ಬ್ಯಾಡಗಿ: ಇಂದಿನ ತಂತ್ರಜ್ಞಾನ ಆಧರಿತ ಜಗತ್ತಿನಲ್ಲಿ ಹವ್ಯಾಸಿ ರಂಗಭೂಮಿ ಮಾಯವಾಗಿದ್ದು, ವೃತ್ತಿಪರ ಕೆಲ ನಾಟಕ ಕಂಪನಿಗಳು ಮಾತ್ರ ಉಳಿದಿವೆ ಎಂದು ವರ್ತಕ ಸುರೇಶ ಮೇಲಗಿರಿ ಖೇದ ವ್ಯಕ್ತಪಡಿಸಿದರು.
ನಾಟಕವು ದೈನಂದಿನ ಜೀವನದಲ್ಲಿ ಎದುರಿಸುವ ಅಸಂಖ್ಯಾತ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ನಾಟಕಗಳು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಆದಾಗ್ಯೂ ಇತ್ತೀಚಿನ ದೂರದರ್ಶನದಲ್ಲಿ ಬರುವ ಆಕರ್ಷಕ ಸರಣಿ ಧಾರಾವಾಹಿಗಳು ಮತ್ತು ರೋಮಾಂಚನಕಾರಿ ಚಲನಚಿತ್ರಗಳಿಂದ ನಾಟಕಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಭಯ ಕಾಡುತ್ತಿದೆ ಎಂದರು.
ನಾಗರಾಜ ಸದಾರಾಧ್ಯಮಠ ಮಾತನಾಡಿ, ಭಾವನಾತ್ಮಕವಾಗಿ ಸವಾಲುಗಳನ್ನು ಎದುರಿಸುವ ಮತ್ತು ಅಡೆತಡೆಗಳನ್ನು ನಿವಾರಿಸುವ ಪಾತ್ರಗಳನ್ನು ನಾವು ನೋಡಿದಾಗ, ನಮ್ಮ ಸ್ವಂತ ಭಾವನೆಗಳು ಮತ್ತು ಅನುಭವಗಳನ್ನು ಪ್ರತ್ಯಕ್ಷವಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಜನರಲ್ಲಿ ಸಹಾನುಭೂತಿ ಮತ್ತು ತಿಳಿವಳಿಕೆಯನ್ನು ಬೆಳೆಸುವ ವಿಶಿಷ್ಟ ಮಾರ್ಗವಾಗಿ ನಾಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕಾಲದಲ್ಲಿ ಕುಟುಂಬ ಸಮೇತ ನೋಡುತ್ತಿದ್ದ ಶಿಶುನಾಳ ಷರೀಫ, ಯಡೆಯೂರು ಸಿದ್ದಲಿಂಗೇಶ್ವರ ಮಹಾತ್ಮೆ ಇನ್ನಿತರ ಕಲಾತ್ಮಕ ನಾಟಕಗಳು ಕಣ್ಮರೆಯಾಗಿವೆ ಎಂದು ವಿಷಾದಿಸಿದರು.
ಹಾವೇರಿ: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.