ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು

KannadaprabhaNewsNetwork | Published : Sep 6, 2024 1:11 AM

ಸಾರಾಂಶ

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಪುಷ್ಪಾರ್ಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಬಹಳ ಗೌರವವಿದ್ದು, ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಠವಾದದ್ದು. ಅಂಥ ವೃತ್ತಿಯಲ್ಲಿದ್ದ, ಸರ್ವಪಲ್ಲಿ ರಾಧಾಕೃಷ್ಟನ್‌ ಅವರು ಎಲ್ಲರಿಗೂ ಮಾರ್ಗದರ್ಶಕರು ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅತ್ಯುತ್ತಮ ಶಿಕ್ಷಕರಾಗಿದ್ದರು. ತಮ್ಮ ಬದುಕಿನ ಮೂಲಕ ಶಿಕ್ಷಕ ವೃತ್ತಿಯ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರ ಜೀವನಕ್ರಮ ಶಿಕ್ಷಕರಿಗೆ ಇರುವ ಅಪಾರ ಜವಾಬ್ದಾರಿಯನ್ನು ಹೇಳುತ್ತದೆ ಎಂದರು.

ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಠವಾಗಿದ್ದು, ವೃತ್ತಿ ಧರ್ಮಪಾಲನೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುತಾರ ಜವಾಬ್ದಾರಿಯನ್ನು ಡಾ.ರಾಧಾಕೃಷ್ಣನ್ ಅವರು ಸಮರ್ಥವಾಗಿ ನಿಭಾಯಿಸುವ ಜೊತೆಗೆ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಬದಲು ಅಂದು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿದ ಮಹಾನ್ ಪುರುಷ ಎಂದು ಬಣ್ಣಿಸಿದರು.

ಪ್ರತಿಯೊಬ್ಬರ ಜೀವನದಲ್ಲಿ ಗುರುಗಳು ಇದ್ದೇ ಇರುತ್ತದೆ. ಇಂಥ ವೃತ್ತಿಯಲ್ಲಿರುವ ಶಿಕ್ಷಕರು ಸಮಾಜ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ನಾನು ಸಹ ಶಾಸಕನಾಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆ, ಸಂಶೋಧನೆ, ಬರಹಗಳು ಎಂದಿಗೂ ಶಿಕ್ಷಕರಿಗೆ ಆದರ್ಶವಾಗಿದೆ. ಮಕ್ಕಳಿಗೆ ಮೊದಲ ಗುರು ತಂದೆ-ತಾಯಿಯಾಗಿದ್ದು, ನಂತರ ಶಿಕ್ಷಕರೇ ಗುರು ಸ್ಥಾನವನ್ನು ಸಮರ್ಥವಾಗಿ ತುಂಬುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶೇಷ್ಠವಾದ ವೃತ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಿರ್ದೇಶಕ ಆಲೂರು ಪ್ರದೀಪ್, ತಾಪಂ ಮಾಜಿ ಸದಸ್ಯರಾದ ಎಸ್.ರಾಜು, ಪುಟ್ಟಸ್ವಾಮಿ, ಮುಖಂಡರಾದ ಎಎಚ್‌ಎನ್ ಖಾನ್, ಪಿ.ರಾಜಣ್ಣ, ಕಾಗಲವಾಡಿ ಚಂದ್ರು, ಪುಟ್ಟಸ್ವಾಮಿ, ಅರುಣ್‌ಕುಮಾರ್, ಅಯೂಬ್‌ಖಾನ್, ಕರಿನಂಜನಪುರಸ್ವಾಮಿ, ರವಿಗೌಡ, ನಾಗರ್ಜುನಪೃಥ್ವಿ, ನಾಗು ಮೋಹನ್, ಮಹದೇವ್,ಡಿ.ಪಿ. ಪ್ರಕಾಸ್, ಮಹದೇವಯ್ಯ, ರೂಪೇಶ್, ದೊಡ್ಡರಾಯಪೇಟೆ ಕುಮಾರ್, ಮರಿಯಾಲ ಮನು ಇದ್ದರು.

Share this article