ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದಿಂದ ನಗರದ ಅಲ್ಲಂ ಸುಮಂಗಳಮ್ಮ ಮಹಾವಿದ್ಯಾಲಯ ಸಭಾಂಗಣದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದೇ ನಂಬಲಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರನ್ನು ಅವಲಂಬಿಸಿದೆ. ಹೀಗಾಗಿ ಶಿಕ್ಷಕರಾದವರು ಮಕ್ಕಳಿಗೆ ಬದುಕಿನ ಬಗ್ಗೆ ಭರವಸೆ ಮೂಡಿಸಬೇಕು. ಪಠ್ಯವಷ್ಟೇ ಶಿಕ್ಷಣ ಅಲ್ಲ; ಪಠ್ಯಪುಸ್ತಕ ವಿಷಯಗಳು ಹೊರತಾಗಿಯೂ ಜ್ಞಾನಾರ್ಜನೆಗೆ ಅನೇಕ ಅವಕಾಶಗಳಿವೆ ಎಂಬುದನ್ನು ತಿಳಿಸಿಕೊಡಬೇಕು. ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸುವುದರಿಂದಾಗುವ ಅನುಕೂಲಗಳ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.
ವೀವಿ ಸಂಘದ ಕಾಲೇಜಿನ ವಿದ್ಯಾರ್ಥಿ ಎಂಬ ನನಗಿದೆ. ಬಡತನದ ನಡುವೆ ಓದಿ ಚಿನ್ನದ ಪದಕ ಪಡೆದುಕೊಂಡೆ ಎಂದು ಕಾಲೇಜು ದಿನಗಳನ್ನು ನೆನಪಿಸಿಕೊಂಡರು.ಪ್ರಾಸ್ತಾವಿಕ ಮಾತನಾಡಿದ ವೀವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್ ಅವರು, ಎಲ್ಲ ಸಮುದಾಯಗಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ ವೀವಿ ಸಂಘದ ಕೊಡುಗೆಯನ್ನು ತಿಳಿಸಿದರು. ವೀ ವಿ ಸಂಘದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 28 ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವೀವಿ ಸಂಘದ ಕೋಶಾಧಿಕಾರಿ ಬೈಲುವದ್ದಿಗೇರಿ ಎರಿಸ್ವಾಮಿ, ವೀವಿ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಆಡಳಿತ ಮಂಡಳಿಯ ಸದಸ್ಯರಾದ ಹಚ್ಚೊಳ್ಳಿ ಎಂ. ಶರಣಬಸವನಗೌಡ ,ಕೋರಿ ವಿರುಪಾಕ್ಷಪ್ಪ,ಕಾತ್ಯಾಯನಿ ಮರಿದೇವಯ್ಯ, ಟಿ.ನರೇಂದ್ರಬಾಬು, ಎ.ಡಿಬಿ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಬಿ.ನಾಗನಗೌಡ, ಎಸ್.ಜಿ ಕಾಲೇಜಿನ ನಿವೃತ್ತ ಉಪನ್ಯಾಸಕ ಲಿಂಗರಾಜ ಉಪಸ್ಥಿತರಿದ್ದರು.
ಗಂಧರ್ವ ಶಾಲೆಯ ಮಕ್ಕಳು ವಚನಗಾಯನ ಮಾಡಿದರು. ಎ.ಎಸ್.ಎಂ. ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದರಾಜು, ಉಪನ್ಯಾಸಕ ಡಾ.ಗಂಗಾಧರ ಕಾರ್ಯಕ್ರಮ ನಿರ್ವಹಿಸಿದರು. ವೀವಿ ಸಂಘದ ವಿವಿಧ ಶಾಲಾ ಕಾಲೇಜಿನ ಸಿಬ್ಬಂದಿ