ಕೋಳಿ ಫಾರಂ ಪರಿಶೀಲನೆ ನಡೆಸಿದ ತಹಶೀಲ್ದಾರ್

KannadaprabhaNewsNetwork |  
Published : Jun 28, 2024, 12:49 AM IST
ಕೋಳಿಪಾರಂ ಪರಿಶೀಲನೆ ನಡೆಸಿದ ತಹಶೀಲ್ದಾರ್ | Kannada Prabha

ಸಾರಾಂಶ

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೇದ್ಮೆನಹಳ್ಳಿ ಗ್ರಾಮದ ರೈತ ಶಿವರಾಜು ಎಂಬಾತನ ಕೋಳಿ ಫಾರಂಗೆ ತಹಸೀಲ್ದಾರ್ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗ್ರಾಮೀಣ ರೈತ ಪ್ರಾರಂಭ ಮಾಡಿರುವ ಕೋಳಿ ಫಾರಂನಿಂದ ನೋಣಗಳ ಹಾವಳಿ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಸೃಷ್ಟಿ ಆಗಲಿದೆ ಎಂದು ತಹಸೀಲ್ದಾರ್‌ಗೆ ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ಕೊರಟಗೆರೆ ಕಂದಾಯ, ಪಶು, ಆರೋಗ್ಯ ಮತ್ತು ಗ್ರಾಪಂ ನೇತೃತ್ವದ ಅಧಿಕಾರಿಗಳ ತಂಡ ಗೇದ್ಮೆನಹಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದರು.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೇದ್ಮೆನಹಳ್ಳಿ ಗ್ರಾಮದ ರೈತ ಶಿವರಾಜು ಎಂಬಾತನ ಕೋಳಿ ಫಾರಂಗೆ ತಹಸೀಲ್ದಾರ್ ಮಂಜುನಾಥ.ಕೆ, ಪಶು ಇಲಾಖೆಯ ನಿರ್ದೇಶಕ ಡಾ.ನಾಗಭೂಷನ್, ಟಿಹೆಚ್‌ಒ ವಿಜಯಕುಮಾರ್ ಮತ್ತು ಚಿನ್ನಹಳ್ಳಿ ಗ್ರಾಪಂ ಪಿಡಿಒ ಶ್ರೀಧರ್ ಭೆಟಿ ನೀಡಿ ನಂತರ ರೈತರ ಮನೆಗಳಿಗೆ ತೆರಳಿ ಮಾಹಿತಿ ಪಡೆದರು.ಕೋಳಿ ಫಾರಂ ವಿರುದ್ಧ ದೂರು ನೀಡಿದ್ದ ಶಬ್ಬೀರ್‌ಪಾಷ ಎಂಬಾತನ ಮನೆಗೆ ಭೇಟಿ ನೀಡಿ ನೋಣಗಳ ಬಗ್ಗೆ ಕುಟುಂಸ್ಥರಿಂದ ಮಾಹಿತಿ ಪಡೆದು ನಂತರ ಅಕ್ಕಪಕ್ಕದ ರೈತರಿಂದಲೂ ತಹಸೀಲ್ದಾರ್ ಮಾಹಿತಿಪಡೆದರು. ನಂತರ ಗೇದ್ಮೆನಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿ ಕೋಳಿಪಾರಂನ ಪರ ಮತ್ತು ವಿರೋಧದ ಬಗ್ಗೆ ಚರ್ಚಿಸಿ ಸಮೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.ಗೇದ್ಮೆನಹಳ್ಳಿ ರೈತ ಶಿವರಾಜು ಮಾತನಾಡಿ ನನ್ನ 1ಎಕರೆ ಜಮೀನಿನಲ್ಲಿ 4 ಸೀಮೆಹಸು ಮತ್ತು 4000 ಕೋಳಿ ಸಾಕಾಣಿಕೆ ಮಾಡಿದ್ದೇನೆ. ಗೆದ್ಮೆನಹಳ್ಳಿ ಗ್ರಾಮದಿಂದ ನನ್ನ ಕೋಳಿ ಫಾರಂ ಅರ್ಧ ಕೀಮೀ ದೂರವಿದೆ. ಶಬ್ಬೀರ್ ಸರ್ವೆ ಜಮೀನಿನಲ್ಲಿ ಮನೆ ಕಟ್ಟಿಕೊಂಡು ನನಗೇ ವಿನಾಕಾರಣ ತೊಂದರೇ ಕಿರುಕುಳ ನೀಡ್ತಿದ್ದಾರೆ. ರೈತ ಮುಖಂಡ ಎಂದು ಹೇಳಿಕೊಂಡು ರೈತನ ಮೇಲೆಯೇ ದಬ್ಬಾಳಿಕೆ ನಡೆಸೋದು ಎಷ್ಟು ಸರಿ ಎಂದು ನೋವು ವ್ಯಕ್ತಪಡಿಸಿದರು.ಗೆದ್ಮೆನಹಳ್ಳಿ ರೈತಮುಖಂಡ ಶಬ್ಬಿರ್ ಮಾತನಾಡಿ, ಕೋಳಿ ಫಾರಂ ನಲ್ಲಿ ಕೋಳಿಮರಿ ಇದ್ದಾಗ ವಾಸನೆ ಹೆಚ್ಚಾಗಿ ನೋಣಗಳ ಕಾಟ ಇರುತ್ತೇ. ಕೋಳಿ ಇಲ್ಲದೇ ಇರುವಾಗ ಅಧಿಕಾರಿಗಳು ಬಂದರೇ ಪ್ರಯೋಜನಾ ಏನು. ವಾಸ್ತವತೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲವಾದ್ರೇ ನಾನು ಅಡಿಕೆ ತೋಟ ತೆಗೆದು 50000 ಕೋಳಿ ಮರಿ ಸಾಕಾಣಿಕೆ ಮಾಡ್ತಿನಿ. ಆಗ ಗ್ರಾಮಸ್ಥರು ಮತ್ತು ಅಧಿಕಾರಿಗಳು ಪ್ರಶ್ನೆ ಮಾಡಬಾದ್ರು ಎಂದು ಆಕ್ರೋಶ ಹೊರಹಾಕಿದರು.

ಕೋಳಿ ಫಾರಂಗೆ ಗ್ರಾಮಸ್ಥರ ವಿರೋಧವಿಲ್ಲ:ತಹಸೀಲ್ದಾರ್ ಮಂಜುನಾಥ.ಕೆ ಗೇದ್ಮೆನಹಳ್ಳಿ ಗ್ರಾಮಕ್ಕೆ ಜಂಟಿ ಸಮೀಕ್ಷೆಗಾಗಿ ಭೇಟಿ ನೀಡಿದ ವೇಳೆ ಕೋಳಿ ಫಾರಂ ವಿರುದ್ಧವಾಗಿ ಗ್ರಾಮಸ್ಥರು ದೂರು ನೀಡಲಿಲ್ಲ. ಮಾವಿನ ಸುಗ್ಗಿಯ ವೇಳೆ ನೋಣಗಳು ಗ್ರಾಮಕ್ಕೆ ಬರುವುದು ಸರ್ವೆ ಸಾಮಾನ್ಯ. ಕೋಳಿಯಿಂದ ನೋಣಗಳು ಬರ್ತಿಲ್ಲ ಬದಲಾಗಿ ಹಲಸು ಮತ್ತು ಮಾವಿನ ಹಣ್ಣಿನ ಜೊತೆಯಲ್ಲಿ ನೋಣಗಳು ಬರುತ್ತವೆ ಎಂದು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಕೋಟ್‌..

ನಾನೇ ಖುದ್ದಾಗಿ ಕೋಳಿಪಾರಂ ಮತ್ತು ಗೆದ್ಮೇನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದೇನೆ. ಪರಿಸರ ಕಲುಷಿತ ಆಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಿದೆ. ಆರೋಗ್ಯದ ಕಾಳಜಿಯು ಅತಿಮುಖ್ಯ. ಕೋಳಿಪಾರಂ ಸಮಸ್ಯೆಯ ಬಗ್ಗೆ ಜಂಟಿಸಮೀಕ್ಷೆ ವರಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಮಂಜುನಾಥ.ಕೆ. ತಹಶೀಲ್ದಾರ್. ಕೊರಟಗೆರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ