ಕನಕಪುರ: ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರು ಕೇವಲ ಪಾಠ ಮಾಡಲಷ್ಟೇ ಸೀಮಿತರಾಗದೆ ಶಾಲೆಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳ ಭವಿಷ್ಯ ಉಜ್ವಳಗೊಳಿಸಬೇಕು ಎಂದು ರಾಜ್ಯ ಎಸ್ಸಿ /ಎಸ್ಟಿ ಸರ್ಕಾರಿ ನೌಕರ ಸಂಘದ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್ ತಿಳಿಸಿದರು.
ಬಿಎಲ್ಒ ರಾಜು ಮಾತನಾಡಿ, ನನ್ನ ಶಾಲೆ ನನ್ನ ಜವಬ್ದಾರಿ ಎಂಬ ತತ್ವದಡಿ ವಿದ್ಯಾರ್ಥಿಗಳಿಗೆ ಉತ್ತಮ ವಾತವರಣ ಕಲ್ಲಿಸಿ ಅವರ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ಅನುವು ಮಾಡಿಕೊಟ್ಟು ಶಾಲೆಯಲ್ಲಿ ಉತ್ತಮ ಫಲಿತಾಂಶ ತಂದು ಕೊಟ್ಟು, ವರ್ಗವಾಗಿ ಮತ್ತೊಂದು ಶಾಲೆಗೆ ಹೋಗುತ್ತಿರುವ ರಾಜು ಅವರ ಪ್ರಮಾಣಿಕ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಶಿಕ್ಷಕ ರಾಜೇಶ್ ಮಾತನಾಡಿ, ನನ್ನ ಪೋಷಕರ ಸೇವಾಭಾವನೆಯೇ ನನಗೆ ಪ್ರೇರಣೆ. ನನ್ನ ಸೇವೆಗೆ ಸಹಕರಿಸಿದ ಸಹೋದ್ಯೋಗಿಗಳು, ಒಡನಾಡಿಗಳು, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಸಮಾಜ, ಶಿಕ್ಷಣ ಸೇವೆ ಮುಂದುವರಿಸುವುದಾಗಿ ತಿಳಿಸಿದರು.ಬಿಇಒ ಕಚೇರಿಯ ಅಧೀಕ್ಷಕ ಎಂ.ಸಿ.ನಾಗರಾಜು, ಜಿಲ್ಲಾ ಕೆಡಿಪಿ ಸದಸ್ಯ ಗುರುಮೂರ್ತಿ, ನಿವೃತ್ತ ಶಿಕ್ಷಕ ಆರ್.ವಿ. ನಾರಾಯಣ್, ಶಿಕ್ಷಕಿ ಜಯಲಕ್ಷ್ಮಿ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸತೀಶ್, ರೋಟರಿ ಅಧ್ಯಕ್ಷ ಸಿದ್ಧರಾಜು, ಸಮಾಜ ಸೇವಕ ಎಚ್.ಕೆ.ರವಿ ಇತರರು ಉಪಸ್ಥಿತರಿದ್ದು ಅಭಿನಂದಿಸಿದರು.
ಕನಕಪುರ ತಾಲೂಕಿನ ಬನವಾಸಿ ಸರ್ಕಾರಿ ಶಾಲಾ ಶಿಕ್ಷಕ ರಾಜೇಶ್ ಅವರ ಬೀಳ್ಕೊಡುಗೆ ಸಮಾರಂಭ.