ಶಿಕ್ಷಕರ ಶ್ರಮ ಫಲಿತಾಂಶದಲ್ಲಿ ಪ್ರಕಟ: ಸವಣೂರು ಸೀತಾರಾಮ ರೈ

KannadaprabhaNewsNetwork |  
Published : May 29, 2025, 01:16 AM IST
ಫೋಟೋ: ೨೬ಪಿಟಿಆರ್-ಸವಣೂರು ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈ ಮಾತನಾಡಿದರು.  | Kannada Prabha

ಸಾರಾಂಶ

ಇತ್ತೀಚೆಗೆ ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ನಡೆದ ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮದ ಭೋಜನ ಕೂಟದಲ್ಲಿ ಸಹಕಾರಿ ರತ್ನ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ, ಕೆ. ಸೀತಾರಾಮ ರೈ ಸವಣೂರು ಅಭಿನಂದನಾ ಮಾತುಗಳನ್ನಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

೨೦೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಮಟ್ಟದ ೮,೯ ಮತ್ತು೧೦ನೇ ಸ್ಥಾನ ಪಡೆದಿರುವುದು ಮತ್ತು ಎರಡೂ ಸಂಸ್ಥೆಗಳು ಶೇ. ೧೦೦ ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕರ ಶ್ರಮ ಮಹತ್ತರವಾದದ್ದು ಎಂದು ಸಹಕಾರಿ ರತ್ನ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ, ಕೆ. ಸೀತಾರಾಮ ರೈ ಸವಣೂರು ಹೇಳಿದ್ದಾರೆ. ಇತ್ತೀಚೆಗೆ ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ನಡೆದ ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮದ ಭೋಜನ ಕೂಟದಲ್ಲಿ ಅಭಿನಂದನಾ ಮಾತುಗಳನ್ನಾಡಿದರು.ಸಹಕಾರಿ ರತ್ನ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಸೀತಾರಾಮ ರೈ ೪೯ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸರಸ್ವತಿ ಪೂಜೆ, ಗಣಹೋಮ ನಡೆದು ಮಧ್ಯಾಹ್ನ ಪ್ರಶಾಂತ್ ಮಹಲ್ ನಲ್ಲಿ ಭೋಜನ ಕೂಟ ನಡೆಯಿತು.

ಸೀತಾರಾಮ ರೈ ಅವರ ಪತ್ನಿ ಶ್ರೀಮತಿ ಕಸ್ತೂರಿಕಲಾ ರೈ ವೇದಿಕೆಯಲ್ಲಿದ್ದು ಪರಸ್ಪರ ಹಾರ ಬದಲಾಯಿಸಿ ಕೇಟ್ ಕತ್ತರಿಸಿ ಸಂಭ್ರಮಿಸಿದರು.

ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಸುಂದರ ರೈ, ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜಲಕ್ಷ್ಮಿ, ವಿದ್ಯಾರಶ್ಮಿ ಪಿಯು ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಆಳ್ವ ಇದ್ದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಪ್ರಶಾಂತ್ ಮಹಲ್ ವತಿಯಿಂದ ಸೀತಾರಾಮ ರೈ ದಂಪತಿಯನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ವ್ಯವಸ್ಥಾಪಕ ಸುನಾದ್ ರಾಜ್ ಶೆಟ್ಟಿ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್