ಮಕ್ಕಳ ಪ್ರತಿಭೆ ಹೊರ ತೆಗೆಯಲು ಶಿಕ್ಷಕರು, ಉಪಾನ್ಯಾಸಕರು ಶ್ರಮಿಸಬೇಕು: ಎಸ್.ಎ.ಮಮತ

KannadaprabhaNewsNetwork |  
Published : Sep 07, 2024, 01:40 AM IST
5ಕೆಎಂಎನ್ ಡಿ18 | Kannada Prabha

ಸಾರಾಂಶ

ಶಾಲಾ, ಕಾಲೇಜು ಹಂತಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದ ಮಕ್ಕಳು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾರೆ. ಅದರಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ಕಾರ್‍ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಹೊರಹಾಕಿ ಬಳಿಕ ಭವಿಷ್ಯ ರೂಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಶಾಲಾ-ಕಾಲೇಜುಗಳ ಹಂತದಲ್ಲಿ ನಡೆಯುವಂತ ಕಾರ್‍ಯಕ್ರಮಗಳ ಮೂಲಕ ಹೊರ ತೆಗೆಯುವ ಕೆಲಸವನ್ನು ಶಿಕ್ಷಕರು, ಉಪನ್ಯಾಸಕರು ಮಾಡಬೇಕು ಎಂದು ಪಟ್ಟಣ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಸ್.ಎ.ಮಮತ ಹೇಳಿದರು.

ತಾಲೂಕಿನ ಚಿನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಕಲಾತರಂಗ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲೂ ತನ್ನದೆಯಾದ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಹೊರಹಾಕಲು ಒಂದು ಸೂಕ್ತ ವೇದಿಕೆ ಬೇಕು ಎಂದರು.

ಹಲವು ಸಾಂಸ್ಕೃತಿಕ, ಶೈಕ್ಷಣಿಕ ಕಾರ್‍ಯಕ್ರಮಗಳ ಮೂಲಕ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆ ಹೊರಹಾಕಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಶಾಲಾ, ಕಾಲೇಜು ಹಂತಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದ ಮಕ್ಕಳು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾರೆ. ಅದರಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ಕಾರ್‍ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಹೊರಹಾಕಿ ಬಳಿಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಾಲೆಯಲ್ಲಿ ನಡೆಯುವ ಪ್ರತಿ ಕಾರ್‍ಯಕ್ರಮಕ್ಕೂ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹಾಗೂ ಸಿಇಓ ಸಿ.ಪಿ.ಶಿವರಾಜು ಅವರು ಎಲ್ಲ ರೀತಿ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗುತ್ತಿದೆ ಎಂದು ಬಣ್ಣಿಸಿದರು.

ಕಲಾತರಂಗ ಪ್ರತಿಭಾನ್ವೇಷಣೆ ಕಾರ್‍ಯಕ್ರಮದಲ್ಲಿ ರಂಗೋಲಿ, ಪೆನ್ಸಿಲ್ ಸ್ಕೆಚ್, ಪೇಪರ್ ಕೊಲಾಜ್, ಛದ್ಮವೇಷ, ಗೀತಗಾಯನ, ನೃತ್ಯ, ನಾಟಕ, ಆಶುಭಾಷಣ, ಚರ್ಚೆ, ತರಕಾರಿ ಕೆತ್ತನೆ, ಕಸದಿಂದ ರಸ, ಹೂ ಗುಚ್ಛ ಪ್ರದರ್ಶನ, ಅನಿಲ ರಹಿತ ಅಡುಗೆ ತಯಾರಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆದವು. ತೀರ್ಪುಗಾರರಾಗಿ ರಾಮಕೃಷ್ಣೇಗೌಡ ಎಚ್.ಎನ್, ಡಾ. ರಾಜೇಂದ್ರ ಪ್ರಸಾದ್, ರವಿ ಎ.ಎಸ್, ಪದ್ಮನಾಭ ಆರ್.ಬಿ, ರೇವಣ್ಣ ಎಂ.ಜಿ, ಭಾಗವಹಿಸಿದರು.

ಕಾರ್‍ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು ಸಾಂಸ್ಕೃತಿಕ ಸಮಿತಿಯ ಸಂಯೋಜಕ ವಿ.ಶ್ರೀಧರ, ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚರಣ್ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...