ಜೈನ ಧರ್ಮದ ಮಂತ್ರಗಳಿಂದ ಶಾಂತಿ ಬೋಧನೆ

KannadaprabhaNewsNetwork | Published : Nov 11, 2024 1:12 AM

ಸಾರಾಂಶ

ವಿಶ್ವಕ್ಕೆ ಶಾಂತಿ, ಅಹಿಂಸಾ ಧರ್ಮವನ್ನು ಬೋಧಿಸುವ ಜೈನ ಧರ್ಮದ ಮಂತ್ರಗಳು, ಬೋಧನೆ ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ ತೋವಿನಕೆರೆಯಾಗಿದೆ

ಕನ್ನಡಪ್ರಭ ವಾರ್ತೆ ಕೊರಟಗೆರೆವಿಶ್ವಕ್ಕೆ ಶಾಂತಿ, ಅಹಿಂಸಾ ಧರ್ಮವನ್ನು ಬೋಧಿಸುವ ಜೈನ ಧರ್ಮದ ಮಂತ್ರಗಳು, ಬೋಧನೆ ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ ತೋವಿನಕೆರೆಯಾಗಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ತೋವಿನಕೆರೆಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಚಂದ್ರಪ್ರಭಾ ತೀಥಂಕರರ ಜಿನಮಂದಿರದಲ್ಲಿ ಚಂದ್ರನಾಥ ಭವನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಾರತದ ಲಾಂಛನ ,ಸಿಂಹ, ಅಶೋಕ ಸ್ಥಂಭ, ತ್ರಿವರ್ಣ ಧ್ವಜದ ಮಧ್ಯೆ ಚಕ್ರ, ಸೇರಿದಂತೆ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಧರ್ಮ ಪ್ರಚಾರಕರಿಗೆ ಮೋಕ್ಷ ಸಿಗಬೇಕು. ಮನುಕುಲದ ಅಭಿವೃದ್ಧಿಯಾಗಬೇಕು. ಪಂಚ ಸಂದೇಶಗಳ ಪಾಲನೆ ಅಗತ್ಯ ಭಾವನೆ ಬದ್ಧತೆಗಳನ್ನು ವೈಜ್ಞಾನಿಕವಾಗಿ ಕೊಡಬೇಕಿದ್ದು, ಸತ್ಯ ಎನ್ನುವುದು ಕಾನೂನು, ಸನ್ಯಾಸತ್ವದಲ್ಲೂ ಇಲ್ಲ ಎಂದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ, ಸಭಿಕರಿಲ್ಲದೆ ಸಭೆಗೆ ಶೋಭೆ ಇಲ್ಲ, ಧಾರ್ಮಿಕ ಸಭೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದು, ಈ ಬಗ್ಗೆ ಚಿಂತನೆ ಅಗತ್ಯ. ಜೈನ ಸಮಾಜದ ಉಳಿವಿಗೆ ಮಕ್ಕಳು ಅಗತ್ಯವಾಗಿದ್ದು, ಧರ್ಮದ ಉಳಿವಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು. ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿ ಮಾತನಾಡಿ, ಜೈನ ಧರ್ಮದ ಅಹಿಂಸಾ, ಶಾಂತಿ, ಅಸ್ಮಿಯ, ಮೌಲ್ಯಗಳು ಪುರಾತನವಾದದ್ದು. ಇವುಗಳ ಸಾಧನೆಗಳನ್ನು ಪ್ರೇರೇಪಿಸುವಲ್ಲಿ ಧರ್ಮದ ಕೊಡುಗೆ ಅಪಾರವಾಗಿದೆ. ಅಹಿಂಸೆ ಪರಿಚಯಿಸಿದ ಸಾಧನೆ, ಶಾಂತಿ, ಸಾಂಗೀಕ ಬದುಕಿಗೆ, ಸಮಾಜಕ್ಕೆ ಪರಿಚಯಿಸಿದವರು, ಹಾಲು ಜೇನು ಮಿಲನಗೊಂಡಂತಿದೆ. ಜೈನ ಧರ್ಮ, ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಒಡನಾಟ ಹೊಂದಿದೆ ಭಾರತದ ಉಳಿವಿನಲ್ಲಿ ಜೈನ ಧರ್ಮದ ಪಾತ್ರ ಅಪಾರವಾಗಿದ್ದು ಈ ಬಗ್ಗೆ ಚಿಂತನೆ ಅಗತ್ಯ ಎಂದು ಅವರು, ಧರ್ಮ ಎಲ್ಲವನ್ನು ಆಚರಣೆಯಿಂದ ನೋಡಬೇಕಿದೆ ಎಂದರು.ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುವ ಪೀಳಿಗೆಗೆ ಧರ್ಮದ ಬೋಧನೆ ಅಗತ್ಯವಿದೆ. ಜೈನ ಧರ್ಮ ಧಾರ್ಮಿಕ ಆಚರಣೆಯಲ್ಲಿ ಮಹತ್ವ ಹೊಂದಿದ್ದು, ಧೈರ್ಯ ಎನ್ನುವುದು ಅಗತ್ಯವಾಗಿದ್ದು, ಇದಕ್ಕೆ ಕರ್ಮವನ್ನು ನಿಗ್ರಹಿಸುವ ಶಕ್ತಿ ಇದೆ ಎಂದರು. ಸಾಹಿತಿ, ಜಾನಪದ ತಜ್ಞ, ಡಾ.ಎಸ್. ಪಿ. ಪದ್ಮಪ್ರಸಾದ್ ಜೈನ, ತೋವಿನಕೆರೆ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ತೋವಿನಕೆರೆ ಜೈನ ಸಮಾಜದ ವಿಜಯ್‌ಕುಮಾರ್, ವಿಮಲ್ ರಾಜ್, ಚಂದ್ರಪ್ರಭ, ಸುರೇಂದ್ರ ಜೈನ್, ಕುರಂಕೋಟೆ ಟಿ.ಎಸ್.ಪ್ರಕಾಶ್ ಜೈನ್, ಉದ್ಯಮಿಗಳಾದ ಜಿ.ಪಿ.ಉಮೇಶ್‌ಕುಮಾರ್, ಸನ್ಮತಿಕುಮಾರ್, ಎ.ಎನ್ ರಾಜೇಂದ್ರಪ್ರಸಾದ್ ಚಂದ್ರಕೀರ್ತಿ, ಧರಣಿಂದ್ರೆಯ್ಯ, ಸುಗಂಧರಾಜ, ಬೆಳಗುಲಿ ವಿಜಯ್‌ಕುಮಾರ್, ಅರಸಪುರ ಸಂತೋ?, ಡಾ.ನಾಗೇಂದ್ರ ಕುಮಾರ್‌ ಹಾಜರಿದ್ದರು.

Share this article