ದಾಬಸ್‍ಪೇಟೆ: ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತೆ, ಆದರೆ, ಗುರುವಿನಿಂದ ಉಸಿರಿರುವವರೆಗೂ ಹೆಸರು ತರುವ ವಿದ್ಯೆ ಬರುತ್ತದೆ. ಶಿಕ್ಷಕ ವೃತ್ತಿ ಪವಿತ್ರವಾದುದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ರೈಲ್ವೆಗೊಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಜಿ.ವಿ.ಕುಮಾರ್ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸಹ ಶಿಕ್ಷಕರ ಮಗನಾಗಿದ್ದು, ಶಿಕ್ಷಕರ ಬಗ್ಗೆ ನನಗೆ ತುಂಬಾ ಹೆಮ್ಮೆ, ಗೌರವವಿದೆ. ನಿವೃತ್ತ ಶಿಕ್ಷಕ ಜಿ.ವಿ.ಕುಮಾರ್ ಸುದೀರ್ಘ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಸಾಧನೆಗೆ ಶಕ್ತಿಯಾಗಿದ್ದಾರೆಂದು ಪ್ರಶಂಸಿಸಿದರು.ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯರಾಗಿ ಹುಟ್ಟುವುದೇ ಭಾಗ್ಯ, ಶಿಕ್ಷಕರಾದರೆ ಅದು ಸೌಭಾಗ್ಯ. ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪ್ರಶಸ್ತಿಗಿಂತ ವಿದ್ಯಾರ್ಥಿಗಳು ನೀಡಿದ ಗುರುವಂದನೆ ಎಲ್ಲದಕ್ಕೂ ಮಿಗಿಲು. ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕ ವೃತ್ತಿಯ ಸಾರ್ಥಕತೆ ಪಡೆಯಲು ಕಾರಣ ಎಂದರು.
ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಂಸ್ಕೃತಿಯ ಪರಿವರ್ತನೆಯ ನೇತಾರರಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಒಂದು ದೊಡ್ಡ ಸಾಧನೆ ಎಂದರು.ಸಮಾರಂಭದಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು, ಮುಖಂಡರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್‍ಸಿಗಳಾದ ಬಿಎಎಲ್ ಕಾಂತರಾಜು, ಈ.ಕೃಷ್ಣಪ್ಪ, ಎನ್‌ಡಿಎ ಅಧ್ಯಕ್ಷ ನಾರಾಯಣಗೌಡ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಸದಸ್ಯ ಪ್ರದೀಪ್ ಕುಮಾರ್, ಹುಸ್ಕೂರು ಗ್ರಾಪಂ ಅಧ್ಯಕ್ಷ ಡಾ.ಬಿ.ರಮೇಶ್, ಮುಖಂಡರಾದ ಅರಿಶಿನಕುಂಟೆ ತಿಮ್ಮರಾಯಪ್ಪ, ಮೈಲನಹಳ್ಳಿ ಪ್ರಶಾಂತ್, ಸಿಎನ್‍ಆರ್ ರಾಮಸ್ವಾಮಿ, ಕೆಂಪರಾಜು, ಸಲೀಂ ಪಾಷಾ, ಬೈರೇಗೌಡ, ಮಂಜುನಾಥ್‍ಗೌಡ ಇತರರಿದ್ದರು.ಪೋಟೋ 3 :ರೈಲ್ವೆಗೊಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಜಿ.ವಿ.ಕುಮಾರ್ ಹಾಗೂ ಅವರ ಪತ್ನಿ ಲೀಲಾಕುಮಾರ್ ಅವರಿಗೆ ಶಾಸಕ ಎನ್.ಶ್ರೀನಿವಾಸ್ ಅಭಿನಂದನೆ ಸಲ್ಲಿಸಿದರು.