ಬೋಧನಾ ಶೈಲಿಯಿಂದ ಮಕ್ಕಳ ಗೆಲ್ಲಬಹುದು

KannadaprabhaNewsNetwork |  
Published : Jun 12, 2025, 04:46 AM IST
ಭೇಟಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಶಿಕ್ಷಕರ ಬೋಧನಾ ಶೈಲಿ ಚನ್ನಾಗಿದ್ದರೆ ಮಕ್ಕಳ ಮನಸ್ಸು ಗೆಲ್ಲಬಹುದಲ್ಲದೇ ಶಾಲೆಯಲ್ಲಿ ಮಕ್ಕಳ ಸಂಖ್ಯೆಯ ಹೆಚ್ಚಳಕ್ಕು ಕಾರಣವಾಗಬಹುದು ಎಂದು ಗದಗ ಜಿಲ್ಲಾ ಡಯಟ್ ತರಬೇತಿ ಕೇಂದ್ರದ ಉಪನ್ಯಾಸಕ ಜಿ.ಡಿ.ದಾಸರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಶಿಕ್ಷಕರ ಬೋಧನಾ ಶೈಲಿ ಚನ್ನಾಗಿದ್ದರೆ ಮಕ್ಕಳ ಮನಸ್ಸು ಗೆಲ್ಲಬಹುದಲ್ಲದೇ ಶಾಲೆಯಲ್ಲಿ ಮಕ್ಕಳ ಸಂಖ್ಯೆಯ ಹೆಚ್ಚಳಕ್ಕು ಕಾರಣವಾಗಬಹುದು ಎಂದು ಗದಗ ಜಿಲ್ಲಾ ಡಯಟ್ ತರಬೇತಿ ಕೇಂದ್ರದ ಉಪನ್ಯಾಸಕ ಜಿ.ಡಿ.ದಾಸರ ಹೇಳಿದರು.ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಬೋಧನಾ ಕಾರ್ಯ ಸಮರ್ಪಕವಾಗಿದ್ದಲ್ಲಿ ವಿದ್ಯಾರ್ಥಿಗಳ ಮನದಾಳದಲ್ಲಿ ಶಿಕ್ಷಕರು ಪ್ರೀತಿ, ಗೌರವ ಭಾವದಿಂದ ನೆಲೆ ಕಾಣಬಹುದು. ಶಿಕ್ಷಕರ ಸರಳತೆಯ ನಡೆ, ನುಡಿ ಹಾಗೂ ಬೋಧನಾ ಶೈಲಿಯನ್ನು ಮಕ್ಕಳು ಅನುಕರಿಸುವತ್ತಾರೆ. ಶಿಕ್ಷಕ ಪವಿತ್ರ ವೃತ್ತಿಯಲ್ಲಿರುವವರು ತಮ್ಮ ಕಾಯಕ ನಿಷ್ಠೆ, ಪೂರ್ವ ತಯಾರಿಯೊಂದಿಗೆ ಗುಣಮಟ್ಟದ ಬೋಧನೆಗೆ ಯೋಗ್ಯರಾಗಬೇಕು ಎಂದರು.ಮಕ್ಕಳ ಒಳ ಮನಸ್ಸನ್ನು, ಚಲನ, ವಲನ, ಅಧ್ಯಯನದ ಆಸಕ್ತಿಯುಳ್ಳ ಮನಸ್ಥಿತಿ ಅರ್ಥೈಸಿಕೊಂಡು ಪಾಠದತ್ತ ಸಾಗಿದರೆ ಉತ್ತಮ. ನಿಮ್ಮೊಳಗಿನ ಬೋಧನಾ ಶಕ್ತಿ ಪ್ರೇರಣಾದಾಯಕವಾಗಿರಬೇಕು. ಅಂದಾಗ ಶಿಕ್ಷಕರಿಗೂ, ಮಕ್ಕಳಿಗೂ ತೃಪ್ತಿಕರ ಭಾವ. ಎಲ್ಲಿ ಉತ್ತಮ ಗುಣಮಟ್ಟದ ಬೋಧನಾ ಪ್ರಕ್ರಿಯೆ ನಡೆಯುತ್ತದೆಯೋ ಅಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗರಲಿದೆ. ಇಂದು ಪಾಲಕ ಹಾಗೂ ವಿದ್ಯಾರ್ಥಿಗಳ ಸಮೂಹ ಜಾಗರೂಕರಾಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಎಂ.ಎಚ್.ಎಂ.ಪ್ರಾಥಮಿಕ, ಪ್ರೌಢಶಾಲೆ, ಪ.ಪೂ ಕಾಲೇಜ್, ಪದವಿ ಕಾಲೇಜಗಳಿಗೆ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಆಲಿಸಿದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾರ್ಗದರ್ಶನದಲ್ಲಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ಬಳಗ ಅತಿಥಿ ಗೌರವಾರ್ಥ ಉಪನ್ಯಾಸಕ ಜಿ.ಡಿ.ದಾಸರನ್ನು ಸನ್ಮಾನಿಸಿ ಗೌರವಿಸಿದರು. ಎಂ.ಎಚ್.ಎಂ.ಪ್ರೌಢ ಶಾಲೆಯ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ, ಉಪನ್ಯಾಸಕ ಟಿ.ಬಿ.ಕರದಾನಿ, ಶಿಕ್ಷಕರಾದ ಎಸ್.ಎಚ್.ನಾಗಣಿ, ಗುಲಾಬಚಂದ ಜಾಧವ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಸಚಿನ ಹೆಬ್ಬಾಳ, ಮಹೇಶ ಗಾಳಪ್ಪಗೋಳ, ಎಂ.ಎಚ್.ಬಳಬಟ್ಟಿ, ಸರಸ್ವತಿ ಈರಗಾರ, ಕೆ.ಜಗದೇವಿ, ಜ್ಯೋತಿ, ಧನರಾಜ ಸಿಂಗಾರಿ, ಶೇಖು ಲಮಾಣಿ, ಸಿದ್ದು ಪಟ್ಟಣಶೆಟ್ಟಿ ಇತರರಿದ್ದರು.ಪೋಟೋ : ಆಲಮಟ್ಟಿ ಎಸ್. ವ್ಹಿ. ವ್ಹಿ.ಶಿಕ್ಷಣ ಸಂಸ್ಥೆಯ ಶಾಲಾ, ಕಾಲೇಜುಗಳಿಗೆ ಶುಕ್ರವಾರ ಅನಿರೀಕ್ಷಿತ ಖಾಸಗಿ ಭೇಟಿ ನೀಡಿದ ಗದಗ ಜಿಲ್ಲಾ ಡಯಟ್ ಉಪನ್ಯಾಸಕ ದಿ.ಡಿ.ದಾಸರ ಅವರಿಗೆ ಎಂ. ಎಚ್. ಎಂ. ಪ್ರೌಢಶಾಲೆಯಲ್ಲಿ ಸಂಸ್ಥೆ, ಶಾಲೆ ಪರವಾಗಿ ಶಿಕ್ಷಕ ಬಳಗ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ