ಮಕ್ಕಳಿಗೆ ಅರಿವಿನ ಬೆಳಕು ಮೂಡಿಸುವ ಶಿಕ್ಷಕರು

KannadaprabhaNewsNetwork |  
Published : Sep 09, 2025, 01:01 AM IST
8ಕೆಪಿಎಲ್ 22 ಭಾಗ್ಯನಗರ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಇದರ ೨೦ನೇ ವರ್ಷದ ಸಂಭ್ರಮಚರಣೆ | Kannada Prabha

ಸಾರಾಂಶ

ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಬಿತ್ತುವವರು ಶಿಕ್ಷಕರು. ರಾಜಕಾರಣಿಗಳು ದೇಶ ಕಟ್ಟುತ್ತೇವೆ ಅನ್ನಬಹುದು. ಆದರೆ, ನಿಜವಾಗಿ ದೇಶ ಕಟ್ಟುವವರು ಗುರುಗಳು. ರಾಜಕಾರಣಿಗಳು ಆಡಳಿತ ಮಾಡಬಹುದಷ್ಟೆ. ಆದರೆ, ನಿಜವಾಗಿ ದೇಶ ಕಟ್ಟುವ ಕೆಲಸ ಮಾಡುವವರು ಶಿಕ್ಷಕರು.

ಕೊಪ್ಪಳ:

ಭಾರತ ಶಿಕ್ಷಕರಿಗೆ ಉನ್ನತ ಸ್ಥಾನ ನೀಡಿದ್ದು ನೈತಿಕತೆ, ಪ್ರಾಮಾಣಿಕತೆ ಉಳಿಸಿಕೊಳ್ಳಬೇಕು. ಜ್ಞಾನವೇ ದೊಡ್ಡ ಶಕ್ತಿಯಾಗಿದೆ ಎಂದು ಕಪ್ಪತ್ತಗುಡ್ಡದ ಶಿವಕುಮಾರ ಸ್ವಾಮೀಜಿ ಹೇಳಿದರು.

ಭಾಗ್ಯನಗರ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ)ದ ೨೦ನೇ ವರ್ಷದ ಸಂಭ್ರಮಾಚರಣೆ ಹಾಗೂ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಬಿತ್ತುವವರು ಶಿಕ್ಷಕರು. ರಾಜಕಾರಣಿಗಳು ದೇಶ ಕಟ್ಟುತ್ತೇವೆ ಅನ್ನಬಹುದು. ಆದರೆ, ನಿಜವಾಗಿ ದೇಶ ಕಟ್ಟುವವರು ಗುರುಗಳು. ರಾಜಕಾರಣಿಗಳು ಆಡಳಿತ ಮಾಡಬಹುದಷ್ಟೆ. ಆದರೆ, ನಿಜವಾಗಿ ದೇಶ ಕಟ್ಟುವ ಕೆಲಸ ಮಾಡುವವರು ಶಿಕ್ಷಕರು. ಅವರಿಗೆ ತಮ್ಮ ವೃತ್ತಿಯ ಬಗ್ಗೆ ಗೌರವ, ಅಭಿಮಾನ ಇರಲಿ. ಮಕ್ಕಳಿಗೆ ವಿದ್ಯೆ ಕಲಿಸುವುದು ಸರಳವಲ್ಲ, ಅದು ಒಂದು ದೊಡ್ಡ ತಪಸ್ಸು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಅನುದಾನ ಖರ್ಚು ಮಾಡಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸತತ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಸಹ ಜಿಲ್ಲೆಯ ಫಲಿತಾಂಶ ನೋಡಿದರೆ ದುಃಖವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಶ್ವರೀಯ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹಾಗೂ ಜಬೀವುಲ್ಲಾ ಜಾವೇದ್ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಉತ್ತಮ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶೇಷ ಸಾಧನೆಗೈದ ಆಕ್ಸ್‌ಫರ್ಡ್‌ ಶಾಲೆಯ ಸುಮನ್ ಹಾಗೂ ಜ್ಞಾನ ಗಂಗೋತ್ರಿ ಶಾಲೆಯ ಶರಣಪ್ಪ ಮಾಮನಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ ,ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್‌, ಪ್ರವೀಣ, ಮಾಜಿ ಅಧ್ಯಕ್ಷ ಅಲೀಮುದ್ದಿನ್, ಆಕ್ಸ್‌ಫರ್ಡ್‌ ಸಂಸ್ಥೆಯ ಸುಮನ್, ತಾಲೂಕು ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸ್ಮಾ ಗೌರವಾಧ್ಯಕ್ಷ ರಾಘವೇಂದ್ರ ಪಾನಘಂಟಿ ವಹಿಸಿದ್ದರು. ತಾಲೂಕ ಅಧ್ಯಕ್ಷ ಶಾಹಿದ್ ತಹಸಿಲ್ದಾರ್ ಉಪಸ್ತಿತರಿದ್ದರು. ಸುರೇಶ ಕುಂಬಾರ್, ಮುಲ್ಲಾರ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು