ದಾಬಸ್‍ಪೇಟೆ: ಶಿಕ್ಷಕರು ಸದಾ ಅಧ್ಯಯನ ಶೀಲರಾಗಿ ಪ್ರತಿಭಾವಂತ ಮಕ್ಕಳನ್ನು ಆಧುನಿಕ ಜಗತ್ತಿಗೆ ಕೊಡುಗೆ ನೀಡಿ ವೃತ್ತಿಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಿದ್ದಗಂಗಾ ಮಠದ ಕಿರಿಯ ಪೂಜ್ಯರು ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಶಾಲಾ ಸಂಸ್ಥಾಪಕ ಅಧ್ಯಕ್ಷ ಅಂಚೆಮನೆ ರಾಜಶೇಖರ್ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಹಾಗೂ ಮೌಲ್ಯಯುತ ಶಿಕ್ಷಣ ನೀಡಲು ಆಡಳಿತ ಮಂಡಳಿ, ಶಿಕ್ಷಕ ವೃಂದ ಸದಾ ಸಿದ್ದವಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಮಠದ ಸದಾಶಿವ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಯ್ಯ, ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಸ್ವರ್ಣಾಂಬ ಪ್ರಾಂಶುಪಾಲೆ ಶಿಲ್ಪ, ವಕೀಲ ಮಂಜುನಾಥ್, ಶಾಲಾ ಸಂಸ್ಥಾಪಕ ಎಸ್.ರುದ್ರಯ್ಯ, ಎನ್‌ಪಿಎ ಸದಸ್ಯ ಪ್ರಕಾಶ್, ಬಿಇಒ ರಮೇಶ್, ಇಸಿಒಗಳಾದ ಸುಚಿತ್ರ, ಗಿರೀಶ್, ಮೆಡಿಟೈಡ್ ಆಸ್ಪತ್ರೆ ವಿಜಯ್, ವಿವಿಧ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಿಶ್ವಂತ್, ನರಸೇಗೌಡ, ಜಬ್ಬೀರ್ ಅಹಮದ್, ವಿರುಪಾಕ್ಷಯ್ಯ, ಜ್ಞಾನಸಂಗಮ ಪಿಯು ಕಾಲೇಜಿನ ಕಾರ್ಯದರ್ಶಿ ಕುಮಾರಸ್ವಾಮಿ. ಲಿಂಗರಾಜು, ಜಗದೀಶ್, ಉದ್ಯಮಿಗಳಾದ ಸತ್ತನಾರಾಯಣ, ರಿಯಾಜ್, ಸತೀಶ್ ವೀರಾಪುರ ಉಪಸ್ಥಿತರಿದ್ದರು.ಪೋಟೋ 2 : ದಾಬಸ್‍ಪೇಟೆ ಪಟ್ಟಣದ ವೀಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಾ ವೈಭವ ವಾರ್ಷಿಕೋತ್ಸವವನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮತ್ತು ಗಣ್ಯರು ಉದ್ಘಾಟಿಸಿದರು.