾಬ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದು ಸಂದೇಶ್ ಸೇವೆಗೆ ಮತ್ತೊಂದು ಹೆಮ್ಮೆಯ ಗರಿ. ಕಾರ್ಯಾಗಾರದ ಶಿಕ್ಷಕರಿಗೆ ಕೈಪಿಡಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕೈಪಿಡಿ ಪ್ರಸ್ತುತ ನೀತಿ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿವುದು ಕಳಸ ಮಾತ್ರವಲ್ಲದೆ ಇಡೀ ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯ ಸಂಗತಿ.

-- ಕೋಟ್‌-- "ಬಾಳಿಗೆ ಬೆಳಕಾದ ಗುರು ಸಂದೇಶ್ "ಸಂದೇಶ್ ಸರ್ ನಮಗೆ ಪಾಠ ಹೇಳುವ ಗುರುವಷ್ಟೇ ಅಲ್ಲ. ನಮ್ಮ ಬದುಕಿಗೆ ದಾರಿದೀಪ. ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ರೀತಿ ವಿಷಯಗಳನ್ನು ಅವರು ಬೋಧಿಸುವ ರೀತಿ ಅತ್ಯಂತ ವಿಶಿಷ್ಟ. ವಿಜ್ಞಾನ ಪ್ರದ-ರ್ಶನಗಳ ವಿಷಯದಲ್ಲಿ ಅವರ ಪ್ರೋತ್ಸಾಹ ಮರೆಯುವಂತಿಲ್ಲ. ಈ ವರ್ಷ ಅವರು ಪ್ರತಿಯೊಂದು ವಿಜ್ಞಾನ ಪ್ರದರ್ಶನಕ್ಕೂ ನನ್ನ ಬೆನ್ನೆಲುಬಾಗಿದ್ದರು. ನಾನು 3 ದಿನಗಳ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನ ಹಾಗೂ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಅವಕಾಶ ಪಡೆದೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿದ್ದರೂ ಸ್ನೇಹಿತ ನಂತೆ ಆಲಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

- ಶಿವಾನಂದ, ಕರ್ನಾಟಕ ಪಬ್ಲಿಕ್ ಶಾಲೆ, ಕಳಸ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಪಿನಾಥಂನಲ್ಲಿ ₹3 ಕೋಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ: ಶಾಸಕ ಮಂಜುನಾಥ್
ಮನಸಿಗೆ ನೆಮ್ಮದಿ ನೀಡುವ ಶಿಕ್ಷಕ ವೃತ್ತಿ: ದಿನೇಶ ಶೆಟ್ಟಿ