ಕನ್ನಡಪ್ರಭ ವಾರ್ತೆ ಚಾಮರಾಜನಗರ
ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ಅರಣ್ಯ ಸಚಿವೆ ಕೂಂಡ ಸುರೇಖಾ ಹಾಗೂ ಅರಣ್ಯಾಧಿಕಾರಿಗಳು ತೆಲಂಗಾಣದಲ್ಲಿರುವ 400 ಎಕರೆಗೂ ಹೆಚ್ಚು ಅರಣ್ಯ ಸಾಶ ಮಾಡಿದ್ದಾರೆ. ಐಟಿ ಪಾರ್ಕ ನಿರ್ಮಿಸುವ ನೇಪ ಹೇಳಿ ಅರಣ್ಯಕ್ಕೆ ರಾತ್ರೋರಾತ್ರಿ ಯುದ್ದೋಪಾದಿಯಲ್ಲಿ ನಾಶಪಡಿಸಿ ಯಾವುದೇ ಅನುಮತಿ ಇಲ್ಲದೇ ನೂರಾರು ಜೆಸಿಬಿ ಮುಖಾಂತರ ತೆರಳಿ ಅರಣ್ಯ ಹಾಗೂ ಅಲ್ಲಿರುವ ಅಪಾರ ವನ್ಯ ಪ್ರಾಣಿ ಪಕ್ಷಿಗಳ ಮಾರಣ ಹೋಮವಾಗಿದೆ. ಇದು ರಾಜ್ಯವಲ್ಲ, ದೇಶವಲ್ಲ, ವಿಶ್ವವೇ ತಲೆತಗ್ಗಿಸುವಂತ ಹೇಯಕೃತ್ಯವಾಗಿದೆ. ಇಂತಹ ಕ್ರೂರ ಕಾರ್ಯಾಚರಣೆ ಮಾಡಿರುವ ತೆಲಂಗಾಣ ಸರ್ಕಾರವನ್ನು ವಜಾಮಾಡಿ, ಇದಕ್ಕೆ ಸಂಬಂದಪಟ್ಟ ಅರಣ್ಯ ಅಧಿಕಾರಿಗಳು ಪ್ರತಿರೋಧ ಒಡ್ಡದೆ ಕೈಜೋಡಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇವರನ್ನು ಸೇವೆಯಿಂದ ವಜಾಗೊಳಿಸಿ ಅಲ್ಲಿ ಮತ್ತೆ ಅರಣ್ಯ ಬೆಳೆಸುವಂತೆ ಮುನ್ನೆಚ್ಚರಿಕೆ ವಹಿಸಿ ಐಟಿ ಪಾರ್ಕ ನಿರ್ಮಿಸದಂತೆ ಕ್ರಮವಹಿಸಬೇಕು. ಇಂತಹ ಅಕ್ರಮ ವ್ಯವಸ್ಥೆ ನೆಡೆದರೂ ವಿರೋಧ ಪಕ್ಷಗಳು ಸುಮ್ಮನಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ವಿರುದ್ಧವು ತನಿಖೆ ನಡೆಸಿ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್.ಸಿ.ಮಹೇಶ್ ಕುಮಾರ್ ಒತ್ತಾಯಿಸಿದ್ದಾರೆ. ಈ ವೇಳೆ ಹರದನಹಳ್ಳಿ ಮಹದೇವಸ್ವಾಮಿ ಹಾಜರಿದ್ದರು.