)
ಕನ್ನಡಪ್ರಭ ವಾರ್ತೆ ವಿಜಯಪುರ:
ವಿಜಯಪುರ ಕೇಂದ್ರ ರೈಲ್ವೆ ನಿಲ್ದಾಣದಿಂದ ಮ. 2.50ಕ್ಕೆ ಹೊರಟಿದ್ದ ರೈಲು ಮೂರ್ನಾಲ್ಕು ಕಿಲೋ ಮೀಟರ್ ದೂರ ಪ್ರಮಾಣಿಸುತ್ತಿದ್ದಂತೆ ರೈಲಿನ ಇಂಜಿನ್‌ನಲ್ಲಿ ವೈಫಲ್ಯ ಕಂಡುಬಂದು, ಇಂಜಿನ್ ಬಂದ್ ಆಗಿದೆ. ಈ ವೇಳೆ ರೈಲಿಗೆ ಹಿಂಬದಿಯಿಂದ ಮತ್ತೊಂದು ಇಂಜಿನ್ ಹಚ್ಚಿದ ರೈಲ್ವೆ ಅಧಿಕಾರಿಗಳು ಬಂದ್ ಆಗಿದ್ದ ರೈಲು ಮತ್ತೆ ಚಲಿಸಲು ಅವಕಾಶ ಮಾಡಿಕೊಟ್ಟರು.
ಪರೀಕ್ಷಾರ್ಥಿಗಳ ಆಕ್ರೋಶ:ಇದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ನಗರ ಸಶಸ್ತ್ರ ಮೀಸಲು ಪಡೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಸಿಟಿ ಆರ್ಮ್ಡ್ ಹಾಗೂ ಡಿಸ್ಟ್ರಿಕ್ ಆರ್ಮ್ಡ್) ಪರೀಕ್ಷೆಗಳಿಗೆ ಹಾಜರಾಗಬೇಕಿದ್ದ 500ಕ್ಕೂ ಅಧಿಕ ಪರೀಕ್ಷಾರ್ಥಿಗಳು ಆತಂಕಕ್ಕೊಳಗಾದರು. ಭಾನುವಾರ ನಡೆಯಲಿರುವ ಪರೀಕ್ಷೆ ಬರೆಯಲೆಂದು ಬೆಂಗಳೂರು, ತುಮಕೂರು ಹಾಗೂ ಇತರೆ ಜಿಲ್ಲೆಗಳಿಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ಭಾನುವಾರ ಬೆಳಗ್ಗೆ 10ಕ್ಕೆ ಆರಂಭವಾಗಲಿರುವ ಪರೀಕ್ಷೆಗಳ ಪರೀಕ್ಷಾ ಕೇಂದ್ರಗಳಿಗೆ 9.30ರ ಒಳಗಾಗಿ ತಲುಪಬೇಕಿದೆ. ಹೀಗಾಗಿ ಈ ಸಮಯದಲ್ಲಿ ವಿಜಯಪುರ-ಯಶವಂತಪುರ ರೆಲ್ವೇ ಇಂಜಿನ್ ಬಂದ್ ಆಗಿದ್ದಕ್ಕೆ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ರೈಲಿನಿಂದ ಕೆಳಗಿಳಿದು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿ ಯುವಕರನ್ನು ಸಮಾಧಾನ ಮಾಡಿ ಕಳುಹಿಸಿದರು.