ಶೇಷಮೂರ್ತಿ ಅವಧಾನಿ
-ಇಂದು ಸೆ.5, ಶಿಕ್ಷಕರ ದಿನಾಚರಣೆ, ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನೇ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳ ಸ್ನೇಹಿಯಾಗಿ ಪಾಠ ಪ್ರವಚನ ಪ್ರಾಮಾಣಿಕವಾಗಿ ಮಾಡುತ್ತ ಶಾಲೆಗೆ ಬರುವ ಮಕ್ಕಳಲ್ಲೇ ದೇವರನ್ನು ಕಾಣುವ ಶಿಕ್ಷಕರ ಬೋಧನೆಯ ಹಲವು ಕೌಶಲ್ಯಗಳ ಬಗ್ಗೆ ಕನ್ನಡಪ್ರಭದ ಒಳನೋಟ ಇಲ್ಲಿದೆ.
ಗಡಿನಾಡ ಮಕ್ಕಳ ಹೃದಯ ಗೆದ್ದ ಶಿಕ್ಷಕ ರವೀಂದ್ರಮಹಾರಾಷ್ಟ್ರ ಗಡಿ ನಂದಗೂರು ಪ್ರಾಥಮಿಕ ಶಾಲೆ ಶಿಕ್ಷಕ ರವೀಂದ್ರ ರುದ್ರವಾಡಿ, ಗಡಿ ಗ್ರಾಮೀಣ ಭಾಗದಲ್ಲಿ ಸವಾಲುಗಳನ್ನು ಎದುರಿಸುತ್ತ ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ.
ಭಾಷಾ ಸೂಕ್ಷ್ಮತೆ ಹೊಂದಿದ ಗಡಿಗ್ರಾಮದಲ್ಲಿ ಬಹುಭಾಷಾ ಕಲಿಕೆಗೆ ಉತ್ತೇಜನ ನೀಡಿದ್ದಾರೆ. ಗ್ರಾಮ ಸ್ವಚ್ಛತೆ, ಪೌಷ್ಟಿಕ ಆಹಾರ ಜಾಗೃತಿ, ಮಕ್ಕಳ ಹಕ್ಕುಗಳು, ಪ್ಲಾಸ್ಟಿಕ್ ಬಳಕೆಯ ಜಾಗೃತೆ, ಪರಿಸರ ಸಂರಕ್ಷಣೆಯ ಪಾಠಗಳನ್ನು ಎಳವೆಯಲ್ಲೇ ಮಕ್ಕಳಿಗೆ ನೀಡಿದ್ದಾರೆ. ''''''''ಶಾಲಾ ವಿದ್ಯಾರ್ಥಿಗಳ ನೈತಿಕ ಮತ್ತು ಶಿಸ್ತು ಸಂಘಟನಾ ಸಮಿತಿ'''''''' ರಚಿಸಿಕೊಂಡು ಮಕ್ಕಳು ಎಲ್ಲ ಚಟುವಟಿಕೆಗಳನ್ನು ಯೋಜಿಸಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯುವಂತಾಗಿದೆ.
ಮರಳಲ್ಲಿ ತಿದ್ದಿತೀಡಿ ಕಲಿಸುವ ಶಿಕ್ಷಕಿ ಶೈಲಶ್ರೀ
ಮಕ್ಕಳಲ್ಲಿ ಕನ್ನಡ, ಇಂಗ್ಲೀಷ್ ಅಕ್ಷರಾಭ್ಯಾಸದ ಕಲಿಕಾಸಕ್ತಿ ಕೆರಳಿಸಲು ಮರಳು ಬಳಸಿ, ಕೈ ಬೆರಳಿನಿಂದ ಅಲ್ಲಿಯೇ ಮೂಲಾಕ್ಷರ ಪದ ಕಲಿಸುವ ಸಾಹಸ ಮಾಡುತ್ತಿದ್ದಾರೆ. ಈ ಕಲಿಕಾ ಪದ್ಧತಿಯಿಂದ ಕಮರವಾಡಿ ಶಾಲೆಯ ಪ್ರಾಥಮಿಕ ಮಕ್ಕಳಲ್ಲಿ ಹೊಸ ಅಕ್ಷರ ಕಲಿಯಬೇಕೆಂಬ ಹಂಬಲದಲ್ಲಿ ಹೆಚ್ಚು ಮುಂದೆ ಬರುತ್ತಿವೆ.
ಸಂತೆಗೆ ಕಳುಹಿಸಿ ಲೆಕ್ಕ ಕಲಿಸುವ ಜಯಶ್ರೀ
ಸರಳ ಪ್ರಯೋಗ: ಅಗಾಧ ಜ್ಞಾನದ ಮಂಜುಳಾ ಮೇಡಂ
ಶಿಕ್ಷಕ ವೀರಣ್ಣ ಸ್ಮಾರ್ಟ್ ಕ್ಲಾಸ್ ಬಳಸಿ ಪಾಠ
ವೀರಣ್ಣ ವಿಶ್ವಕರ್ಮ, ಚಿತ್ತಾಪುರದ ಕಮರವಾಡಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ, ಮೂರ್ತ ರೂಪದಲ್ಲಿ ಮಕ್ಕಳಿಗೆ ಪಾಠ ಹೇಳುವುದೇ ಆಗಿದೆ. ಸಸ್ಯಗಳ ಪೋಷಣೆಯ ವಿಷಯದ ಪಾಠದಲ್ಲಿ ಸಸ್ಯಗಳನ್ನೇ ಬಳಸಿ, ಗಣಿತದ ಚತುರ್ಭುಜ ಪಾಠದಲ್ಲಿ ಕಿಟ್, ಚಾರ್ಟ್ ಬಳಸಿ ಪಾಠ ಮಾಡುವ ಮೂಲಕ ಮಕ್ಕಳಿಗೆ ವಿಷಯ ಗ್ರಹಿಕೆಯಾಗುವಂತೆ ಮಾಡುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್ ಬಳಸಿ ಪಾಠ ಮಾಡುವ ವೀರಣ್ಣ, ಗಣಿತ, ವಿಜ್ಞಾನದ ಪಾಠಗಳನ್ನೆಲ್ಲ ಸಿದ್ಧಪಡಿಸಿ, ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.ಮಕ್ಕಳಿಗೆ ಕಲಿಕಾಸಕ್ತಿ ಕೆರಳಿಸಿದ ಶಿಕ್ಷಕ ರವಿಚಂದ್ರ ಸಿಬಾರಿ
ಕಮಲಾಪುರದ ಡೊಂಗರಗಾಂವ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರವಿಚಂದ್ರ ಸಿಬಾರಿ, ಮಕ್ಕಳ ಒಡನಾಡಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರು. ವಿದ್ಯಾರ್ಥಿ ಸುರೇಶ್ ಉದ್ದ ಜಿಗಿತ ವೈಯಕ್ತಿಕ ಸ್ಪರ್ಧೆಯಲ್ಲಿ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಈ ಶಿಕ್ಷಕ ಪ್ರಮುಖ ಪಾತ್ರ ವಹಿಸಿದ್ದಾರೆ, ಸೇವಾದಳ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಿರುವ ಇವರು ಸಾಮಾಜಿಕ ಸೇವೆಯಲ್ಲಿ ಕೂಡ ತೊಡಗಿಕೊಂಡಿದ್ದಾರೆ.ಸಾಹಿತ್ಯ ಅರಿವು ಮೂಡಿಸುವ ಅಂಬರಾಯ ಮಡ್ಡೆ
ಕನ್ನಡ ಸಾಹಿತ್ಯ ಅರಿವು ಮೂಡಿಸಿದ ಶಿಕ್ಷಕ ಅಂಬರಾಯ ಮಡ್ಡೆ, ಮಹಾಗಾಂವ ಕ್ರಾಸ್ ಸರ್ಕಾರಿ ಶಾಲೆಯಲ್ಲಿ ಬೋಧಿಸುತ್ತಿದ್ದು, ಚುಟುಕು, ಕವನ, ಕಥೆ ರಚಿಸಲು ಪ್ರೇರಣೆ ನಿಡ್ಡಿದ್ದಾರೆ. ಪದಗಳ ಪರಿಚಯ, ಒತ್ತಾಕ್ಷರ ಅರಿವು, ವಾಕ್ಯಗಳ ಪರಿಪೂರ್ಣ ಅರಿವು, ವ್ಯಾಕರಣ ಕಲಿಕೆಗೆ ಆದ್ಯತೆ ನೀಡಿದ್ದಾರೆ. ಸರ್ಕಾರದ ಕಲಿಕೆಯ ಯೋಜನೆಗೆ ತಕ್ಕಂತೆ ಮಕ್ಕಳಿಗೆ ಸಿದ್ದಪಡಿಸುವದು, ಎಫ್ ಎಲ್ ಏನ್ ಚಟುವಟಿಕೆ, ಕ್ರಿಯಾಯೋಜನೆ, ಕ್ರಿಯಾಸಂಶೋಧನೆ, ಕಲಿಕಾ ಫಲ, ಸಾಮರ್ಥ್ಯಗಳಿಗೆ ದೈನಂದಿನ ಚಟುವಟಿಕೆ ನಿರಂತರ ಜಾರಿಯಲ್ಲಿರಿಸಿದ್ದಾರೆ. ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಆಸಕ್ತಿ ಮೂಡಿಸಿ ಪದ ಸಾಮರ್ಥ್ಯ, ಮಾತುಗರಿಕೆ, ಭಾಷಣ, ಅಶುಭಾಷಣ, ಗ್ರಹಿಕೆಯುಕ್ತ ಕೌಶಲ್ಯ ಬೆಳೆಸಿದ್ದಾರೆ.