ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಒಕ್ಕಲಿಗರ ಭವನದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೯ನೇ ಜಯಂತಿ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೇರಣೆಯನ್ನು ನೀಡುತ್ತಾರೊ ಅವರು ನಿಜವಾದ ಶಿಕ್ಷಕರಾಗುತ್ತಾರೆ. ವಿದ್ಯಾರ್ಥಿಗಳು ಪರಿಪೂರ್ಣವಾಗಬೇಕಾದರೆ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು. ದೇಶದ ಅತ್ಯುನ್ನತ ಪ್ರಜೆಯಾಗಬೇಕಾದರೆ ಪ್ರಾಥಮಿಕ ಹಂತದ ಶಿಕ್ಷಣ ಅತ್ಯಗತ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ಒಬ್ಬ ಆದರ್ಶ ಶಿಕ್ಷಕ ಮೇಣದ ಬತ್ತಿಯಿದ್ದಂತೆ. ತನ್ನಲ್ಲಿರುವ ಅಸ್ಥಿತ್ವವನ್ನು ತಾನೇ ಕರಗಿಸಿಕೊಂಡು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ದಾರೆ ಎರೆದು ಅವರ ಜೀವನಕ್ಕೆ ದಾರಿ ದೀಪವಾಗಬೇಕು. ಶಿಕ್ಷಣ ಎಂಬ ಪದದಲ್ಲಿರುವ ಅರ್ಥವನ್ನು ಅರ್ಥೈಸಿಕೊಳ್ಳಬೇಕು. ಕಲ್ಲು ಶಿಲೆಯಾಗಬೇಕಾದರೆ ಅನೇಕ ಪೆಟ್ಟು ತಿಂದಿರುತ್ತದೆ. ನಂತರ ಗುಡಿಯಲ್ಲಿ ಸಕಲ ಗೌರವಗಳನ್ನು ಪಡೆದುಕೊಳ್ಳುತ್ತದೆ. ಹಾಗೆಯೆ ವಿದ್ಯಾರ್ಥಿ ಜೀವನದಲ್ಲಿ ಪೆಟ್ಟು ತಿಂದರೆ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಇಂದಿನ ಸಮಾಜದಲ್ಲಿ ಮೂಡನಂಬಿಕೆಗಳು ತಾಂಡವವಾಡುತ್ತಿದ್ದು, ಶಿಕ್ಷಣದಿಂದ ಮೂಡನಂಬಿಕೆಯನ್ನು ಹೋಗಲಾಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ದಿವಗಂತ ಬಿ.ಸಿ.ನಾಗೇಶ್‌ಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದಿಬ್ಬನಹಳ್ಳಿ ಶ್ಯಾಮ್‌ಸುಂದರ್, ಶಿವಕುಮಾರ್, ಶಶಿಕುಮಾರ್, ಜಗದೀಶ್, ಪದ್ಮರಾಜು, ವೇದಾವತಿ, ಸತೀಶ್.ಕೆ , ವೈದ್ಯ ಡಾ. ಶ್ರೀಧರ್, ರಮೇಶ್ ಇತರರಿದ್ದರು.